ನವದೆಹಲಿ:ನೀವೆಲ್ಲಾ ನಿಜವಾಗಿಯೂ ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದೇ ಆದಲ್ಲಿ, ನನಗೆ ಕೃತಜ್ಞತೆ ಸಲ್ಲಿಸುವ ಬದಲು ಬಡ ಕುಟುಂಬದ ಬಗ್ಗೆ ಕಾಳಜಿ ತೆಗೆದುಕೊಳ್ಳಿ. ಕೊನೆಯ ಪಕ್ಷ ಕರೊನಾ ವೈರಸ್‌ ಸಮಸ್ಯೆ ಮುಗಿಯುವವರೆಗಾದರೂ ಬಡವರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕರೊನಾ ವೈರಸ್‌ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಪ್ರಧಾನಿಯವರಿಗೆ ಇದೇ 12ರಂದು ಸಂಜೆ 5 ಗಂಟೆಗೆ ನಿಲ್ಲುವ ಮೂಲಕ ಗೌರವ ಸಲ್ಲಿಸಬೇಕು ಎಂದು ವೈರಲ್‌ ಆಗಿರುವ ಪೋಸ್ಟರ್‌ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್‌ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮೋದಿ ಅವರು, ಇಂಥ ಪೋಸ್ಟ್‌ಗಳನ್ನು ದಯವಿಟ್ಟು ಮಾಡಬೇಡಿ’ ಎಂದಿದ್ದಾರೆ.
ನನ್ನ ಮೇಲೆ ಗೌರವ ಇದ್ದರೆ ನಾನು ಹೇಳಿದಂತೆ ಕೇಳಿ. ಈಗ ಬಡವರಿಗೆ ಸಹಾಯದ ಅಗತ್ಯ ತುಂಬಾ ಇದೆ. ಕೊನೆಯ ಪಕ್ಷ ಈ ಸಮಯದಲ್ಲಿಯಾದರೂ ಅವರ ನೆರವಿಗೆ ಧಾವಿಸಿ. ಇದೇ ನೀವು ನನಗೆ ಕೊಡುವ ಗೌರವ, ನನ್ನ ಮೇಲೆ ತೋರಿಸುವ ಪ್ರೀತಿ, ವಿಶ್ವಾಸ ಎಂದಿದ್ದಾರೆ. ಈ ಕುರಿತು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿಯೂ ಹೇಳಿದ್ದಾರೆ.
‘ಇವರು ನಮಗಾಗಿ ಮತ್ತು ದೇಶಕ್ಕಾಗಿ ಬಹಳಷ್ಟು ಸಹಾಯ ಮಾಡಿದ್ದಾರೆ. ಮಾರ್ಚ್‌ 12ರ ಭಾನುವಾರ ಸಂಜೆ 5 ಗಂಟೆಗೆ ಎಲ್ಲರೂ ತಮ್ಮ ಬಾಲ್ಕನಿಯ ಮೇಲೆ ನಿಂತು ಪ್ರಧಾನಿಗೆ ಐದು ನಿಮಿಷ ನಿಲ್ಲುವ ಮೂಲಕ ಗೌರವ ಸಲ್ಲಿಸಬೇಕು’ ಎಂದು ಬರೆದಿರುವ ಪೋಸ್ಟರ್‌ ಇದಾಗಿದೆ.
ಇದನ್ನು ನೋಡಿದ ಮೋದಿ ಅವರು, ‘ಪ್ರಧಾನಿಗೆ ಗೌರವ ಸೂಚಿಸಲು ಇಂಥದ್ದೊಂದು ಪೋಸ್ಟ್‌ ಹೊರಡಿಸಲಾಗಿದೆ ಎಂದು ನನ್ನ ಗಮನಕ್ಕೆ ಬಂದಿದೆ. ಇದು ಮೋದಿಯನ್ನು ವಿವಾದಕ್ಕೆ ಸಿಲುಕಿಸುವ ಪೋಸ್ಟರ್‌ ಅಂತೆ ತೋರುತ್ತಿದೆ. ಒಂದು ವೇಳೆ ನೀವು ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡಿದ್ದರೂ, ನಾನು ಹೇಳಿದಂತೆ ಕೇಳಿ. ಅದಕ್ಕಿಂತ ದೊಡ್ಡ ಗೌರವ ನನಗೆ ಬೇಕಿಲ್ಲ’ ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.(ಎಜೆನ್ಸೀಸ್​)
मेरे ध्यान में लाया गया है कि कुछ लोग यह मुहिम चला रहे हैं कि 5 मिनट खड़े रहकर मोदी को सम्मानित किया जाए। पहली नजर में तो यह मोदी को विवादों में घसीटने की कोई खुराफात लगती है।
— Narendra Modi (@narendramodi)April 8, 2020

हो सकता है कि यह किसी की सदिच्छा हो, तो भी मेरा आग्रह है कि यदि सचमुच में आपके मन में इतना प्यार है और मोदी को सम्मानित ही करना है तो एक गरीब परिवार की जिम्मेदारी कम से कम तब तक उठाइए, जब तक कोरोना वायरस का संकट है। मेरे लिए इससे बड़ा सम्मान कोई हो ही नहीं सकता।
— Narendra Modi (@narendramodi)April 8, 2020


ಮೌಲಾನಾ ಸಾದ್‌ ಒಂದು ಕೋಟಿ ರೂ. ದೇಣಿಗೆ ಸುದ್ದಿ ಹಿಂದಿನ ಅಸಲಿಯತ್ತು ಫ್ಯಾಕ್ಟ್‌ ಚೆಕ್‌ನಿಂದ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 12 =
Remember me
