ನವದೆಹಲಿ:ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಿಲಿಟರಿ ಪರೇಡ್ ಕುರಿತು ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ. ಇತರ ದೇಶಗಳ ಸೈನ್ಯಕ್ಕೆ ಸಲಹೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಸೈನಿಕ, ರೈತ ಭಗವಂತನಿಗೆ ಸಮಾನ
ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥ್​ನಲ್ಲಿ ಶುಕ್ರವಾರ ನಡೆದ ಪರೇಡ್ ಆಕರ್ಷಕವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ನಮ್ಮ ಭಾರತೀಯ ಸೇನೆಯ ಶಕ್ತಿಯನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆಯನ್ನೂ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಪರೇಡ್‌ನ ಭಾಗವಹಿಸಿದ್ದ ಸೇನಾಪಡೆಗಳ ವೀಡಿಯೊವನ್ನು ಪೋಸ್ಟ್ ಮಾಡಿರುವ ಅವರು, “ಇತರ ದೇಶಗಳ ಸೈನ್ಯಕ್ಕೆ ನನ್ನ ವೈಯಕ್ತಿಕ ಸಲಹೆ ನೀಡಿದ್ದಾರೆ. ಭಾರತೀಯ ಸೇನೆಯೊಂದಿಗೆ ಎಂದಿಗೂ ಗೊಂದಲಕ್ಕೀಡಾಗಿ ಎದುರು ಬೀಳಬೇಡಿ, ಕಾಲುಕೆರೆದು ಜಗಳಕ್ಕೆ ಬರಬೇಡಿ” ಎಂದು ಬರೆದಿದ್ದಾರೆ.
ನಮ್ಮ ಸೇನೆಯ ಶಕ್ತಿ ಸಾಮರ್ಥ್ಯಗಳನ್ನು ಉಲ್ಲೇಖಿಸಿ ‘ಭಾರತ ಬಲಿಷ್ಠವಾಗಿದೆ’ ಎಂಬರ್ಥದಲ್ಲಿ ಎಮೋಜಿಗಳನ್ನು ಸೇರಿಸಲಾಗಿದೆ. ಈ ಪೋಸ್ಟ್ ಈಗ ವೈರಲ್ ಆಗಿದೆ.
ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಮ್ಮ ಸೇನಾ ಶಕ್ತಿಯನ್ನು ಜಗತ್ತಿಗೆ ತೋರಿಸಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಶಸ್ತ್ರಾಸ್ತ್ರಗಳ ಜೊತೆಗೆ, ನಾಗ್ ಕ್ಷಿಪಣಿಗಳು, ಟಿ-90 ಭೀಷ್ಮ ಯುದ್ಧ ಟ್ಯಾಂಕ್‌ಗಳು, ಡ್ರೋನ್ ಜಾಮರ್‌ಗಳು, ಕಣ್ಗಾವಲು ವ್ಯವಸ್ಥೆಗಳು, ವಾಹನ ಮೌಂಟೆಡ್ ಮೋಟಾರ್‌ಗಳು, ಪಿನಾಕಾ ಮಲ್ಟಿಪಲ್ ರಾಕೆಟ್ ಸಿಸ್ಟಮ್, ವೆಪನ್ ಲೊಕೇಶನ್ ರಾಡಾರ್ ಸಿಸ್ಟಮ್‌ಗಳು. ಬಿಎಂಪಿ -2 ಸಶಸ್ತ್ರ ಪಡೆಗಳನ್ನು ಪ್ರದರ್ಶಿಸಲಾಯಿತು. ಇದೇ ಪ್ರಥಮ ಬಾರಿಗೆ ಮೂರು ಪಡೆಗಳಿಗೆ ಸೇರಿದ ಮಹಿಳೆಯರು ಪ್ರದರ್ಶಿಸಿದ ಮೆರವಣಿಗೆ ಆಕರ್ಷಕವಾಗಿತ್ತು.
ಮೂರೇ ನಿಮಿಷದಲ್ಲಿ ಈ ಸ್ಕೂಟರ್​ ಕಾರ್​ ಆಗುತ್ತೆ.. ಸ್ಟಾರ್ಟಪ್​ನ ವಿನೂತನ ಆವಿಷ್ಕಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
