ಮುಂಬೈ:ಕೆಲವೊಮ್ಮೆ ಅತಿಯಾದ ಪ್ರೀತಿ ನಮ್ಮನ್ನು ಸಂಕಷ್ಟಕ್ಕೆ ತಳ್ಳಿ ಬಿಡುತ್ತದೆ. ಇದಕ್ಕೆ ಉದಾಹರಣೆ ಎನ್ನುವಂತೆ ಘಟನೆಯೊಂದು ನಡೆದಿದೆ. ಶ್ವಾನ ಪ್ರೇಮಿಗಳು ಮನೆಯಲ್ಲಿರುವ ಕುಟುಂಬಸ್ಥರಲ್ಲಿ ಒಬ್ಬರಂತೆ ಪ್ರಾಣಿಗಳುನ್ನು ನೋಡಿಕೊಳ್ಳುತ್ತಾರೆ. ಹೀಗೆ ಎಲ್ಲೇ ಪ್ರಯಾಣ ಬೆಳಸಿದರು ಜತೆಗೆ ಕರೆದುಕೊಂಡು ಹೋಗುತ್ತಾರೆ. ಹೀಗೆ ಪ್ರವಾಸಿಗರೊಬ್ಬರು ನಾಯಿಯನ್ನು ತಾಜ್‌ಮಹಲ್ ನೋಡಲು ಕರೆದುಕೊಂಡು ಹೋಗಿ ಅದರ ಪ್ರಾಣಕ್ಕೆ ಅಪಾಯ ತಂದಿದ್ದಾರೆ.
ಇಬ್ಬರು ಹುಡುಗರು, ಹುಡುಗಿಯರು ತಾಜ್‌ಮಹಲ್ ನೋಡಲು ಬಂದಿದ್ದು, ಈ ವೇಳೆ ತಮ್ಮ ಕಾರನ್ನು ತಾಜ್‌ಮಹಲ್ ಪಶ್ಚಿಮಗೇಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕ್ ಮಾಡಿದ್ದಾರೆ. ಅಲ್ಲದೇ ತಮ್ಮ ಪ್ರೀತಿಯ ಶ್ವಾನವನ್ನು ಕಾರೊಳಗೆಯೇ ಲಾಕ್ ಮಾಡಿದ್ದಾರೆ. ನಂತರ ತಾಜ್ ಮಹಲ್ ನೋಡಿ ಎರಡು ಗಂಟೆ ಕಳೆದು ಬರುವ ವೇಳೆ ಶ್ವಾನ ಶವವಾಗಿದೆ. ಕಾರಿನಲ್ಲೇ ಲಾಕ್ ಮಾಡಿ ಹೋಗಿದ್ದರಿಂದ ಕಾರೊಳಗೆ ಉಸಿರುಕಟ್ಟಿ ಶ್ವಾನ ಪ್ರಾಣ ಬಿಟ್ಟಿದೆ.
Tourist from Haryana came to Agra visit Taj Mahal Tourist had brought a pet dog with him, Parked car in Westgate parking Taj, locked dog in car and went to visit Taj,Dog locked in a car for several hours in humid heat broke its breath@Uppolice@agrapolicepic.twitter.com/uUjm37ZpKu
— Amir qadri (@AmirqadriAgra)July 2, 2023

ಕಾರಿನ ಬಾಗಿಲುಗಳು ಬಂದ್ ಆಗಿದ್ದರಿಂದ ಸೆಕೆ ತಡೆಯಲಾಗದೇ ಅದು ಕಾರಿನಿಂದ ಹೊರಗೆ ಹಾರಲು ಯತ್ನಿಸಿದ ವೇಳೆ ಅದರ ಕತ್ತಿನಲ್ಲಿದ್ದ ಬೆಲ್ಟ್ ಹ್ಯಾಂಡ್‌ಬ್ರೇಕ್‌ಗೆ ಸಿಲುಕಿಕೊಂಡು ಬಿಗಿಗೊಂಡ ಪರಿಣಾಮ ಈ ಅವಘಡ ಸಂಭವಿಸಿರಬಹುದು. ಶ್ವಾನದ ಮರಣೋತ್ತರ ಪರೀಕ್ಷೆ ಗೆ ಕಳುಹಿಸಲಾಗಿದೆ ಎಂದು ತಾಜ್‌ಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ದೇವೇಂದ್ರ ಶಂಕರ್ ಪಾಂಡೆ ಹೇಳಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾರೂ ಕೂಡ ತಮ್ಮ ಶ್ವಾನಗಳನ್ನು ಕಾರಿನ ಒಳಗೆ ಲಾಕ್ ಮಾಡಿ ಹೋಗದಂತೆ ನೆಟ್ಟಿಗರು ಮನವಿ ಮಾಡಿದ್ದಾರೆ.
50 ಲಕ್ಷ ರೂ. ಮೌಲ್ಯದ ವಜ್ರದ ಉಂಗುರ ಕದ್ದು ಶೌಚಾಲಯದ ಕಮೋಡ್‌ಗೆ ಎಸೆದ ಮಹಿಳೆ: ಕಾರಣ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − one =
Remember me
