ಚಂಡೀಗಢ:ಈ ಗಂಡು ಮಗು ಹುಟ್ಟಿ ಬರೀ ಎರಡು ದಿನಗಳಾಗಿದ್ದಷ್ಟೇ, ಆದರೆ ಅಷ್ಟರಲ್ಲೇ ಸಾವು ಕಾಣುವಂತಾಗಿದೆ. ದುರಂತ ಎಂದರೆ ಏನೂ ಅರಿಯದ ಈ ನವಜಾತ ಶಿಶುವಿಗೆ ಕಾರಣವಾಗಿದ್ದು ಒಂದು ಬೀದಿನಾಯಿ. ಖಾಸಗಿ ಆಸ್ಪತ್ರೆಯೊಂದರ ಒಳಗೇ ಬೀದಿನಾಯಿ ಹೊಕ್ಕು ಇಂಥದ್ದೊಂದು ದುರಂತ ಸಾವು ಸಂಭವಿಸಿದೆ.
ಉತ್ತರಪ್ರದೇಶ ಮೂಲದ ಮಹಿಳೆಯೊಬ್ಬರು ಹೆರಿಗೆಯಾದ ಎರಡೇ ದಿನದಲ್ಲೇ ಇಂಥದ್ದೊಂದು ಭಾರಿ ಆಘಾತಕ್ಕೆ ಒಳಗಾಗುವಂತಾಗಿದೆ. ಹರಿಯಾಣದ ಪಾಣಿಪತ್ ಎಂಬಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಪ್ರಕರಣ ನಡೆದಿದೆ. ಹುಟ್ಟಿ ಬರೀ ಎರಡು ದಿನಗಳಾಗಿದ್ದ ಈ ಗಂಡು ಮಗುವನ್ನು ಸೋಮವಾರ ರಾತ್ರಿ ಮಲಗಿಸಿದ್ದು, ಪಕ್ಕದಲ್ಲೇ ಅಜ್ಜಿ ಕೂಡ ಮಲಗಿದ್ದರು. ಮಧ್ಯರಾತ್ರಿಯ ಸುಮಾರಿಗೆ ಆಸ್ಪತ್ರೆಯೊಳಗೆ ಹೊಕ್ಕ ಬೀದಿನಾಯಿ ಕಚ್ಚಿಕೊಂಡು ಹೋಗಿದೆ.
ಮಗು ಇಲ್ಲದಿರುವುದು ಸ್ವಲ್ಪಹೊತ್ತಿನಲ್ಲಿ ಗಮನಕ್ಕೆ ಬಂದಿದೆ. ಆಗ ಸಂಬಂಧಿಕರು ಹುಡುಕಾಡಲು ಆರಂಭಿಸಿದಾಗ ಮಗುವನ್ನು ನಾಯಿ ಕಚ್ಚಿಕೊಂಡು ಹೋಗಿದ್ದು ಸಿಸಿಟಿವಿ ದೃಶ್ಯಾವಳಿಯಿಂದಾಗಿ ಗೊತ್ತಾಗಿದೆ. ಬಳಿಕ ಹೊರಗೆ ಸಿಕ್ಕ ಮಗುವನ್ನು ಡಾಕ್ಟರ್ ಬಳಿಗೆ ಕರೆದೊಯ್ದಾಗ ಅವರು, ಅದಾಗಲೇ ಮೃತಪಟ್ಟಿದ್ದನ್ನು ದೃಢಪಡಿಸಿದ್ದಾರೆ.
‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

ಈ ಕಾರು ಕಾಣಿಸಿದ್ರೆ ಕೂಡಲೇ ತಿಳಿಸಿ; ವಂಚಕರ ಪತ್ತೆಗಿಳಿದ ಪೊಲೀಸರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + three =
Remember me
