ಭೂಪಾಲ್:ನಾಯಿಯೊಂದರ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ಉಂಟಾದ ವ್ಯಾಜ್ಯ ಕಡೆಗೆ ನಾಯಿಯ ಡಿಎನ್​ಎ ಪರೀಕ್ಷೆಯಲ್ಲಿ ಸುಖಾಂತ್ಯಗೊಂಡ ಘಟನೆ ಮಧ್ಯಪ್ರದೇಶದ ಹೋಶಂಗಾಬಾದ್ (ನರ್ಮದಾಪುರ) ನಲ್ಲಿ ನಡೆದಿದೆ.
ಲ್ಯಾಬ್ರಡಾರ್ ತಳಿಯ ಶ್ವಾನವೊಂದು ಕಳುವಾಗಿದೆ ಎಂದು ಕಳೆದ ತಿಂಗಳು ಹೋಶಂಗಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಶಹಬಾದ್ ಖಾನ್ ಎನ್ನುವರು ದೂರು ದಾಖಲಿಸಿದ್ದರು. ಇದೇ ವೇಳೆ ಕಾರ್ತಿಕ್ ಎನ್ನುವರು ಕೂಡ ತನ್ನದೂ ನಾಯಿ ಕಳುವಾಗಿದೆ ಎಂದು ಅದೇ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ನಿಜವಾದ ವಿವಾದ ಶುರುವಾಗಿದ್ದು, ನಾಯಿ ಸಿಕ್ಕ ಮೇಲೆ.
ಇದನ್ನೂ ಓದಿ:ಬೌನ್ಸಿ ಬೈಕ್​ ಬಳಸಿ ಸುಲಿಗೆ, ಕಳ್ಳತನ ಮಾಡುತ್ತಿದ್ದವರು ಪೊಲೀಸ್ ಬಲೆಗೆ
ಹೌದು ನಾಯಿ ಸಿಕ್ಕ ಮೇಲೆ ಕಾರ್ತಿಕ್ ಹಾಗೂ ಶಹಬಾದ್ ಖಾನ್ ಅವರು ಸಿಕ್ಕಿರುವ ನಾಯಿಯ ಮಾಲೀಕ ತಾನು ಎಂದು ಪರಸ್ಪರ ಜಗಳವಾಡಿಕೊಂಡಿದ್ದರು. ಇದರಿಂದ ಗೊಂದಲಕ್ಕೆ ಒಳಗಾದ ಪೊಲೀಸರು, ನಾಯಿಯ ಮೂಲವನ್ನು ಶೋಧಿಸಿದ್ದಾರೆ. ಶಹಬಾದ್ ಖಾನ್ ಹೇಳುವ ಪ್ರಕಾರ ನಾಯಿಯ ಮೂಲ ಹೈದರಾಬಾದ್ ಎಂದು ಗೊತ್ತಾದ ತಕ್ಷಣ ಹೈದರಾಬಾದ್​ನಲ್ಲಿ ಅದರ ಡಿಎನ್​ಎ ಪರೀಕ್ಷೆ ಮಾಡಿಸಿದ್ದಾರೆ.
ಡಿಎನ್​ಎ ಪರೀಕ್ಷೆಯಿಂದ ನಾಯಿ ಶಹಬಾದ್ ಖಾನ್​ ಅವರಿಗೇ ಸೇರಿದ್ದು ಎಂದು ಖಚಿತವಾದ ನಂತರ ಆ ಮುದ್ದು ನಾಯಿಯನ್ನು ಪೊಲೀಸರು ಮಾಲೀಕನಿಗೆ ಹಸ್ತಾಂತರಿಸಿದ್ದಾರೆ. ಅಚ್ಚರಿಯಂದರೆ, ಇಷ್ಟೇಲ್ಲಾ ಮಾಡಲು ಶಹಬಾದ್ ಖಾನ್ 50 ಸಾವಿರ ರೂಪಾಯಿ ಖರ್ಚು ಮಾಡಿದ್ದರಂತೆ. (ಏಜೇನ್ಸಿಸ್).
ಆರಂಭವಾಗಿ ಒಂದೇ ತಿಂಗಳಲ್ಲಿ ಬಾಗಿಲು ಮುಚ್ಚಿದ ದೇಶದ ಮೊದಲ ಸೆಕ್ಸ್​ ಆಟಿಕೆಗಳ ಅಂಗಡಿ! ಕಾರಣ ಏನು ಗೊತ್ತಾ?

Video: 75 ವರ್ಷದ ಅಜ್ಜಿ ಕೊಟ್ಟ ಏಟಿಗೆ 39 ವರ್ಷದ ಯುವಕ ಮಟಾಶ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
