ಮುಂಬೈ:ನಟ ಅಜಯ್​ ದೇವಗನ್​ ಅವರು 1991ರಲ್ಲಿ ತೆರೆಕಂಡ ಫೂಲ್​ ಔರ್​ ಕಾಂತೆ ಸಿನಿಮಾ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ಫಿಲ್ಮ್​ಫೇರ್​ ಅವಾರ್ಡ್​ ಗಳಿಸಿದರು. ಈ ಸಿನಿಮಾದ ಕಥಾವಸ್ತುವು ಮೆಚ್ಚುಗೆ ಪಡೆದಿದ್ದಲ್ಲದೆ, ಹಾಡುಗಳು ಸಹ ಹಿಟ್ ಆದವು. ಮೊದಲ ಸಿನಿಮಾದಲ್ಲೇ ಅಜಯ್​ ದೇವಗನ್​ ಬಾಲಿವುಡ್​ನ ಭರವಸೆ ನಾಯಕರಾದರು. ಈ ಸಿನಿಮಾದಲ್ಲಿ ವಿಶೇಷ ಗಮನ ಸೆಳೆದಿದ್ದು, ದೇವಗನ್​ ಅವರ ಅದ್ಧೂರಿ ಎಂಟ್ರಿ. ಎರಡು ಬೈಕ್​ಗಳ ಮೇಲೆ ನಿಂತು ಬರುವ ಸಾಹಸ ಸಿನಿ ರಸಿಕರನ್ನು ಸೆಳೆಯಿತು.
ಈ ಸಿನಿಮಾ 1991ರಲ್ಲಿ ತೆರೆಕಂಡರೂ ಇಂದಿಗೂ ಈ ಐಕಾನಿಕ್​ ಸಾಹಸವನ್ನು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅನೇಕ ಸಿನಿಮಾಗಳಲ್ಲಿ ಅಜಯ್​ ದೇವಗನ್​ ಈ ದೃಶ್ಯವನ್ನು ಮರುಸೃಷ್ಟಿ ಮಾಡಿದ್ದಾರೆ. ಆದರೆ, ಇದೀಗ ವೈರಲ್​ ಆಗಿರುವ ವಿಡಿಯೋವೊಂದು ನಿಮ್ಮನ್ನು ಆಶ್ಚರ್ಯ ಚಕಿತಗೊಳಿಸುತ್ತದೆ. ಅಲ್ಲದೆ, ನಿಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ.
ಇದನ್ನೂ ಓದಿ:ಸೀಮಾ ಹೈದರ್​ನ ಪ್ರಿಯತಮನ ಕುಟುಂಬಕ್ಕೆ ಉದ್ಯೋಗದಾತರೇ ಇಲ್ಲ! ಅನ್ನಾಹಾರಕ್ಕೆ ಕೊರತೆ…
https://twitter.com/HasnaZarooriHai/status/1684497004381216769?s=20
ವೈರಲ್​ ಆಗಿರುವ ವಿಡಿಯೋದಲ್ಲಿ ಎರಡು ಎಮ್ಮೆಗಳು ರಸ್ತೆಯಲ್ಲಿ ನಡೆದು ಬರುತ್ತಿರುವುದನ್ನು ನೋಡಬಹುದು. ಆದರೆ, ಜನರ ಗಮನ ಸೆಳೆದ ಸಂಗತಿ ಏನೆಂದರೆ, ಒಂದು ಎಮ್ಮೆಯ ಮೇಲೆ ಬಿಳಿ ಶ್ವಾನವೊಂದು ಅಜಯ್​ ದೇವಗನ್​ ಮಾದರಿಯಲ್ಲಿ ಕಾಲುಗಳನ್ನು ಇಟ್ಟುಕೊಂಡು ಬರುವ ಮೂಲಕ ಸಾಹಸ ಪ್ರದರ್ಶಿಸಿದೆ. ಎರಡು ಎಮ್ಮೆಗಳು ನೇರವಾಗಿ ಒಟ್ಟಿಗೆ ನಡೆಯುತ್ತಿದ್ದರೆ, ನಾಯಿಯು ಒಂದು ಎಮ್ಮೆಯ ಮೇಲೆ ನಿಂತಿರುವುದನ್ನು ಕಾಣಬಹುದು. ನಾಯಿಯು ಅಜಯ್‌ ದೇವಗನ್​ ಅವರ ಸಾಂಪ್ರದಾಯಿಕ ಸಾಹಸಕ್ಕೆ ಒಂದು ಟ್ವಿಸ್ಟ್ ಅನ್ನು ಇಲ್ಲಿ ಪರಿಚಯಿಸಿದೆ.
ಇದನ್ನೂ ಓದಿ:ಕಸ ಹೆಕ್ಕುವ ರೋಬೋಟ್​ ಬಗ್ಗೆ ಕೇಳಿದ್ದೀರಾ? ಇದು ಗೂಗಲ್​ನ ಕರಾಮತ್ತು!
ಈ ವಿಡಿಯೋದ ಮೂಲವನ್ನು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಇದು ನೆಟ್ಟಿಗರ ಗಮನ ಸೆಳೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಗೆಬಗೆಯ ಕಾಮೆಂಟ್​ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ನಾಯಿಯ ಸಾಹಸವನ್ನು ಅಜಯ್​ ದೇವಗನ್​ ಸಾಹಸಕ್ಕೆ ಹೋಲಿಕೆ ಮಾಡಿದ್ದಾರೆ. ನಗುತ್ತಿರುವ ಎಮೋಜಿಗಳ ಮಹಾಪೂರವೇ ಹರಿದುಬಂದಿದೆ.(ಏಜೆನ್ಸೀಸ್​)
VIDEO| ಅಜಯ್​ ದೇವಗನ್​ ಅನುಸರಿಸಲು ಹೋಗಿ ಜೈಲು ಪಾಲಾದ ಯುವಕ: ವಾಹನಗಳೂ ಸೀಜ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
