ನಾಸಿಕ್​:ದಾಳಿ ಮಾಡಲು ಹೊಂಚು ಹಾಕುತ್ತ ಕಾದು ಕುಳಿತಿದ್ದ ಚಿರತೆಯೊಂದನ್ನು ಎರಡು ನಾಯಿಗಳು ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯ ಅಡ್ಗಾಂವ್​ ಶಿವಾರ್​ ಪ್ರದೇಶದಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಚಿರತೆಯನ್ನು ಎರಡು ನಾಯಿಗಳು ಹಿಮ್ಮೆಟ್ಟಿಸುತ್ತಿರುವುದು ಕಂಡು ಬರುತ್ತದೆ. ಈ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೈರಲ್​ ಆಘಿರುವ ವಿಡಿಯೋದಲ್ಲಿ ಮನೆಯ ಕಾಂಪೌಂಡ್​ನಲ್ಲಿ ಎರಡು ನಾಯಿಗಳು ಮಲಗಿದ್ದು ನಿಧಾನವಾಗಿ ಚಿರತೆ ಬಂದು ಅದನ್ಉ ಕೊಂದು ತಿನ್ನಲು ಯತ್ನಿಸುತ್ತದೆ. ಈ ವೇಳೆ ಅಲ್ಲೇ ಮಲಗಿದ್ದ ಮತ್ತೊಂದು ನಾಯಿ ಇದನ್ನು ಗಮನಿಸಿ ಕೂಡಲೇ ಬೊಗಳಲು ಶುರು ಮಾಡುತ್ತದೆ. ಇದರಿಂದ ಗಾಬರಿಗೊಳ್ಳುವ ಚಿರತೆ ತನ್ನ ಬೇಟೆಯನ್ನು ಬಿಟ್ಟು ಓಡಲು ಶುರು ಮಾಡುತ್ತದೆ.
Maharashtra : नासिक में दबे पांव घर में घुसे तेंदुए को कुत्तों ने भगाया, वीडियो वायरल हुआ#maharashtra#Nasik#Leopard#Dog#ViralVideo#socialmedia#jagruktv#jagruksocial#jagruktimespic.twitter.com/F2wBSeV0r4
ಇದನ್ನೂ ಓದಿ:498A ಕಾನೂನನ್ನು ಪತಿ ವಿರುದ್ಧದ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ: ಜಾರ್ಖಂಡ್​ ಹೈಕೋರ್ಟ್​
ಇದಾದ ಕೆಲ ಕ್ಷಣದ ಬಳಿಕ ಮತ್ತೊಮ್ಮೆ ಹೊಂಚು ಹಾಕಿ ವಾಪಸ್​ ಬರುವ ಚಿರತೆಯನ್ನು ಹೆದರದ ರ್ಶವಾನಗಳು ಅದನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿತ್ತಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಘಟನೆಯ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ ವಿರ್ಶರಾಲಿ ಗಾಡೆ ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಅಗಲೇ ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಆರಂಭಿಸಿದ್ದೇವೆ. ಶೀಘ್ರದಲ್ಲೇ ಅದನ್ನು ಹಿಡಿದು ಕಾಡಿಗೆ ವಾಪಸ್​ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
