ತಿರುವನಂತಪುರ:ಗರ್ಭಿಣಿ ಆನೆಗೆ ಸ್ಫೋಟಕ ಇರಿಸಿದ್ದ ಅನಾನಸ್​ ತಿನ್ನಿಸಿ, ಸಾಯಿಸಿದ ಕೇರಳ ರಾಜ್ಯದಲ್ಲಿ ಇದೀಗ ಸಾಕುನಾಯಿಯೊಂದರ ಬಾಯಿಗೆ ಇನ್ಸುಲೇಷನ್​ ಟೇಪ್​ನ ಎರಡ್ಮೂರು ಪದರ ಸುತ್ತಿ ವಿಕೃತಿ ಮೆರೆಯಲಾಗಿದೆ.
ಮೂರು ವರ್ಷದ ಈ ನಾಯಿಯನ್ನು ಪ್ರಾಣಿಗಳ ಕ್ಷೇಮಾಭಿವೃದ್ಧಿ ಸೇವೆಗಳ ಸಂಘಟನೆ ಸದಸ್ಯರು ರಕ್ಷಿಸಿ, ಟೇಪ್​ ಅನ್ನು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲವು ಪದರಗಳಲ್ಲಿ ಇನ್ಸುಲೇಷನ್​ ಟೇಪ್​ ಅನ್ನು ಸುತ್ತಿದ್ದರಿಂದ ಬಾಯಿ ತೆರೆಯಲಾಗದೆ, ಏನನ್ನೂ ತಿಂದು, ಕುಡಿಯಲು ಸಾಧ್ಯವಾಗದೆ ಪರದಾಡುತ್ತಿತ್ತು. ಹಲವು ದಿನಗಳಿಂದ ಹಸಿವಿನಿಂದ ಕಂಗಾಲಾಗಿದ್ದ ಈ ನಾಯಿಯ ಮೂಳೆಗಳು ಕಾಣಿಸಲಾರಂಭಿಸಿದ್ದವು.
ಇದನ್ನೂ ಓದಿ:ಬೆಂಗಳೂರಿನ ಬನಶಂಕರಿಯಲ್ಲಿ ಚಿರತೆ ಕಾಣಿಸಿಕೊಂಡಿತಾ? ನಿಜಾನಾ, ಸುಳ್ಳಾ?
ತ್ರಿಶೂರು ಜಿಲ್ಲೆಯ ಒಲೂರು ಎಂಬಲ್ಲಿ ರಸ್ತೆಯಲ್ಲಿ ದಿಕ್ಕುದೆಸೆಯಿಲ್ಲದ ತಿರುಗಾಡುತ್ತಿದ್ದ ಈ ನಾಯಿಯನ್ನು ಅನುಕಂಪಗೊಂಡ ಜನರು, ಅದರ ರಕ್ಷಣೆಗೆ ಮುಂದಾದಾಗ ಟೇಪ್​ ಅನ್ನು ತೆಗೆಸಿಕೊಳ್ಳಲು ಸಹಕರಿಸಿತು. ಟೇಪ್​ ಅನ್ನು ತೆಗೆಯುವಾಗ ಅದರ ಮೂತಿಯ ಚರ್ಮ ಕೂಡ ಕಿತ್ತುಕೊಂಡು ಬಂದಿತು ಎನ್ನಲಾಗಿದೆ.
ಟೇಪ್​ ತೆಗೆದು, ನೀರನ್ನು ಕೊಡುತ್ತಲೇ ಅದು ಎರಡು ಲೀಟರ್​ನಷ್ಟು ನೀರು ಕುಡಿದಿದೆ. ಅದಕ್ಕೆ ಒಂದಷ್ಟು ಆಹಾರ ಕೊಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ಪಶುಚಿಕಿತ್ಸಾಲಯಕ್ಕೆ ದಾಖಲಿಸಲಾಗಿದೆ. ಇದೀಗ ಅದು ಚೇತರಿಸಿಕೊಳ್ಳುತ್ತಿದೆ.
ನಾಯಿಯ ಕತ್ತಿನ ಸುತ್ತ ಬೆಲ್ಟ್​ ಅನ್ನು ಕಟ್ಟಲಾಗಿತ್ತು. ಇದನ್ನು ಗಮನಿಸಿದಾಗ ಇದೊಂದು ಸಾಕು ನಾಯಿ ಇರಬೇಕು ಎನಿಸುತ್ತದೆ. ಆದ್ದರಿಂದ, ಈ ನಾಯಿಯನ್ನು ತಾವೇ ಸಾಕಿಕೊಳ್ಳಲು ಸ್ಥಳೀಯರೊಬ್ಬರು ನಿರ್ಧರಿಸಿದ್ದಾರೆ.
ನೋಡಿದಿರಾ… ಶ್ವೇತವರ್ಣದ ಮಯೂರ ನಾಟ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 13 =
Remember me
