ನವದೆಹಲಿ:ಐಎಎಸ್ ಅಧಿಕಾರಿಯೊಬ್ಬರ ನಾಯಿ ನಾಪತ್ತೆಯಾಗಿದೆ. ಇದೀಗ ಕಾಣೆಯಾಗಿರುವ ನಾಯಿಗಾಗಿ ಪೊಲೀಸರು ಎರಡು ದಿನದಿಂದ ಹುಡುಕಾಟ ನಡೆಸುತ್ತಿದ್ದಾರೆ. ಗ್ವಾಲಿಯರ್‌ನ ಬಿಲುವಾ ಪ್ರದೇಶದಿಂದ ನಾಯಿ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಸದ್ಯ ಎರಡು ದಿನ ಕಳೆದರೂ ನಾಪತ್ತೆಯಾಗಿರುವ ನಾಯಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು, ನಾಯಿ ಕಾಣೆಯಾದ ಬಗ್ಗೆ ಮಾಹಿತಿ ಬರೆದಿರುವ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಇದನ್ನೂ ಓದಿ:ಸ್ಟೇರಿಂಗ್ ಲಾಕ್; ಕಬ್ಬಿನ ಗದ್ದೆಗೆ ನುಗ್ಗಿದ ಕೆಎಸ್​​ಆರ್​ಟಿಸಿ ಬಸ್
MP | The dog of an IAS officer went missing from Gwalior's Bilua area, police and administration are in search of the missing dog.Some people came to a dhaba in Bilua area when their dog escaped by jumping from their car. They were going from Delhi to Bhopal. A complaint has…pic.twitter.com/aFXU7m0mqj— ANI MP/CG/Rajasthan (@ANI_MP_CG_RJ)April 3, 2023
MP | The dog of an IAS officer went missing from Gwalior's Bilua area, police and administration are in search of the missing dog.Some people came to a dhaba in Bilua area when their dog escaped by jumping from their car. They were going from Delhi to Bhopal. A complaint has…pic.twitter.com/aFXU7m0mqj
ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಧ್ಯಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿಯ ಎರಡು ನಾಯಿಗಳನ್ನು ದೆಹಲಿಯಿಂದ ಭೋಪಾಲ್‌ಗೆ ಕರೆದೊಯ್ಯಲಾಗುತ್ತಿತ್ತು. ನಾಯಿಯನ್ನು ಕರೆದೊಯ್ಯುತ್ತಿದ್ದ ಸಿಬ್ಬಂದಿ ಊಟಕ್ಕಾಗಿ ಡಾಬಾದ ಬಳಿ ಕಾರು ನಿಲ್ಲಿಸಿದ್ದಾರೆ. ಸಿಬ್ಬಂದಿ ಊಟ ಮಾಡುತ್ತಿದ್ದಾಗ ಎರಡೂ ನಾಯಿಗಳು ಕಾರಿನಿಂದ ಜಿಗಿದು ಓಡಿ ಹೋಗಿವೆ.ಇದನ್ನೂ ಓದಿ:ನಿದ್ರೆಗೆ ಜಾರಿದ ಸಿದ್ದರಾಮಯ್ಯ; ತಟ್ಟಿ ಎಬ್ಬಿಸಿದ ಡಿಕೆಶಿ!
ಸತತ ಹುಡುಕಾಟದ ನಂತರ ಕಾಣೆಯಾಗಿರುವ ಎರಡು ನಾಯಿಗಳಲ್ಲಿ ಒಂದು ನಾಯಿ ಪತ್ತೆಯಾಗಿದೆ. ಇದೀಗ ನಾಪತ್ತೆಯಾಗಿರುವ ಇನ್ನೊಂದು ನಾಯಿಗಾಗಿ ಪೊಲೀಸರಿಂದ ಶೋಧಕಾರ್ಯ ಮುಂದುವರೆದಿದೆ. ಸದ್ಯ ಪೊಲೀಸರು ಗ್ವಾಲಿಯರ್ ಮೃಗಾಲಯದ ಸಿಬ್ಬಂದಿಯನ್ನು ಕರೆದೊಯ್ದು ನಾಯಿಯನ್ನು ಹುಡುಕುತ್ತಿದ್ದಾರೆ. ಕಾಣೆಯಾದ ನಾಯಿಯನ್ನು ಹುಡುಕಿಕೊಟ್ಟವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಉಪವಿಭಾಗಾಧಿಕಾರಿ ವಿವೇಕ್ ಶರ್ಮಾ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − fifteen =
Remember me
