ಅಹಮದಾಬಾದ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ. 24ರಂದು ಅಹಮದಾಬಾದ್​ಗೆ ಭೇಟಿ ನೀಡಲಿದ್ದು, ಮೂರು ಗಂಟೆಯ ಕಾರ್ಯಕ್ರಮಕ್ಕೆ ಸುಮಾರು ನೂರು ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಅದ್ದೂರಿ ಕಾರ್ಯಕ್ರಮ ಆಯೋಜನೆಗೆ ಹಣಕಾಸಿನ ಕೊರತೆ ಎದುರಾಗಬಾರದು ಎಂದು ಮುಖ್ಯಮಂತ್ರಿ ವಿಜಯ್ ರೂಪಾಣಿ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.
ರಸ್ತೆಗಳ ನವೀಕರಣ ಹಾಗೂ ನಗರ ಸೌಂದರ್ಯಕ್ಕೆ ಅಹಮದಾಬಾದ್ ನಗರ ಪಾಲಿಕೆ ಮತ್ತು ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರ ಒಟ್ಟಾಗಿ ಸುಮಾರು ನೂರು ಕೋಟಿ ರೂಪಾಯಿ ವ್ಯಯಿಸಲಿವೆ. ನಿಖರ ಖರ್ಚನ್ನು ಟ್ರಂಪ್ ಭೇಟಿಯ ನಂತರ ಲೆಕ್ಕ ಹಾಕಲಾಗುವುದು. ವೆಚ್ಚದಲ್ಲಿ ಕೇಂದ್ರ ಸರ್ಕಾರವೂ ಸ್ವಲ್ಪ ಭಾಗ ಭರಿಸಲಿದೆ ಎನ್ನಲಾಗಿದೆ.
ಮೊಟೇರಾದಲ್ಲಿ ‘ಕೆಮ್ ಚೋ ಟ್ರಂಪ್’
ಅಹಮದಾಬಾದ್​ನಲ್ಲಿ ಸಿದ್ಧಗೊಳ್ಳುತ್ತಿರುವ ಕ್ರಿಕೆಟ್ ಸ್ಟೇಡಿಯಂ ಮೊಟೇರಾದಲ್ಲಿ ‘ಕೆಮ್ ಚೋ ಟ್ರಂಪ್’ (ಹೇಗಿದ್ದೀರಿ ಟ್ರಂಪ್) ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಸ್ಟೇಡಿಯಂನ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಟ್ರಂಪ್ ಕಾರ್ಯಕ್ರಮ ಹಿನ್ನೆಲೆ ಅಲ್ಲಿನ ಬಾಕಿ ಕೆಲಸಗಳನ್ನು ಚುರುಕುಗೊಳಿಸಲಾಗಿದೆ. ಮೊಟೇರಾ ಬರೋಬ್ಬರಿ 1,10,000 ಆಸನ ವ್ಯವಸ್ಥೆ ಹೊಂದಿದ್ದು, ಹೌಡಿ ಮೋದಿ ಕಾರ್ಯಕ್ರಮಕ್ಕಿಂತಲೂ ಹೆಚ್ಚು ಜನರು ಕೆಮ್ ಚೋ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಕಾರ್ಯಕ್ರಮ ಸ್ಥಳ ನಿಗದಿ ಕುರಿತು ಈ ಹಿಂದೆ ಭಾರತ ಮತ್ತು ಅಮೆರಿಕ ಅಧಿಕಾರಿಗಳ ಮಧ್ಯೆ ತಿಕ್ಕಾಟ ನಡೆದಿತ್ತಾದರೂ, ಪ್ರಧಾನಿ ಮೋದಿ ಆಶಯದಂತೆ ಗುಜರಾತ್​ನಲ್ಲಿ ಕಾರ್ಯಕ್ರಮ ನಡೆಸಲು ಬಳಿಕ ಒಪ್ಪಿಗೆ ದೊರೆತಿದೆ.
ನಂಬರ್ 1
ಭಾರತ ಭೇಟಿಯ ಬಗ್ಗೆ ಶನಿವಾರ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಭೇಟಿಯನ್ನು ತುಂಬಾ ಕಾತರದಿಂದ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಟ್ರಂಪ್ ಹಾಗೂ ಅವರ ಪತ್ನಿ ಮೆಲನಿಯಾ ಫೆ. 24ರಂದು ಭಾರತಕ್ಕೆ ಬರಲಿದ್ದಾರೆ. ‘ಫೇಸ್​ಬುಕ್​ನಲ್ಲಿ ಡೊನಾಲ್ಡ್ ಟ್ರಂಪ್ ನಂಬರ್ 1 ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಂಬರ್ 2 ಎಂದು ಮಾರ್ಕ್ ಜುಕರ್​ಬರ್ಗ್ ಇತ್ತೀಚೆಗೆ ಹೇಳಿದ್ದಾರೆ’ ಎಂದು ತಮ್ಮ ಟ್ವೀಟ್​ನಲ್ಲಿ ಟ್ರಂಪ್ ಹೇಳಿದ್ದಾರೆ. ಆದರೆ, ಟ್ರಂಪ್ ತಪು್ಪ ಮಾಹಿತಿ ನೀಡಿದ್ದಾರೆ ಎನ್ನುವುದು ಪರಿಶೀಲನೆಯಿಂದ ಗೊತ್ತಾಗಿದೆ. ಪ್ರಧಾನಿ ಮೋದಿಗೆ ಫೇಸ್​ಬುಕ್​ನಲ್ಲಿ 4.4 ಕೋಟಿ ಫಾಲೋವರ್​ಗಳಿದ್ದಾರೆ. ಆದರೆ ಟ್ರಂಪ್​ರ ಫಾಲೋವರ್​ಗಳ ಸಂಖ್ಯೆ 2.6 ಕೋಟಿ. ಹೀಗಾಗಿ ಮೋದಿ ಹೆಚ್ಚು ಫಾಲೋವರ್​ಗಳನ್ನು ಹೊಂದಿದ್ದಾರೆ. ಇಬ್ಬರನ್ನೂ ಹಿಂದಿಕ್ಕಿರುವ ವ್ಯಕ್ತಿಯೆಂದರೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ. ಅವರಿಗೆ ಸುಮಾರು 5.5 ಕೋಟಿ ಫಾಲೋಯರ್​ಗಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 5 =
Remember me
