ತರ್ಕಬದ್ಧ ಶಿಕ್ಷಣ:ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗುಣಮಟ್ಟದ ಬೋಧನೆ, ಸಂಶೋಧನೆ ಕೇಂದ್ರಗಳನ್ನಾಗಿ ಬದಲಾಯಿಸಲಾಗುವುದು. ಕಾಲೇಜುಗಳಿಗೆ ಹಂತಹಂತವಾಗಿ ಶ್ರೇಣೀಕೃತ ಸ್ವಾಯತ್ತತೆ ನೀಡಲಾಗುವುದು. ಸಮಯ ಕಳೆದಂತೆ ಪ್ರತಿ ಕಾಲೇಜು ಪದವಿ ಒದಗಿಸುವ ಸ್ವಾಯತ್ತ ಕಾಲೇಜು ಅಥವಾ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿ ಹೊಂದಬೇಕು ಎನ್ನುವ ಗುರಿ ಇದೆ.
ಆರ್ಥಿಕ ನೆರವು:ಎಸ್ಸಿಎಸ್ಟಿ, ಒಬಿಸಿ ಸೇರಿ ಹಿಂದುಳಿದ ವರ್ಗಗಳ ಮೆರಿಟ್ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುವುದು. ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳ ಪ್ರಗತಿಯನ್ನು ಬೆಂಬಲಿಸಲು, ಬೆಳೆಸಲು ಹಾಗೂ ಅವೆಲ್ಲವನ್ನೂ ಪರಿಶೀಲಿಸುತ್ತಿರಲು ರಾಷ್ಟ್ರೀಯ ಸ್ಕಾಲರ್​ಶಿಪ್ ಪೋರ್ಟಲ್ ಅನ್ನು ವಿಸ್ತರಿಸಲಾಗುವುದು.
ಎಲ್ಲ ಹಂತದ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶ:ಶಾಲೆಬಿಟ್ಟ ಮಕ್ಕಳನ್ನು ಮತ್ತೆ ಶಾಲೆ ಬರುವಂತೆ ಪ್ರೇರೇಪಿಸಲು ಅಗತ್ಯ ಮೂಲಸೌಕರ್ಯ ಸೃಷ್ಟಿಸುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳ ಕಲಿಕಾ ಮಟ್ಟ ವೃದ್ಧಿಸಲು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ವಿಧಾನಗಳನ್ನೊಳಗೊಂಡ ಶಿಕ್ಷಣ ವಿಧಾನಗಳನ್ನು ಸುಗಮಗೊಳಿಸುವುದು. 10 ಮತ್ತು 12ನೇ ತರಗತಿಗಳಿಗೆ ಸಮಾನವಾದ ಮಾಧ್ಯಮಿಕ ಶಿಕ್ಷಣ ಕಾರ್ಯಕ್ರಮಗಳು, ವೃತ್ತಿಪರ ಶಿಕ್ಷಣ, ವಯಸ್ಕರ ಸಾಕ್ಷರತೆ, ಜೀವನ ಸುಧಾರಣೆ ಕಾರ್ಯಕ್ರಮಗಳ ಬಗ್ಗೆ ಹೊಸ ನೀತಿಯಲ್ಲಿ ರ್ಚಚಿಸಲಾಗಿದೆ. ಈ ನೀತಿ ಪ್ರಕಾರ ಸುಮಾರು ದೇಶದ 2 ಕೋಟಿ ಮಕ್ಕಳನ್ನು ಮತ್ತೆ ಶಾಲೆಗೆ ಬರುವಂತೆ ಮಾಡಲಾಗುವುದು.
ಮೌಲ್ಯಮಾಪನದಲ್ಲಿ ಸುಧಾರಣೆ:ಇದು ಹೆಚ್ಚು ಸಾಮರ್ಥ್ಯ ಆಧರಿತವಾಗಿದ್ದು, ಮಕ್ಕಳ ಕಲಿಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ವಿದ್ಯಾರ್ಥಿಯ ವಿಶ್ಲೇಷಣೆ, ವಿಮರ್ಶೆ, ಸ್ಪಷ್ಟತೆಯ ಗುಣ ಹಾಗೂ ಕೌಶಲಗಳನ್ನು ಇದು ಪರೀಕ್ಷಿಸಲಿದೆ. 3, 5 ಮತ್ತು 8ನೇ ತರಗತಿಯ ಮಕ್ಕಳಿಗೆ ಅಂತಿಮ ಪರೀಕ್ಷೆಗಳನ್ನು ನಡೆಸಲಾಗುವುದು. 10, 12 ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಳು ಮುಂದುವರಿಯಲಿವೆ. ಆದರೆ, ಸಮಗ್ರ ಅಭಿವೃದ್ಧಿಯೊಂದಿಗೆ ಪರೀಕ್ಷಾ ಕ್ರಮವನ್ನು ಮರು ವಿನ್ಯಾಸಗೊಳಿಸಲಾಗುವುದು.
ಸಮಾನ ಮತ್ತು ಅಂತರ್ಗತ ಶಿಕ್ಷಣ:ಜನನ ಅಥವಾ ತನ್ನ ಹಿನ್ನೆಲೆಯ ಕಾರಣಕ್ಕಾಗಿ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗಬಾರದು ಎಂಬುದು ಹೊಸ ನೀತಿಯ ಮೂಲ ಉದ್ದೇಶ. ಹೀಗಾಗಿ, ಲಿಂಗ, ಸಾಮಾಜಿಕ-ಸಾಂಸ್ಕೃತಿಕ, ಭೌಗೋಳಿಕ , ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಪ್ರತಿ ರಾಜ್ಯ, ಜಿಲ್ಲೆಗಳಲ್ಲಿ ಬಾಲ ಭವನಗಳನ್ನು ನಿರ್ವಿುಸಿ, ಅಲ್ಲಿ ಕಲೆ, ವೃತ್ತಿ, ಆಟಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಲು ಮಕ್ಕಳನ್ನು ಉತ್ತೇಜಿಸುವುದು. ಶಾಲೆಗಳ ಉಚಿತ ಮೂಲಸೌಕರ್ಯಗಳನ್ನು ಸಾಮಾಜಿಕ ಚೇತನಾ ಕೇಂದ್ರಗಳನ್ನಾಗಿ ಬಳಸಿಕೊಳ್ಳಬೇಕು.
ಸಮರ್ಥ ಶಿಕ್ಷಕರ ನೇಮಕಾತಿ:ದೃಢ, ಪಾರದರ್ಶಕ ಪ್ರಕ್ರಿಯೆ ಮೂಲಕ ಶಿಕ್ಷಕರ ನೇಮಕಾತಿ ಮಾಡುವುದರ ಜತೆಗೆ ಕೇವಲ ಮೆರಿಟ್, ಕೌಶಲ್ಯ ಹಾಗೂ ಸಾಮರ್ಥ್ಯ ಆಧರಿಸಿ ಶಿಕ್ಷಕರಿಗೆ ಬಡ್ತಿ ನೀಡುವುದು. ಏಕರೂಪದ ಶಿಕ್ಷಕರ ರಾಷ್ಟ್ರೀಯ ವೃತ್ತಿಪರ ಮಾನದಂಡಗಳನ್ನು 2020ರ ವೇಳೆಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು ಎನ್​ಸಿಇಆರ್​ಟಿ, ಎಸ್​ಸಿಇಆರ್​ಟಿ, ಶಿಕ್ಷಕರು ಮತ್ತು ತಜ್ಞರೊಂದಿಗೆ ರ್ಚಚಿಸಿ ಸಿದ್ಧಪಡಿಸಲಾಗುವುದು.
ಶಿಕ್ಷಕರ ಶಿಕ್ಷಣ:ಶಿಕ್ಷಕರ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮವನ್ನು ಎನ್​ಸಿಟಿಇ ಮತ್ತು ಎನ್​ಸಿಇಆರ್​ಟಿ ರೂಪಿಸಲಿವೆ. 2030ರ ವೇಳೆಗೆ ಬೋಧನೆಗೆ ಬೇಕಾದ ಕನಿಷ್ಠ ಶೈಕ್ಷಣಿಕ ಅರ್ಹತೆಯು 4 ವರ್ಷದ ಬಿ.ಎಡ್ ಆಗಿರಲಿದೆ.
ಸಮಗ್ರ ಬಹುಶಿಸ್ತೀಯ ಶಿಕ್ಷಣ:ಸ್ನಾತಕಪೂರ್ವ ಶಿಕ್ಷಣವನ್ನು 3 ಅಥವಾ 4 ವರ್ಷಗಳಲ್ಲಿ ಪೂರ್ಣಗೊಳಿಸುವ ಅವಕಾಶವಿರಲಿದೆ. ಇದರಲ್ಲಿ ಬಹು ನಿರ್ಗಮನದ ಆಯ್ಕೆಗಳೂ ಇರಲಿವೆ. ಉದಾಹರಣೆಗೆ, ಒಂದು ವರ್ಷದ ಪದವಿಗೆ ಪ್ರಮಾಣಪತ್ರ, 2 ವರ್ಷದ ಬಳಿಕ ಅಡ್ವಾನ್ಸ್​ಡ್ ಡಿಪ್ಲೊಮಾ, ಮೂರು ವರ್ಷದ ಬಳಿಕ ಪದವಿ, ನಾಲ್ಕು ವರ್ಷಗಳ ಪೂರೈಸಿದವರಿಗೆ ಸಂಶೋಧನಾ ಪದವಿ ಸರ್ಟಿಫಿಕೇಟ್​ಗಳನ್ನು ಪಡೆಯುವ ಆಯ್ಕೆಗಳಿರುತ್ತವೆ. ಸಂಶೋಧನಾ ಸಂಸ್ಕೃತಿ ಬೆಳೆಸಲು ಮತ್ತು ಉನ್ನತ ಶಿಕ್ಷಣದಲ್ಲಿ ಸಂಶೋಧನಾ ಸಾಮರ್ಥ್ಯ ಹೆಚ್ಚಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಲಾಗುವುದು.
ಹೊಸ ಪಠ್ಯಕ್ರಮ, ಶಿಕ್ಷಣ ಶಾಸ್ತ್ರದಲ್ಲಿ ಸುಧಾರಣೆ:21ನೇ ಶತಮಾನಕ್ಕೆ ಪೂರಕ ಎನಿಸುವ ಕೌಶಲ್ಯ ಸಾಧನೆ, ಅಗತ್ಯ ಕಲಿಕೆ, ವಿಮರ್ಶಾತ್ಮಕ ಚಿಂತನೆ ಹೆಚ್ಚಿಸುವುದು ಹೊಸ ಪಠ್ಯಕ್ರಮ, ಶಿಕ್ಷಣ ಶಾಸ್ತ್ರದ ಮುಖ್ಯ ಉದ್ದೇಶ. ಇದರಿಂದ ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿ ಸಾಧ್ಯ. ವಿಷಯಗಳನ್ನು ಆಯ್ಕೆ ಮಾಡುವುದರಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇರಲಿದೆ. ಇಂಟರ್ನ್ ಶಿಪ್​ಗಳನ್ನೊಳಗೊಂಡ ವೃತ್ತಿಪರ ಶಿಕ್ಷಣ ತರಬೇತಿ 6ನೇ ತರಗತಿಯಿಂದಲೇ ಆರಂಭಗೊಳ್ಳಲಿದೆ.
ಜಿಇಆರ್ ಶೇ.50ಕ್ಕೆ ಏರಿಸುವುದು:ವೃತ್ತಿಪರ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು (ಜಿಇಆರ್) 2035ರ ವೇಳೆಗೆ ಶೇ. 26.6ರಿಂದ (2018) ಶೇ.50ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 3.50 ಕೋಟಿ ಸೀಟುಗಳು ಹೆಚ್ಚಾಗಲಿವೆ.
ಹೊಸ ನೀತಿ ರೂಪಿಸಿದ ಡಾ.ಕಸ್ತೂರಿ ರಂಗನ್, ಡಾ. ಎಂ.ಕೆ. ಶ್ರೀಧರ, ಇತರ ಎಲ್ಲ ಸದಸ್ಯರ ಶ್ರಮ ಸಾರ್ಥಕವಾಗಿದೆ. 34 ವರ್ಷಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿರುವುದು ಭಾರತದ ಭದ್ರ ಭವಿಷ್ಯಕ್ಕೆ ಬರೆದ ಮುನ್ನುಡಿಯಾಗಿದೆ. ಇದರಿಂದ ಶಿಕ್ಷಣದ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
| ಡಾ. ರಘು ಅಕಮಂಚಿ, ಅಧ್ಯಕ್ಷ, ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘ
ನೂತನ ಶಿಕ್ಷಣ ನೀತಿಯ ಪ್ರಮುಖ ಅಂಶಗಳನ್ನು ನಮ್ಮ ರಾಜ್ಯದಲ್ಲಿಯೂ ಅಳವಡಿಸುವತ್ತ ನಮ್ಮ ಇಲಾಖೆ ಚಿಂತನೆ ನಡೆಸಿದೆ. ಹೊಸ ಶಿಕ್ಷಣ ನೀತಿಯಿಂದ ಸರ್ವರಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕೆದೆ ಎಂಬುದು ನಮ್ಮೆಲ್ಲರ ಆಕಾಂಕ್ಷೆ.
| ಎಸ್.ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
