ನವದೆಹಲಿ :ಕೆಲವು ಮಾಧ್ಯಮಗಳ ವರದಿಗಳಲ್ಲಿ ಡಬಲ್​ ಮ್ಯೂಟಂಟ್​ ಅಥವಾ ಬಿ.1.617 ಕರೊನಾ ರೂಪಾಂತರಿ ವೈರಸ್​ಅನ್ನು ಇಂಡಿಯನ್ ವೇರಿಯೆಂಟ್​ ಎನ್ನುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ) ಈ ಶಬ್ದಗಳನ್ನು ಬಳಸಿಲ್ಲದಿರುವುದರಿಂದ ಇದು ಅಸಮಂಜಸ ಎಂದು ಕೇಂದ್ರ ಸರ್ಕಾರ ಹೇಳಿದೆ.
“ಡಬ್ಲ್ಯೂಎಚ್​ಒ ಬಿ.1.617 ಅನ್ನು ವೇರಿಯೆಂಟ್ ಆಫ್​ ಗ್ಲೋಬಲ್ ಕನ್​​ಸರ್ನ್​ ಎಂದು ವಿಂಗಡಿಸಿರುವ ಸುದ್ದಿಯನ್ನು ವರದಿ ಮಾಡುವಾಗ ಕೆಲವು ಮಾಧ್ಯಮಗಳು ಅದನ್ನು ‘ಇಂಡಿಯನ್ ವೇರಿಯೆಂಟ್​’ ಎಂದು ಕರೆದಿವೆ. ಈ ವರದಿಗಳು ಯಾವುದೇ ಆಧಾರವನ್ನು ಹೊಂದಿಲ್ಲ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿಕೆ ನೀಡಿದೆ. ಡಬ್ಲ್ಯೂಎಚ್​​ಒ ಈ ಬಗ್ಗೆ ಪ್ರಕಟಿಸಿದ 32 ಪುಟಗಳ ದಾಖಲೆಯಲ್ಲಿ ಎಲ್ಲೂ ಈ ಶಬ್ದಪ್ರಯೋಗ ಮಾಡಿಲ್ಲ. ವಸ್ತುತಃ ಒಮ್ಮೆಯೂ ಇಂಡಿಯನ್ ಎಂಬ ಪದಪ್ರಯೋಗ ಕೂಡ ಮಾಡಿಲ್ಲ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ:ಪಡಿತರ ಪಡೆಯಲು ಈ ತಿಂಗಳು ಹಲವು ಸೌಲಭ್ಯ ; ಬೆರಳಚ್ಚು ಕಡ್ಡಾಯವಲ್ಲ !
ಡಬ್ಲ್ಯೂಎಚ್​​ಒ ಕೂಡ ಈ ಬಗ್ಗೆ ಸ್ಪಷ್ಟನೆ ಜಾರಿಗೊಳಿಸಿದ್ದು, ಸಂಸ್ಥೆಯು ರೂಪಾಂತರಿಗಳನ್ನು ಅವು ಮೊದಲು ವರದಿಯಾದ ದೇಶಗಳ ಹೆಸರಿಟ್ಟು ಕರೆಯುವುದಿಲ್ಲ. ಬದಲಿಗೆ ವೈಜ್ನಾನಿಕ ಹೆಸರುಗಳಿಂದ ಕರೆಯುತ್ತದೆ. ಅದನ್ನೇ ನೀವೂ ಮಾಡಿ ಎಂದು ಕೆಲವು ಸುದ್ದಿಸಂಸ್ಥೆಗಳನ್ನು ಟ್ಯಾಗ್ ಮಾಡಿ ಟ್ವೀಟ್​ ಮಾಡಿದೆ.
ನಿನ್ನೆ ಪ್ರಕಟವಾದ ಡಬ್ಲ್ಯೂಎಚ್​​ಒನ ವರದಿಯಲ್ಲಿ, ಸಾರ್ಸ್​-ಕೋವ್​-2ನ ಬಿ.1.617 ವೇರಿಯೆಂಟ್​ ಮೊದಲು ಭಾರತದಲ್ಲಿ ಅಕ್ಟೋಬರ್ 2020 ರಲ್ಲಿ ಕಂಡುಬಂತು. ಅದು ಅಧಿಕ ಹರಡುವಿಕೆ ಹೊಂದಿದ್ದು 44 ದೇಶಗಳಲ್ಲಿ ಕಂಡುಬಂದಿದೆ ಎಂದು ಹೇಳಿತ್ತು. ಇದನ್ನು ಜಾಗತಿಕ ಮಟ್ಟದಲ್ಲಿ ಕಾಳಜಿ ವಹಿಸಬೇಕಾದ ರೂಪಾಂತರಿ(ವೇರಿಯೆಂಟ್​ ಆಫ್ ಕನ್​​ಸರ್ನ್​) ಎಂದು ವಿಂಗಡಿಸುತ್ತಿದ್ದೇವೆ ಎಂದು ಹೇಳಿತ್ತು. ಈ ಪಟ್ಟಿಯಲ್ಲಿ ಈಗಾಗಲೇ ಇಂಗ್ಲೆಂಡ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ ವೈರಸ್ ರೂಪಾಂತರಿಗಳು ಸೇರಿವೆ.(ಏಜೆನ್ಸೀಸ್)
ಪ್ರಾಣ ಕೈಗೆ ನೀಡಿದವರಿಗೆ ನಂಬಿಕೆದ್ರೋಹ… 7 ಜನರಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿದ ನರ್ಸ್​!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 10 =
Remember me
