ತಮಿಳುನಾಡು:ಸಮಸ್ಯೆಗೆ ಪರಿಹಾರ ನೀಡುವಾಗ ಆ ಸಮಸ್ಯೆಯೇ ಉಲ್ಬಣಿಸಿದರೆ ಹೇಗಾಗಬಹುದು? ಅಂತಹದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ರೇಬೀಸ್ ಶಿಬಿರದ ವೇಳೆ ದಾಳಿ ಮಾಡಿದ ನಾಯಿ ಹುಚ್ಚೆದ್ದು ಶಿಬಿರಕ್ಕೆ ಬಂದಿದ್ದ ನಾಯಿಗಳನ್ನ ಕಚ್ಚಿ ದಾಂಧಲೆ ಮಾಡಿದೆ. ತಮಿಳುನಾಡಿನ ಕೃಷ್ಣಗಿರಿಯ ಪಿಆರ್​ಸಿ ಶಾಲಾ ಆವರಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ಶಿಬಿರದಲ್ಲಿ ಸಾಕಷ್ಟು ಜನ ಸಾಕು ನಾಯಿಗಳನ್ನ ಕರೆತಂದಿದ್ದರು. ಈ ಸಂದರ್ಭ ಲಸಿಕೆ ಹಾಕಲು ತಂದಿದ್ದ ನಾಯಿ ಹುಚ್ಚೆದ್ದು ರಂಪಾಟ ಮಾಡಿ ಶ್ವಾನ ಪ್ರಿಯರಿಗೆ ಶಾಕ್​ ನೀಡಿದೆ. ಅಲ್ಲಿದ್ದ ಇತರೆ ನಾಯಿಗಳನ್ನು ಹಾಗೂ ಜನರನ್ನು ಕಚ್ಚಿದ ನಾಯಿ ಶಿಬಿರದಲ್ಲಿ ಹುಚ್ಚು ಹಿಡಿದಂತೆ ದಾಂಧಲೆ ನಡೆಸಿದೆ. ಅಲ್ಲಿದ್ದವರು ನಾಯಿಯನ್ನು ತಡೆಯಲು ಮುಂದಾದಾಗ ಆ ನಾಯಿ ಜನರ ಮೇಲೆಯೇ ದಾಳಿ ಮಾಡಿದೆ. ಈ ನಾಯಿ, ನಾಲ್ಕು ನಾಯಿಗಳು ಸೇರಿದಂತೆ ಮೂರ್ನಾಲ್ಕು ಜನರ ಮೇಲೆ ದಾಳಿ ಮಾಡಿದೆ.
ರಾಷ್ಟ್ರೀಯ ಕೃಷಿ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಪಶುಸಂಗೋಪನೆ ಇಲಾಖೆ ಆಯೋಜನೆ ಮಾಡಿತ್ತು. ಕಾರ್ಯಕ್ರಮಕ್ಕೆ ಕೃಷ್ಣಗಿರಿ ಜಿಲ್ಲಾಧಿಕಾರಿ ಜಯಚಂದ್ರ ಬಾನುರೆಡ್ಡಿ ಚಾಲನೆ ನೀಡಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
