ಬೆಂಗಳೂರು:ಆಧಾರ್ ಗುರುತಿನ ಸಂಖ್ಯೆ ಇಲ್ಲವೇ ಚೀಟಿಯನ್ನು ಗುರುತಿನ ದ್ಯೋತಕವಾಗಿ ನೀಡುವುದು ಸಾಮಾನ್ಯ. ಆದರೆ ಹಾಗೆ ಆಧಾರ್​ ಕಾರ್ಡನ್ನು ಗುರುತಿನ ಸಾಕ್ಷಿಯಾಗಿ ಸ್ವೀಕರಿಸುವ ಮುನ್ನ ಅದನ್ನು ಪರಿಶೀಲಿಸದೆ ತೆಗೆದುಕೊಳ್ಳಬಾರದು ಎಂಬುದಾಗಿ ಭಾರತದ ವಿಶೇಷ ಗುರುತಿನ ಪ್ರಾಧಿಕಾರ (ಯುಐಡಿಎಐ) ಸೂಚನೆ ನೀಡಿದೆ.
ಗುರುತಿನ ಆಧಾರವಾಗಿ ಭೌತಿಕ ಅಥವಾ ವಿದ್ಯುನ್ಮಾನ ರೂಪದಲ್ಲಿ ಆಧಾರ್ ಸ್ವೀಕರಿಸುವ ಅದು ಅಸಲಿಯೇ ಎಂಬುದನ್ನು ಪರೀಕ್ಷಿಸಿಯೇ ಸ್ವೀಕರಿಸಬೇಕು. ವ್ಯಕ್ತಿ ಅಥವಾ ಯಾವುದೇ ಸಂಸ್ಥೆಯಿಂದ ಆಧಾರ್ ಬಂದರೂ ಆಗಲೂ ಅದನ್ನು ಪರಿಶೀಲಿಸಿಯೇ ಪರಿಗಣಿಸಬೇಕು ಎಂಬುದಾಗಿ ಯುಐಡಿಎಐ ಹೇಳಿದೆ.
ಇಷ್ಟು ಮಾತ್ರವಲ್ಲದೆ ಅದನ್ನು ಹೇಗೆ ಪರಿಶೀಲಿಸಿಕೊಳ್ಳಬೇಕು ಎಂಬುದನ್ನೂ ಯುಐಡಿಎಐ ಹೇಳಿದೆ. ಆಧಾರ್​ ಯಾವುದೇ ರೂಪದಲ್ಲಿದ್ದರೂ ಅದರ ಮೇಲೆ ಕ್ಯೂಆರ್​​ ಕೋಡ್​ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿ ನೋಡಿದರೆ ಆಧಾರ್ ಅಸಲಿಯೋ ನಕಲಿಯೋ ಎಂಬುದು ಸಾಬೀತಾಗುತ್ತದೆ. ಈ ರೀತಿ ಪರಿಶೀಲಿಸಿಯೇ ಗುರುತಿನ ಆಧಾರವಾಗಿ ಆಧಾರ್ ಪರಿಗಣಿಸಿ ಎಂದು ಯುಐಡಿಎಐ ತಿಳಿಸಿದೆ.


ಗಂಡನ ಕಿರುಕುಳ: ದೇಶದಲ್ಲಿ ಕರ್ನಾಟಕವೇ ಪ್ರಥಮ; ಮದ್ಯವ್ಯಸನಿಗಳಿಂದಲೇ ಜಾಸ್ತಿ ಉಪಟಳ..

ಅಂಬಿ ಇಲ್ಲದ ನಾಲ್ಕು ವರುಷ; ಪತಿಯ ನೆನೆದು ಸುಮಲತಾ ಹೇಳಿದ್ದು ಹೀಗೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 5 =
Remember me
