ಪಣಜಿ:ಏನೇ ಆಗಲಿ.. ಈ ಸಲ ಗೋವಾದಲ್ಲಿ ನ್ಯೂ ಇಯರ್ ಪಾರ್ಟಿ ಮಾಡಬೇಕು. ಅಲ್ಲಿನ ಕ್ಯಾಸಿನೋಗೆ ಹೋಗಬೇಕು, ಕುಣಿಯಬೇಕು, ಕುಡಿಯಬೇಕು ಎಂದು ಆಸೆ ಇಟ್ಟುಕೊಂಡಿರುವವರಿಗಂತೂ ಇದು ಬೇಸರದ ವಿಷಯ.
ಏಕೆಂದರೆ ಕರೊನಾ ಹಾವಳಿ ಹಿನ್ನೆಲೆಯಲ್ಲಿ ಅಲ್ಲಿ ಈ ಸಲ ಕ್ಯಾಸಿನೋ ಆರಂಭವಾಗುವ ಕುರಿತು ಸಂದೇಹಗಳಿವೆ. ಒಂದುವೇಳೆ ಕ್ಯಾಸಿನೋ ಆರಂಭಿಸುವುದಿದ್ದರೂ ಬೇಡ ಎಂಬ ಒತ್ತಾಯವೂ ಇದೆ.
ಮತ್ತೊಂದೆಡೆ ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಾಗಿದೆ. ಅದು ನಿಯಂತ್ರಣಕ್ಕೆ ಬರುವವರೆಗೂ ಕ್ಯಾಸಿನೋ ಮರು ಆರಂಭಕ್ಕೆ ಅವಕಾಶ ನೀಡಬಾರದು ಎಂಬುದಾಗಿ ಅಲ್ಲಿನ ಯುವ ಕಾಂಗ್ರೆಸ್ ಒತ್ತಾಯಿಸಿದೆ. ಗೋವಾ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಗೋವಾ ಯುವ ಕಾಂಗ್ರೆಸ್ ಅಧ್ಯಕ್ಷ ವರದ್ ಮರ್ಡೋಳ್ಕರ್ ಇಂಥದ್ದೊಂದು ಆಗ್ರಹ ವ್ಯಕ್ತಪಡಿಸಿ ಮನವಿ ಸಲ್ಲಿಸಿದ್ದಾರೆ.
ಕ್ಯಾಸಿನೋ ಆರಂಭವಾದರೆ ಕರೊನಾ ಪಿಡುಗಿಗೆ ಬಹಿರಂಗ ಆಹ್ವಾನ ಕೊಟ್ಟಂತೆ. ಹೀಗಾಗಿ ಸರ್ಕಾರ ಜನಸಾಮಾನ್ಯರ ಜೀವದ ಜತೆ ಚೆಲ್ಲಾಟವಾಡಬಾರದು. ಕರೊನಾ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಕ್ಯಾಸಿನೋ ಮರು ಆರಂಭಿಸಲು ಅನುಮತಿ ನೀಡಬಾರದು ಎಂದು ಅವರು ಕೋರಿಕೊಂಡಿದ್ದಾರೆ. ನ. 1ರಿಂದ ಕ್ಯಾಸಿನೋಗಳನ್ನು ಮತ್ತೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಈ ಮನವಿ ಮಾಡಿಕೊಂಡಿದೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 4 =
Remember me
