ನವದೆಹಲಿ:ಪಕ್ಷಕ್ಕೆ ನಿಧಿ ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿರುವ ಕಾಂಗ್ರೆಸ್, ವಾರ್ಷಿಕವಾಗಿ 50 ಸಾವಿರ ರೂ. ದೇಣಿಗೆ ನೀಡುವಂತೆ ತನ್ನ ಸಂಸದರಿಗೆ ಸೂಚಿಸಿದೆ. ಜತೆಗೆ ಸಂಸದರಿಗೆ ಇರುವ ವಿಮಾನ ಪ್ರಯಾಣವನ್ನು ಗರಿಷ್ಠವಾಗಿ ಬಳಸಿಕೊಳ್ಳುವ ಮೂಲಕ ಪಕ್ಷದ ಖರ್ಚುವೆಚ್ಚವನ್ನು ಕಡಿಮೆ ಮಾಡಬೇಕು ಎಂದೂ ತಿಳಿಸಿದೆ. ಹಣಕಾಸಿನ ಕೊರೆತ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ಖಜಾಂಚಿ ಪವನ್ ಬನ್ಸಾಲ್ ತಿಳಿಸಿದ್ದಾರೆ.
ಮಿತವ್ಯಯದ ಮಾರ್ಗದರ್ಶಿಯನ್ನು ಚುನಾಯಿತ ಸದಸ್ಯರು ಮತ್ತು ಪಕ್ಷದ ಪದಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಿಂದ ಹಿಡಿದು ಇದು ಎಲ್ಲರಿಗೂ ಅನ್ವಯ ಆಗಲಿದೆ. ಪ್ರಧಾನ ಕಾರ್ಯದರ್ಶಿಗಳು ಆದಷ್ಟು ರೈಲಿನಲ್ಲಿ ಸಂಚಾರ ಮಾಡಬೇಕು. 1,400 ಕಿ.ಮೀ.ಗೂ ಹೆಚ್ಚಿನ ಪಯಣಕ್ಕೆ ವಿಮಾನದ ಎಕಾನಮಿ ವರ್ಗದಲ್ಲಿ ಪ್ರಯಾಣಿಸಬೇಕು. ತಿಂಗಳಿಗೆ ಎರಡು ಸಾರಿ ಮಾತ್ರ ವಿಮಾನ ಟಿಕೆಟ್ ದರ ಮರುಪಾವತಿ ಮಾಡಲಾಗುತ್ತದೆ. ಪ್ರಧಾನ ಕಾರ್ಯದರ್ಶಿಗಳು ಸಂಸದರಾಗಿದ್ದರೆ ಆ ಕೋಟಾದಲ್ಲಿ ವಿಮಾನಯಾನ ಮಾಡಿ ಪಕ್ಷದ ಮೇಲಿನ ಹೊರ ತಗ್ಗಿಸಬೇಕು ಎಂದು ಬನ್ಸಾಲ್ ಹೇಳಿದ್ದಾರೆ.
ಹಾಗೆಯೇ ಕ್ಯಾಂಟೀನ್, ಸ್ಟೇಷನರಿ, ವಿದ್ಯುತ್, ವೃತ್ತ ಪತ್ರಿಕೆ, ಇಂಧನದ ವೆಚ್ಚಗಳನ್ನು ಎಐಸಿಸಿ ಪದಾಧಿಕಾರಿಗಳು ತಗ್ಗಿಸಬೇಕು. ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳ ಭತ್ಯೆಯನ್ನು 15 ಸಾವಿರ ಮತ್ತು 12 ಸಾವಿರ ರೂ.ಗೆ ಮಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

ನರ್ಸ್​-ಡ್ರೈವರ್​ ಲವ್​ ಟ್ರ್ಯಾಜೆಡಿ; ಕಾರೊಳಗೇ ಬೆಂಕಿ ಹಚ್ಚಿಕೊಂಡು ಪ್ರೇಮಿಗಳ ಆತ್ಮಹತ್ಯೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + 7 =
Remember me
