ನವದೆಹಲಿ:ರಾಷ್ಟ್ರ ರಾಜಧಾನಿಯ ಹಿತದೃಷ್ಟಿಯಿಂದ ಆರೋಗ್ಯ ಆ್ಯಪ್​ ಸೇತು ಹೊಂದಿರದವರಿಗೆ ದೆಹಲಿಗೆ ಪ್ರವೇಶಾವಕಾಶ ಕೊಡಬಾರದು ಎಂದು ಲೆಫ್ಟಿನೆಂಟ್​ ಗವರ್ನರ್​​​ ಅನಿಲ್​ ಬೈಜಾಲ್​ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಶುಕ್ರವಾರ ಆಯೋಜನೆಗೊಂಡಿದ್ದ ಕೋವಿಡ್​ 19 ಸಂಬಂಧಿತ ಸಭೆಯಲ್ಲಿ ಅವರು ಈ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಈ ಸಲಹೆ ಕುರಿತು ದೆಹಲಿ ಸರ್ಕಾರ ಗಂಭೀರ ಚಿಂತನೆ ಆರಂಭಿಸಿದೆ. ಆದರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.
ರಾಷ್ಟ್ರೀಯ ಕಾಯಿಲೆಗಳ ನಿಯಂತ್ರಣ ಕೇಂದ್ರದ ನಿರ್ದೇಶಕ ಸುರ್ಜಿತ್​ ಕುಮಾರ್​ ಸಿಂಗ್​ ಕೂಡ ಇದೇ ಬಗೆಯ ಶಿಫಾರಸು ಮಾಡಿದ್ದರು. ಜತೆಗೆ 3, 5 ಮತ್ತು 14ನೇ ದಿನ ಸೇರಿ ರ‍್ಯಾಪಿಡ್​ ಟೆಸ್ಟ್​ ಸೇರಿ ದೆಹಲಿಯಲ್ಲಿ ಟೆಸ್ಟಿಂಗ್​ ಪ್ರಮಾಣವನ್ನು ಹೆಚ್ಚಿಸಬೇಕು. ತನ್ಮೂಲಕ ಕೋವಿಡ್​ 19 ಸೋಂಕಿತರು ಯಾರೂ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದರು.
ಇದನ್ನು ಆಲಿಸಿದ ಬಳಿಕ ಆ ಸಭೆಯಲ್ಲಿ ಲೆಫ್ಟಿನೆಂಟ್​ ಗವರ್ನರ್​​​ ಅನಿಲ್​ ಬೈಜಾಲ್​ ಕೂಡ ಆರೋಗ್ಯ ಸೇತು ಆ್ಯಪ್​ ಹೊಂದಿದ್ದರೆ ಮಾತ್ರ ದೆಹಲಿಗೆ ಪ್ರವೇಶ ಕೊಡಬೇಕು ಎಂದು ಹೇಳಿದರು ಎನ್ನಲಾಗಿದೆ.
ಕ್ಷೌರದಂಗಡಿ, ಸಲೂನ್​, ರೆಸ್ಟೋರಂಟ್​, ಮದ್ಯದಂಗಡಿ ತೆರೆಯುವಂತಿಲ್ಲ; ಯಾವುದಕ್ಕೆಲ್ಲ ಕೇಂದ್ರ ಗೃಹ ಸಚಿವಾಲಯದಿಂದ ನಿರ್ಬಂಧ ತೆರವು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + thirteen =
Remember me
