ನವದೆಹಲಿ:ಭಾರತೀಯ ರೈಲ್ವೆ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ಸೆರೆಹಿಡಿಯಲಾದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಮಾಡುವ ತಪ್ಪುಗಳನ್ನು ಒಮ್ಮೆ ಕ್ಷಮಿಸಬಹುದು. ಆದ್ರೆ, ಪದೇ ಪದೇ ಇಂತಹದ್ದೇ ತಪ್ಪು ಮಾಡಿದರೆ, ಹೇಗೆ ಕ್ಷಮಿಸೋದು? ಏನೂ ಅಂತ ಹೇಳೋದು ನೀವೇ ಹೇಳಿ? ಎಂದು ಹೌಸ್​ಕೀಪಿಂಗ್​ ಸಿಬ್ಬಂದಿ  ತೋಡಿಕೊಂಡ ಅಳಲು ಇದೀಗ ಸಾರ್ವಜನಿಕರನ್ನು ಕೆರಳಿಸಿದೆ.
ಇದನ್ನೂ ಓದಿ:ಊರ್ವಶಿ ರೌಟೇಲಾ ಧರಿಸಿದ ಈ ಎರಡು ಡ್ರೆಸ್​​ ಬೆಲೆ 105 ಕೋಟಿ ರೂ.! ಅಬ್ಬಬ್ಬಾ ಬೆಲೆ ಕೇಳಿ ಸುಸ್ತಾಯ್ತು ಎಂದ್ರು ಫ್ಯಾನ್ಸ್..​​
ಕಡಿಮೆ ವೆಚ್ಚದಲ್ಲಿ ಸುಖಕರ ಪ್ರಯಾಣ ಮಾಡಲು ರೈಲು ಉತ್ತಮ ಎಂದು ಯೋಚಿಸುವ ಜನರು, ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡಲು ಇಚ್ಛಿಸುತ್ತಾರೆ. ಈ ವೇಳೆ ತಾವು ತರುವ ತಿಂಡಿ-ತಿನಿಸುಗಳ ಪೇಪರ್​, ಕವರ್​ಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರಯಾಣಿಕರು, ಇದರಿಂದ ಇತರರಿಗೆ ಮತ್ತು ಅದನ್ನು ಸ್ವಚ್ಛಗೊಳಿಸುವ ನಿಬ್ಬಂದಿಗಳಿಗೆ ಎಷ್ಟು ಕಿರಿಕಿರಿ ಉಂಟಾಗುತ್ತದೆ ಎಂಬುದರ ಬಗ್ಗೆ ಕಿಂಚಿತ್ತು ತಲೆಕಡಿಸಿಕೊಳ್ಳುವುದಿಲ್ಲ. ಸದ್ಯ ಇದೇ ವಿಚಾರಕ್ಕೆ ಸಾರ್ವಜನಿಕರು ಇದೀಗ ಕಿಡಿಕಾರಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ಹೊರಹಾಕಿದ್ದಾರೆ.
https://x.com/Madan_Chikna/status/1794214910148415708?ref_src=twsrc%5Etfw%7Ctwcamp%5Etweetembed%7Ctwterm%5E1794214910148415708%7Ctwgr%5E1f3369cc651062cb61f4868043ec07c8cd7e6068%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fplease-use-dustbins-viral-video-records-irctc-housekeeping-staff-sweeping-under-berths-to-take-out-huge-trash
ರೈಲಿನ ಬೋಗಿಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಹೌಸ್‌ಕೀಪಿಂಗ್ ಸಿಬ್ಬಂದಿಯೊಬ್ಬರು, ಪ್ರಯಾಣಿಕರು ಕುಳಿತುಕೊಳ್ಳಲು ಮೀಸಲಿಟ್ಟ ಆಸನದ ಕೆಳಗೆ ಹಾಕಿರುವ ಕಸದ ರಾಶಿಯನ್ನು ತೋರಿಸಿ, ಈ ರೀತಿ ಮಾಡಿದ್ರೆ ಹೇಗೆ? ದಯವಿಟ್ಟು ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯಬೇಡಿ. ಕಸದಬುಟ್ಟಿಗೆ ಹಾಕುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನು ರೆಕಾರ್ಡ್​ ಮಾಡಿಕೊಂಡ ಪ್ರಯಾಣಿಕರೊಬ್ಬರು, ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ,(ಏಜೆನ್ಸೀಸ್).
ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
