ನವದೆಹಲಿ:ಜಗತ್ತಿನ ಹಲವು ದೇಶಗಳು ಕೊವಿಡ್​-19 ಲಸಿಕೆಯನ್ನು ಕಂಡುಹಿಡಿಯುವುದರಲ್ಲಿ ತೊಡಗಿಕೊಂಡಿದ್ದಾರೆ. ರಷ್ಯಾ, ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಲಸಿಕೆ ರೆಡಿ ಆಗಿದ್ದು, ಮಾನವರ ಮೇಲಿನ ಪ್ರಯೋಗದ ಹಂತ ತಲುಪಿದೆ. ಒಟ್ಟು 150 ಲಸಿಕೆಗಳು ಪ್ರಯೋಗದ ವಿವಿಧ ಹಂತದಲ್ಲಿವೆ.
ಹೀಗಿರುವಾಗ ವಿಶ್ವ ಆರೋಗ್ಯ ಸಂಸ್ಥೆ ಒಂದು ಕಹಿ ಸತ್ಯವನ್ನು ಹೇಳಿದೆ. ಇನ್ನೇನು ಒಂದೆರಡು ತಿಂಗಳಲ್ಲಿ ಲಸಿಕೆ ಲಭ್ಯವಾಗಬಹುದು ಎಂಬ ನಿರೀಕ್ಷೆಯ ಮಧ್ಯೆ ಡಬ್ಲ್ಯೂಎಚ್​ಒದ ಈ ಹೇಳಿಕೆ ನಿರಾಸೆ ಮೂಡಿಸಿದೆ.
2021ಕ್ಕೂ ಮೊದಲು ಯಾವ ಕಾರಣಕ್ಕೂ ಕೊವಿಡ್​-19 ಲಸಿಕೆ ಲಭ್ಯವಾಗುವುದಿಲ್ಲ ಎಂದು ಡಬ್ಲ್ಯೂಎಚ್​ಒ ಹೇಳಿದೆ. ಕೆಲವು ಲಸಿಕೆಗಳು ಈಗಾಗಲೇ ಮಾನವರ ಮೇಲಿನ ಪ್ರಯೋಗದ ಹಂತದಲ್ಲಿದ್ದು, ಸೆಪ್ಟೆಂಬರ್​ ಅಷ್ಟರಲ್ಲಿ ಯಾವುದಾದರೂ ಒಂದು ಲಸಿಕೆ ಸಿಕ್ಕು, ಕೊವಿಡ್​ನಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು ಎಂದುಕೊಂಡಿದ್ದವರಿಗೆ ಇದು ಬೇಸರದ ಸಂಗತಿಯಾಗಿದೆ.ಇದನ್ನೂ ಓದಿ:ಪತ್ನಿ ಸಾವಿಗೀಡಾದ ಬಳಿಕ ನಿತ್ಯ ಕಿರುಕುಳ: ಅಪ್ರಾಪ್ತ ಬಾಲಕಿಯಿಂದಲೇ ತಂದೆಯ ಸಾವು
ಕೊವಿಡ್​-19ಗೆ ಸೂಕ್ತವಾದ ಲಸಿಕೆಯನ್ನು ನಾವೂ ನಿರೀಕ್ಷೆ ಮಾಡುತ್ತಿದ್ದೇವೆ. ಅದನ್ನು ಜಗತ್ತಿಗೆ ಹಂಚುವುದು ನಮ್ಮ ಕರ್ತವ್ಯ. ವೈರಸ್​ನ್ನು ನಿರ್ಮೂಲನೆ ಮಾಡಲು ಲಸಿಕೆಯೇ ಅತ್ಯಂತ ಮುಖ್ಯ. ಹಲವು ಲಸಿಕೆಗಳು ಪ್ರಯೋಗದ ಮೂರನೇ ಹಂತದಲ್ಲಿವೆ. ಇವ್ಯಾವವೂ ವಿಫಲವಾಗಿಲ್ಲ. ಸುರಕ್ಷತೆ ಹಾಗೂ ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸುತ್ತವೆ ಎಂದು ಸಾಬೀತಾಗಿದೆ. ಆದರೆ ಇಷ್ಟೆಲ್ಲ ಆದರೂ ಕೂಡ ಲಸಿಕೆ 2021ರ ಒಳಗೆ ಹೊರಬೀಳುವುದು ಕಷ್ಟ ಎಂದು ವಿಶ್ವ ಆರೋಗ್ಯ ಸಂಸ್ಥೆ ತುರ್ತು ತಜ್ಞ ಮೈಕ್​ ರ್ಯಾನ್​​ ತಿಳಿಸಿದ್ದಾರೆ.
ಸಮರ್ಥ ಲಸಿಕೆಯನ್ನು ಜಗತ್ತಿಗೇ ವಿತರಿಸಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಅಗತ್ಯ. ಬರೀ ಶ್ರೀಮಂತರು, ಬಡವರಿಗೆ ಮಾತ್ರ ಲಸಿಕೆಯನ್ನು ಕೊಡುವುದಲ್ಲ. ಜಗತ್ತಿನ ಪ್ರತಿಯೊಬ್ಬರಿಗೂ ಇದರ ಅವಶ್ಯಕತೆ ಇರುತ್ತದೆ. ಹಾಗಾಗಿ 2021 ನಂತರವೇ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ.(ಏಜೆನ್ಸೀಸ್​)
ಪಾಕಿಸ್ತಾನ​ ಪರ ಆಡಲು ಬಯಸಿದ್ದ ಇಮ್ರಾನ್​ ತಾಹಿರ್​ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 3 =
Remember me
