ನವದೆಹಲಿ:ನೀವು ಇತ್ತೀಚೆಗೆ ಡೊಮಿನೋಸ್​ ಪಿಜ್ಜಾದಲ್ಲಿ ಆನ್​ಲೈನ್​ ಆರ್ಡರ್​ ಮಾಡಿ ಪಿಜ್ಜಾ ತಿಂದಿದ್ದೀರಾ? ಹಾಗಾದರೆ ಯಾವುದಕ್ಕೂ ಹುಷಾರಾಗಿರಿ. ಏಕೆಂದರೆ ಡೊಮಿನೋಸ್​ ಪಿಜ್ಜಾದಲ್ಲಿ ಆನ್​ಲೈನ್​ ಪಾವತಿ ಮಾಡಿದ ಲಕ್ಷಾಂತರ ಜನರ ಡೇಟಾ ಸೋರಿಕೆಯಾಗಿದೆ ಎಂದು ಸೈಬರ್​ ಸೆಕ್ಯುರಿಟಿ ತಂಡವೊಂದು ಮಾಹಿತಿ ನೀಡಿದೆ.
ಹಡ್ಸನ್​ ರಾಕ್​ ಸೈಬರ್​ ಸೆಕ್ಯುರಿಟಿ ಸಂಸ್ಥೆಯ ಮುಖ್ಯಸ್ಥ ಎಲಾನ್​ ಗಲ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡೊಮಿನೋಸ್​ನಲ್ಲಿ ಆನ್​ಲೈನ್​ ಪಾವತಿ ಭಾರತೀಯರಲ್ಲಿ ಸುಮಾರು 10 ಲಕ್ಷ ಮಂದಿಯ ಪಾವತಿ ವಿವರ ಸೋರಿಕೆಯಾಗಿದೆಯಂತೆ. ಅಷ್ಟೇ ಅಲ್ಲದೆ 18 ಕೋಟಿ ಗ್ರಾಹಕರ ಹೆಸರು, ಫೋನ್​ ನಂಬರ್​, ಇಮೇಲ್​, ಅಡ್ರೆಸ್​ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇದೆಲ್ಲ ಮಾಹಿತಿಯನ್ನಿಟ್ಟುಕೊಂಡು ಹ್ಯಾಕರ್​ 4 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ಹಡ್ಸನ್​ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್​ ದಾಳಿ ಆರಂಭವಾದಾಗಿನಿಂದ ಸೈಬರ್​ ಕ್ರೈಂ ಪ್ರಕರಣಗಳೂ ಹೆಚ್ಚಾಗುತ್ತಲೇ ಸಾಗಿವೆ. ಅನೇಕ ಪ್ರಸಿದ್ಧ ಆನ್​ಲೈನ್​ ಮಾರ್ಕೆಟಿಂಗ್​ ಸಂಸ್ಥೆಗಳ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತಿರುವ ಸುದ್ದಿಗಳು ಆಗಾಗ ಹರಿದಾಡುತ್ತಲೇ ಇದೆ. ಆದರೆ ಈ ಕುರಿತಾಗಿ ಡೊಮಿನೋಸ್​ ಇನ್ನೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. (ಏಜೆನ್ಸೀಸ್​)
ರಾಜಧಾನಿಗೆ ಲಾಕ್​ಡೌನ್​ ಶಾಕ್​! ಏನಿರತ್ತೆ? ಏನಿರಲ್ಲ? ಇಲ್ಲಿದೆ ಸಂಪೂರ್ಣ​ ಮಾಹಿತಿ

ಅಪ್ಪ-ಅಮ್ಮ ಹೇಳಿದ್ದ ಸುಳ್ಳನ್ನು ಬಿಚ್ಚಿಟ್ಟ ಕಂಗನಾ! ಬಸ್​ ಸ್ಟ್ಯಾಂಡ್​ನಲ್ಲಿ ಕಾಯುತ್ತಿದ್ದರಂತೆ ಅವರು..!

Domino’s data leaked
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
