ವಾಷಿಂಗ್ಟನ್:ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕಾರಣ ಎಚ್-1 ಬಿ ವೀಸಾ ವಿತರಣೆಯನ್ನು ಈ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಅಮೆರಿಕ, ಈಗ ಈ ವೀಸಾ ನೀತಿಯನ್ನು ಪರಿಷ್ಕರಿಸಿದೆ. ವಿದೇಶಗಳ ನಿಪುಣ ಉದ್ಯೋಗಿಗಳಿಗೆ ಎಚ್- 1ಬಿ ವೀಸಾ ವಿತರಣೆಯನ್ನು ಮತ್ತಷ್ಟು ಕಠಿಣಗೊಳಿಸಿ, ಮಿತಗೊಳಿಸಿದೆ. ಇದರಿಂದ ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಅಧಿಕವಾಗಿದೆ.
ಕರೊನಾ ಸಾಂಕ್ರಾಮಿಕದಿಂದ ದೇಶದಲ್ಲಿ ಉದ್ಯೋಗ ನಷ್ಟ ಹೆಚ್ಚಳವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ವೀಸಾ ನೀತಿ ಈ ವಾರದಲ್ಲೇ ಪ್ರಕಟವಾಗಲಿದೆ. ಎಚ್-1 ಬಿ ವೀಸಾ ಪಡೆಯಲು ಯಾರು ಅರ್ಹರು ಹಾಗೂ ಇದಕ್ಕೆ ಎಷ್ಟು ಪಾವತಿಸಬೇಕು ಎಂಬ ವಿವರಗಳನ್ನು ಇದು ಒಳಗೊಂಡಿರಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ತಿಳಿಸಿದೆ.
ಎಚ್-1 ಬಿ ವೀಸಾ ಯೋಜನೆಯನ್ನು ಕೆಲವು ಕಂಪನಿಗಳು ದುರುಪಯೋಗ ಪಡಿಸಿಕೊಂಡಿವೆ. ಕಡಿಮೆ ವೇತನಕ್ಕೆ ವಿದೇಶಿ ಕಾರ್ವಿುಕರನ್ನು ನೇಮಿಸಿಕೊಂಡು ಅಮೆರಿಕದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿವೆ. ಆದ್ದರಿಂದ ಹೊಸ ವೀಸಾ ನೀತಿಯನ್ನು ರೂಪಿಸಲಾಗಿದೆ.
ವೃತ್ತಿಯಲ್ಲಿ ನಿಪುಣರಾದ ವಲಸಿಗ ಕಾರ್ವಿುಕರಿಗೆ ಎಚ್-1 ಬಿ ವೀಸಾ ನೀಡುವ ಯೋಜನೆ ಜಾರ್ಜ್ ಎಚ್. ಡಬ್ಲ್ಯೂ. ಬುಷ್ (1989-1993) ಅಧ್ಯಕ್ಷರಾಗಿದ್ದ ಕಾಲದಲ್ಲಿ ಆರಂಭವಾಯಿತು. ತಂತ್ರಜ್ಞಾನ ವಲಯದ ಕಂಪನಿಗಳು ಕುಶಲ ಕಾರ್ವಿುಕರನ್ನು ಈ ವೀಸಾದ ಮೇಲೆ ಕರೆಯಿಸಿಕೊಳ್ಳುತ್ತಿದ್ದವು. ಇದೇ ಕಾಲಘಟ್ಟದಲ್ಲಿ ಐಟಿ ವಲಯ ವಿಕಸನವಾಗುತ್ತಿತ್ತು. ಹೀಗಾಗಿ ನಂತರ ಬಂದ ಅಧ್ಯಕ್ಷರು ಈ ವೀಸಾವನ್ನು ಮತ್ತಷ್ಟು ವಿಸ್ತರಿಸಿದರು. ಇದರಿಂದ ಭಾರತ ಸೇರಿ ಇತರ ದೇಶಗಳ ಐಟಿ ನೌಕರರಿಗೆ ವಿಪುಲ ಅವಕಾಶ ಪ್ರಾಪ್ತವಾಯಿತು.
ಪ್ರತಿ ವರ್ಷ 85 ಸಾವಿರ ಎಚ್-1 ಬಿ ವೀಸಾ ವಿತರಣೆ ಮಾಡಲಾಗುತ್ತದೆ. ಈ ಪೈಕಿ 65 ಸಾವಿರ ವೀಸಾಗಳು ‘ವಿಶೇಷ ಉದ್ಯೋಗ’ದ ವಿಭಾಗಕ್ಕೆ ಮತ್ತು 20 ಸಾವಿರ ವೀಸಾಗಳು ಅಮೆರಿಕದಲ್ಲಿ ಸ್ನಾತಕೋತ್ತರ ಅಥವಾ ಉನ್ನತ ವ್ಯಾಸಂಗ ಮಾಡಿದ ವಿದೇಶಿಯರಿಗೆ ನೀಡಲಾಗುತ್ತದೆ. ಈ ವೀಸಾಗಳನ್ನು ಕಂಪ್ಯೂಟರ್ ಪ್ರೋಗ್ರಾಮ್ ಅಕೌಂಟೆಂಟ್ಸ್, ಆರ್ಕಿಟೆಕ್ಟ್್ಸ್ಸ ಡೇಟಾ ಆಧಾರಿತ ಆಡಳಿತ ವಿಭಾಗದಲ್ಲಿ 3 ವರ್ಷಗಳಿಗೆ ನೀಡಲಾಗುತ್ತದೆ. ನಂತರ ಅವಶ್ಯಕತೆ ಅನುಸಾರ ನವೀಕರಣ ಮಾಡಬೇಕು. ಈ ರೀತಿಯ ಎಚ್-1 ಬಿ ವೀಸಾ ಪಡೆದವರಲ್ಲಿ ಭಾರತೀಯರದ್ದು ಸಿಂಹಪಾಲು, ನಂತರದ ಸ್ಥಾನದಲ್ಲಿ ಚೀನಿಯರು ಇದ್ದಾರೆ. ಇವೆರಡು ದೇಶಗಳಿಂದ 5 ಲಕ್ಷ ಜನರು ಈ ವೀಸಾ ಮೇಲೆ ಅಮೆರಿಕದಲ್ಲಿ ಇದ್ದಾರೆ.
ಡೊನಾಲ್ಡ್ ಟ್ರಂಪ್ ‘ಅಮೆರಿಕ ಮೊದಲು’ ನೀತಿಗೆ ಒತ್ತು ನೀಡಿದ್ದಾರೆ. ಈಗ ಎರಡನೇ ಅವಧಿಗೆ ಮರು ಆಯ್ಕೆ ಬಯಸಿದ್ದಾರೆ. ಇನ್ನೊಂದು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶದ ಯುವ ಜನರನ್ನು ಒಲಿಸಿಕೊಳ್ಳಲು ಎಚ್-1 ಬಿ ವೀಸಾ ನೀತಿಯನ್ನು ಪರಿಷ್ಕರಿಸಿದ್ದಾರೆ ಎನ್ನಲಾಗಿದೆ. ಈಗ ಹೊಸ ನೀತಿ ಘೋಷಣೆಯಾಗಿದ್ದರೂ ಇದು ಜಾರಿಯಾಗಲು ಎರಡು ತಿಂಗಳು ಬೇಕು. ಅಂದರೆ ಡಿಸೆಂಬರ್ ಮೊದಲ ವಾರದಲ್ಲಿ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + four =
Remember me
