ಹೈದರಾಬಾದ್​:ಮೇಲಿನ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಹೆಸರು ರಾಹುಲ್​. ಈತ ಸರ್ಕಾರಿ ನೌಕರ. ಈತನ ಪ್ರತ್ನಿಯೂ ಸರ್ಕಾರಿ ಉದ್ಯೋಗಿ. ಪತ್ನಿ ಮಾತ್ರವಲ್ಲ ಪಾಲಕರು ಸಹ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಕೈತುಂಬಾ ಸಂಪಾದನೆ ಇದೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವಿದೆ. ಆದರೆ, ರಾಹುಲ್​ಗೆ ಇದ್ದ ಒಂದು ಚಟ ಆತನನ್ನು ವಂಚಕನನ್ನಾಗಿ ಮಾಡಿದೆ.
ಸರ್ಕಾರಿ ಉದ್ಯೋಗದಲ್ಲಿದ್ದ ರಾಹುಲ್​ಗೆ 1 ಲಕ್ಷಕ್ಕೂ ಅಧಿಕ ಸಂಬಳ ಬರುತ್ತಿತ್ತು. ಆದರೆ, ಇದು ತನ್ನ ಚಟಕ್ಕೆ ಸಾಲದೆ, ಒಂದೆರೆಡು ಲಕ್ಷವಲ್ಲ ಬರೋಬ್ಬರಿ 15 ಕೋಟಿ ರೂ.ಗೂ ಅಧಿಕ ಸಾಲವನ್ನು ಜನರಿಂದ ಪಡೆದು, ಹಣ ಹಿಂದಿರುಗಿಸದೇ ವಂಚನೆ ಮಾಡಿದ್ದಾನೆ. ಕೊನೆಗೆ ವಂಚನೆಗೆ ಒಳಗಾದವರು ದೂರು ನೀಡಿದ ಬಳಿಕ ರಾಹುಲ್​ ಬಂಡವಾಳ ಎಲ್ಲವು ಬಯಲಾಗಿದೆ.
ತೆಲಂಗಾಣದ ಕೀಸರ ಮಂಡಲದ ಮಿಷನ್ ಭಗೀರಥದಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ರಾಹುಲ್, ಬೆಟ್ಟಿಂಗ್ ಮತ್ತು ಆನ್‌ಲೈನ್ ಗೇಮ್‌ ಚಟವನ್ನು ಹೊಂದಿದ್ದಾನೆ. ಆನ್‌ಲೈನ್‌ನಲ್ಲಿ ರಮ್ಮಿ ಮತ್ತು ಕ್ರಿಕೆಟ್ ಬೆಟ್ಟಿಂಗ್ ಮೂಲಕ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾನೆ. ತನಗೆ ಬರುತ್ತಿದ್ದ ಒಂದು ಲಕ್ಷ ರೂಪಾಯಿ ಸಂಬಳ ಬೆಟ್ಟಿಂಗ್​ ಆಡಲು ಸಾಲುತ್ತಿರಲಿಲ್ಲ ಹೀಗಾಗಿ ಖಾಸಗಿ ಗುತ್ತಿಗೆದಾರರ ಬಳಿ 15 ಕೋಟಿ ರೂ.ಗು ಅಧಿಕ ಹಣವನ್ನು ಸಾಲ ಪಡೆದಿದ್ದ.
ಗುತ್ತಿಗೆದಾರರಿಗೆ ಕಾಮಗಾರಿ ಕೊಡಿಸುವುದಾಗಿ ನಂಬಿಸಿ 37 ಖಾಸಗಿ ಗುತ್ತಿಗೆದಾರರಿಂದ ರಾಹುಲ್​ ಹಣ ಪಡೆದಿದ್ದ. ಹಣವನ್ನೆಲ್ಲ ಸೋತು, ಅದೇ ಭಯದಿಂದ 8 ತಿಂಗಳ ಹಿಂದೆಯೇ ರಾಹುಲ್​ ಪರಾರಿಯಾಗಿದ್ದ. ಈ ವಿಚಾರ ಹಿರಿಯ ಅಧಿಕಾರಿಗಳಿಗೆ ತಿಳಿದು 6 ತಿಂಗಳ ಹಿಂದೆಯೇ ರಾಹುಲ್​ನನ್ನು ಅಮಾನತು ಮಾಡಿದ್ದರು. ರಾಹುಲ್​ಗೆ ಸಹಾಯ ಮಾಡಿದ ಸಹಾಯಕನನ್ನು ಸಹ ಅಮಾನತು ಮಾಡಲಾಗಿದೆ.
ತಿಂಗಳುಗಳು ಕಳೆದರು ಕಾಮಗಾರಿ ಕೊಡಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹಣ ವಾಪಸ್ ಕೇಳಲಾರಂಭಿಸಿದರು. ಆದರೆ, ರಾಹುಲ್ ಎಲ್ಲ ಹಣವನ್ನು ಬೆಟ್ಟಿಂಗ್ ಆಡಿ ಹಣ ಸೋತಿದ್ದಾನೆ. ಈ ನಡುವೆ ಸಾಲ ವಂಚನೆಗೆ ಒಳಗಾಗಿರುವುದನ್ನು ಅರಿತು, ನ್ಯಾಯ ಕೊಡಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೀಸರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ರಾಹುಲ್​ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಪ್ರಕರಣ ದಾಖಲಾಗಿರುವುದು ತಿಳಿಯುತ್ತಿದ್ದಂತೆ ರಾಹುಲ್ ಪರಾರಿಯಾಗಿದ್ದ. ಸೋಮವಾರ ವಿದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ವೇಳೆ ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಸೋಮವಾರ ರಾತ್ರಿ ಕೀಸರ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಹಣ ಕಳೆದುಕೊಂಡವರು ರಾಹುಲ್ ಮನೆಗೆ ತೆರಳಿ ವಿಚಾರಿಸುತ್ತಿದ್ದಾರೆ. ಹಣ ವಾಪಸ್ ಕೊಡುವುದಾಗಿ ಪೋಷಕರು ಹೇಳಿದ್ದರೂ ಯಾರಿಗೂ ಇನ್ನೂ ನಗದು ನೀಡಿಲ್ಲವಂತೆ.(ಏಜೆನ್ಸೀಸ್​)
ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

ಎಲ್ಲಾ ಹೀರೋಗಳ ಜತೆ ಮಾಡಿದ್ದೇನೆ, ಆದ್ರೆ ಈಗ ನನ್ನ ಜೀವನ ಹೀಗಾಗುತ್ತೆ ಅಂದು ಕೊಂಡಿರಲಿಲ್ಲ ಎಂದ ಖ್ಯಾತ ನಟಿ

ಮಂಚಕ್ಕೆ ಕರೆಯುವ ಮೈದುನ, ಅಡ್ಜಸ್ಟ್​ ಮಾಡ್ಕೋ ಎಂದ ಗಂಡ! ಕೋರ್ಟ್​ ಮೆಟ್ಟಿಲೇರಿ ಕಣ್ಣೀರಿಟ್ಟ ನಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
