ಮುಂಬೈ:ಚಿತ್ರರಂಗದಲ್ಲಿ ಅದರಲ್ಲೂ ಬಾಲಿವುಡ್​ನಲ್ಲಿ ಡ್ರಗ್​ ಬಳಕೆ ಅವ್ಯಾಹತವಾಗಿದೆ ಎಂಬುದನ್ನು ಪೊಲೀಸರು ಒಪ್ಪಿಕೊಳ್ತಾರೆ. ಅಲ್ಲೊಂದು, ಇಲ್ಲೊಂದು ಪ್ರಕರಣ ಆಗಾಗ ವರದಿಯಾದರೂ ಇನ್ನುಳಿದಂತೆ ಇದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.
ಸದ್ಯ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯಲ್ಲೀಗ ನಾರ್ಕೋಟಿಕ್ಸ್​ ಅಪರಾಧ ನಿಗ್ರಹ (ಎನ್​ಸಿಬಿ) ತಂಡ ಕೂಡ ಸೇರಿಕೊಂಡಿದೆ. ದಿನೇದಿನೆ ಒಂದೊಂದೇ ಅಚ್ಚರಿಯ ಹೊಸ ಸಂಗತಿಗಳು ಹೊರ ಬೀಳುತ್ತಲೇ ಇವೆ.
ಇದನ್ನೂ ಓದಿ;ವಾಯುಸೇನೆಯ ಬಲಾಢ್ಯ ರಫೇಲ್​ ಯುದ್ಧ ವಿಮಾನಗಳಿಗೆ ಎದುರಾಗಿದೆ ಆಪತ್ತು…!
ಡ್ರಗ್​ ವಿವಿಧ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಈ ತಂಡ ಪತ್ತೆ ಹಚ್ಚಿದೆ. ವಿವಿಧ ಮಾದಕ ವಸ್ತುಗಳಿಗೆ ಡಾಲರ್​, ದಿರಹಂ, ಪೌಂಡ್​ ಎಂದು ಕರೆಯುತ್ತಿದುದನ್ನು ಬಯಲಿಗೆಳೆದಿದೆ. ಡಾಲರ್​ ಎಂದರೆ ಗಾಂಜಾ, ದಿರಹಂ ಎಂದರೆ ಸ್ಟ್ರಾಬೆರ್ರಿ ಫ್ಲೇವರ್​ನ ಗಾಂಜಾ, ಬ್ರಿಟಿಷ್​ ಪೌಂಡ್​ ಬ್ಲ್ಯೂಬೆರ್ರಿ ಫ್ಲೇವರ್​ನದ್ದು ಎಂದು ಹೇಳಲಾಗಿದೆ. ಇನ್ನು ಸ್ಥಳೀಯವಾಗಿ ದೊರೆಯುತ್ತಿದ್ದ ಗಾಂಜಾವನ್ನು ಇಂಡಿಯನ್​ ರೂಪಿ ಎಂದು ಹೇಳುತ್ತಿದ್ದರು.
ಇಬ್ಬರು ಡ್ರಗ್ ಪೆಡ್ಲರ್​ಗಳನ್ನು ವಶಕ್ಕೆ ಪಡೆದಿರುವ ಎನ್​ಸಿಬಿ, ಬಾಲಿವುಡ್​ನಲ್ಲಿ ಯಾರಿಗೆಲ್ಲ ಡ್ರಗ್​ ಪೂರೈಸುತ್ತಿದ್ದರು ಎಂಬುದರ ಮಾಹಿತಿ ಸಂಗ್ರಹಿಸಿದ್ದಾರೆ. ಬಾಲಿವುಡ್​ ಮಂದಿಗೆ ಡ್ರಗ್​ ಪೂರೈಸುತ್ತಿದ್ದ ಪೆಡ್ಲರ್​ಗಳೇ ಬೆಂಗಳೂರಿನಲ್ಲಿಯೂ ಜಾಲ ಹೊಂದಿದ್ದರು ಎಂಬುದು ಬೆಳಕಿಗೆ ಬಂದಿದೆ. ಇದರೊಂದಿಗೆ ಕನ್ನಡ ಚಿತ್ರರಂಗಕ್ಕೂ ಇದು ವ್ಯಾಪಿಸಿರುವುದು ಸದ್ಯ ಸಂಚಲನ ಮೂಡಿಸಿದೆ.
ಇದನ್ನೂ ಓದಿ;ಬಸ್​​ನಲ್ಲಿದ್ದ ವ್ಯಕ್ತಿಯಿಂದ 23 ಪ್ರಯಾಣಿಕರಿಗೆ ಕರೊನಾ ಸೋಂಕು; ಗಾಳಿಯಿಂದ ಹರಡುತ್ತಿದೆ ಎನ್ನಲು ಇದುವೇ ನಿದರ್ಶನ?
ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ಡ್ರಗ್​ ಪೆಡ್ಲರ್​ಗಳೊಂದಿಗೆ ನಡೆಸಿದ ವಾಟ್ಸ್​ಆ್ಯಪ್​ ಚಾಟ್​ ಬಹಿರಂಗಗೊಂಡ ಬಳಿಕ ಹಾಗೂ ಸುಶಾಂತ್​ ಬಳಿ ಕೆಲಸಕ್ಕಿದ್ದ ಹಲವರು ನೀಡಿದ ಹೇಳಿಕೆ ಆಧರಿಸಿ ಎನ್​ಸಿಬಿ ಈ ಪ್ರಕರಣದ ತನಿಖೆಗೆ ಮುಂದಾಗಿದೆ.
ವಿಮಾನದಾಚೆ ಮನುಷ್ಯ ಹಾರಾಡುತ್ತಿದ್ದುದನ್ನು ನೋಡಿದ ಪೈಲಟ್​ಗಳಿಗೆ ಗಲಿಬಿಲಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
