ದೆಹಲಿ:ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುವುದು ಅಪಾಯಕಾರಿಯಾಗಿದ್ದು, ಅಪಘಾತದ ಸಂದರ್ಭದಲ್ಲಿ ಸವಾರರ ತಲೆಗೆ ಗಂಭೀರ ಗಾಯಗಳಾಗುವ ಅಪಾಯವೇ ಹೆಚ್ಚು. ಸರ್ಕಾರದ ಕಟ್ಟುನಿಟ್ಟಾದ ನಿಯಮಗಳ ನಡುವೆಯೂ ಅನೇಕರು ಈ ನಿಯಮಗಳನ್ನು ಪಾಲಿಸುವುದಿಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಾಕುನಾಯಿಗೆ ಹೆಲ್ಮೆಟ್​ ಹಾಕಿ ಪ್ರಯಾಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ಸೈಡ್ ಇಂಡಿಕೇಟರ್ ರಾಂಗ್‌ ಹಾಕಿರೋದನ್ನ ಪ್ರಶ್ನಿಸಿದಕ್ಕೆ ಕೊಲೆ; ಮಾಜಿ ಶಾಸಕನ ಪುತ್ರ, ಮೊಮ್ಮಕ್ಕಳು ಅರೆಸ್ಟ್
ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ತಮಿಳುನಾಡಿನ ವ್ಯಕ್ತಿಯೋರ್ವನ, ಲ್ಯಾಬ್ರಡಾರ್ ತಳಿಯ ಕಪ್ಪು ನಾಯಿ ಹೆಲ್ಮಟ್ ಧರಿಸಿ ಮಾನವನಂತೆ ತನ್ನ ಎರಡು ಕಾಲುಗಳನ್ನು ಚಾಲಕನ ಹೆಗಲ ಮೇಲಿಟ್ಟುಕೊಂಡು ನೇರವಾಗಿ ಕುಳಿತುಕೊಂಡು ಪ್ರಯಾಣಿಸುತ್ತಿದೆ. ದೂರದಿಂದ ನೋಡಿದರೆ ಇದು ಬಹುತೇಕ ಮನುಷ್ಯನಂತೆ ಕಾಣಿಸುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
Rule is rule..😜#WhatsApp#instagramdown#TamilNadupic.twitter.com/g47mB5mEfY— Mohammed Nayeem (@PMN2463)May 23, 2023
Rule is rule..😜#WhatsApp#instagramdown#TamilNadupic.twitter.com/g47mB5mEfY
ಈ ವಿಡಿಯೋಗೆ ನೆಟ್ಟಿಗರಿಂದ ತರಹೇವಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಕ್ತಿ ತನ್ನ ಮುದ್ದಿನ ನಾಯಿಯನ್ನು ನೋಡಿಕೊಳ್ಳುವ ರೀತಿ ನೋಡಿ ಕೆಲವರು ಆಘಾತ ವ್ಯಕ್ತಪಡಿಸಿದರೆ, ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ನೆಟ್ಟಿಗ ವಿಡಿಯೋವನ್ನು ನೋಡಿ, ನಾನು ಉದ್ದ ಕೂದಲಿನ ಮಹಿಳೆ ಕುಳಿತು ಪ್ರಯಾಣಿಸುತ್ತಿದ್ದಾಳೆ ಎಂದು ಭಾವಿಸಿದ್ದೆ ಎಂದು ಪ್ರತಿಕ್ರಿಯಿಸಿದ್ದಾನೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one − 1 =
Remember me
