ಎರಡನೇ ವಿಶ್ವ ಸಮರದ ನಂತರ ಸ್ಥಾಪಿಸಲಾದ ಬ್ರೆಟ್ಟನ್ ವುಡ್ಸ್ ವ್ಯವಸ್ಥೆಯು ಅಮೆರಿಕ ಡಾಲರ್​ಗೆ ಈ ಮಹತ್ವದ ಸ್ಥಾನವನ್ನು ಒದಗಿಸಿತ್ತು. 1944ರ ಒಪ್ಪಂದವೊಂದು ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಸ್ಥಾಪಿಸಿ, ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ ಅಮೆರಿಕದ ಡಾಲರ್​ಗೆ ಜಾಗತಿಕ ರಿಸರ್ವ್ ಕರೆನ್ಸಿಯ ಪಟ್ಟ ಕಟ್ಟಿತ್ತು.
ತಮ್ಮ ದೇಶಗಳ ಕರೆನ್ಸಿ ಗಳಲ್ಲಿ ವಾಣಿಜ್ಯ ವ್ಯವಹಾರ ನಡೆಸಲು ಚೀನಾ ಮತ್ತು ಬ್ರೆಜಿಲ್ ಮಾರ್ಚ್​ನಲ್ಲಿ ಒಂದು ಒಪ್ಪಂದ ಮಾಡಿಕೊಂಡಿವೆ. ಚೀನಾದಿಂದ ಮಾಡಿಕೊಳ್ಳಲಾಗುವ ಆಮದುಗಳಿಗೆ ಅಮೆರಿಕ ಡಾಲರ್ ಬದಲು ಚೀನಿ ಕರೆನ್ಸಿ ಯುವಾನ್​ನಲ್ಲೇ ಪಾವತಿ ಮಾಡುವುದಾಗಿ ಅರ್ಜೆಂಟೀನಾ ಬುಧವಾರ ಘೋಷಿಸಿದೆ. ಕುಸಿಯುತ್ತಿರುವ ವಿದೇಶಿ ಮೀಸಲನ್ನು ರಕ್ಷಿಸಿಕೊಳ್ಳಲು ಈ ಕ್ರಮಕ್ಕೆ ಅದು ಮುಂದಾಗಿದೆ. ಡಿಡಾಲರೈಸೇಷನ್ ಪ್ರೋತ್ಸಾಹಿಸಲು ಈ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
* ಅಮೆರಿಕ ಡಾಲರ್ ಮೌಲ್ಯ ಕುಸಿತ ಕಾಣಬಹುದು
* ಕಚ್ಚಾತೈಲ, ಚಿನ್ನ ಇನ್ನಿತರ ಅಂತಾರಾಷ್ಟ್ರೀಯ ಕಮಾಡಿಟಿ ಗಳ ಮೇಲೆ ಪರಿಣಾಮ
* ಭಾರತದಂತಹ ದೇಶಗಳ ಕರೆನ್ಸಿ ಮೌಲ್ಯ ಏರಿಕೆ ಸಾಧ್ಯತೆ
* ವಿತ್ತೀಯ ಕೊರತೆ ತುಸು ಕಡಿಮೆ ಆಗಬಹುದು
* ಆಮದು ವೆಚ್ಚದಲ್ಲೂ ತುಸು ಇಳಿಕೆ ಕಾಣಬಹುದು
ಕೆಲವು ವಾಣಿಜ್ಯಗಳಲ್ಲಿ ಭಾರತದ ರೂಪಾಯಿಯನ್ನೇ ಬಳಸಲು ಆರಂಭಿಸಿರುವುದಾಗಿ ಭಾರತ ಮತ್ತು ಮಲೇಷ್ಯಾ ಈಚೆಗೆ ಪ್ರಕಟಿಸಿದ್ದವು. ಚೀನಾ ಮತ್ತು ರಷ್ಯಾ ಕೂಡ ಡಿಡಾಲರೈಸೇಶನ್ ಬೆಂಬಲಿಸುತ್ತಿರುವ ದೇಶಗಳಲ್ಲಿ ಸೇರಿವೆ. ವಿದೇಶಿ ವಾಣಿಜ್ಯದಲ್ಲಿ ಪಾವತಿ ವಿಧಾನವಾಗಿ ಬಂಗಾರ ಬೆಂಬಲಿತ ಹೊಸ ಕ್ರಿಪ್ಟೋಕರೆನ್ಸಿಯನ್ನು ಜಂಟಿಯಾಗಿ ಬಿಡುಗಡೆ ಮಾಡುವುದಾಗಿ ಇರಾನ್ ಮತ್ತು ರಷ್ಯಾ ಈ ವರ್ಷ ಜನವರಿಯಲ್ಲಿ ಘೋಷಿಸಿದ್ದವು. ರಾಜಕೀಯವಾಗಿ ತಟಸ್ಥ ರಿಸರ್ವ್ ಕರೆನ್ಸಿ ಸೃಷ್ಟಿಸುವತ್ತ ಇತ್ತೀಚಿನ ಹೆಜ್ಜೆ ಇದಾಗಿತ್ತು.
ಡಿಡಾಲರೈಸೇಶನ್ ಪದ ಹೊಸದಾಗಿರ ಬಹುದು; ಆದರೆ ಈ ಪರಿಕಲ್ಪನೆ ಹಳೆಯದೇ ಆಗಿದೆ. ಅಮೆರಿಕದ ಕರೆನ್ಸಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬೇಕೆಂದು ಹಲವು ದೇಶಗಳು ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿವೆ. ಜಾಗತಿಕ ವಾಣಿಜ್ಯದಲ್ಲಿ ಅಮೆರಿಕದ ಪಾರಮ್ಯವನ್ನು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಷಿಯೋ ಲೂಲಾ ದ ಸಿಲ್ವ ಟೀಕಿಸುತ್ತಲೇ ಬಂದಿದ್ದಾರೆ.
ಹೆದ್ದಾರಿ ಮಧ್ಯೆ ಬೃಹತ್ ಹೋರ್ಡಿಂಗ್; ಸಾರ್ವಜನಿಕರ ಸುರಕ್ಷತೆಯನ್ನು ಮರೆತ ಬಿಬಿಎಂಪಿ

ಏಪ್ರಿಲ್​ 30ರಂದು ಬೆಂಗಳೂರು-ಮೈಸೂರು ಹೆದ್ದಾರಿ ಬಂದ್​: ಬದಲಿ ಮಾರ್ಗ ಹೀಗಿದೆ….

ಕಾಂಗ್ರೆಸ್​ನಿಂದ 5ನೇ ಗ್ಯಾರಂಟಿ ಘೋಷಣೆ: ಎಲ್ಲ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − four =
Remember me
