ಹೈದರಾಬಾದ್​:ನಟಿ ಮೀನಾ ಅವರ ಪುತ್ರಿ ನೈನಿಕಾ ತನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಎಂದು ಖಾರವಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಬಹುಭಾಷಾ ನಟಿ ಮೀನಾ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಚಿತ್ರರಂಗದಲ್ಲಿ 4 ದಶಕಗಳನ್ನು ಪೂರೈಸಿರುವ ಮೀನಾ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪತಿಯ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ನಟಿ ಮೀನಾ 40 ವರ್ಷದ ಸಂಭ್ರಮ ನಡೆಸಿದರು. ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಪ್ರಭುದೇವ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮೀನಾ ಅವರ ಮಗಳು ಮಾತನಾಡಿರುವ ವೀಡಿಯೋವೊಂದು ಸಖತ್​ ವೈರಲ್​​ ಆಗುತ್ತಿದೆ.
ಇದನ್ನೂ ಓದಿ:Karnataka 2nd PUC Results; ಸಮಾನ ಅಂಕ ಗಳಿಸಿದ ಅವಳಿ ವಿದ್ಯಾರ್ಥಿಗಳು
ವಿಡಿಯೋದಲ್ಲಿ ಏನಿದೆ?:‘ಅಮ್ಮಾ, ನೀವು ತಾಯಿಯಾಗಿ ಮತ್ತು ನಟಿಯಾಗಿ ನನಗೆ ತುಂಬಾ ಹೆಮ್ಮೆ ಇದೆ. ನೀವು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೀರಿ, ನಾನು ಚಿಕ್ಕವಳಿದ್ದಾಗ ನಾವು ಶಾಪಿಂಗ್ ಮಾಲ್‌ಗೆ ಹೋಗಿದ್ದೆವು ಅಲ್ಲಿ ನಾನು ಕಳೆದುಹೋಗಿದ್ದೆ. ನಾನು ಒಂದು ಅಂಗಡಿಯಲ್ಲಿ ಚಾಕಲೇಟ್ ತಿನ್ನುತ್ತಿದ್ದೆ ಆಗ ನೀನು ಭಯದಿಂದ ನನ್ನನ್ನು ಹುಡುಕುತ್ತಿದ್ದೆ. ಅಪ್ಪನ ನಿಧನದ ನಂತರ ನೀನು ತುಂಬಾ ಖಿನ್ನತೆಗೆ ಒಳಗಾಗಿದ್ದೀಯ. ಇಂದಿನಿಂದ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ. ಕೆಲವು ಸುದ್ದಿ ವಾಹಿನಿಗಳು ನಿಮ್ಮ ಬಗ್ಗೆ ಕೆಟ್ಟದಾಗಿ ಮತ್ತು ನಕಾರಾತ್ಮಕವಾಗಿ ಬರೆಯುತ್ತಿವೆ. ನನ್ನ ತಾಯಿ ನಟಿ ಜೊತೆಗೆ ಮನುಷ್ಯಳಾಗಿರುವುದರಿಂದ ಇಂತಹ ಸುದ್ದಿಗಳನ್ನು ಬರೆಯುವುದನ್ನು ನಿಲ್ಲಿಸುವಂತೆ ನಾನು ಅವರಲ್ಲಿ ಮನವಿ ಮಾಡುತ್ತೇನೆ. ಅವಳು ತುಂಬಾ ನೊಂದುಕೊಳ್ಳುತ್ತಾಳೆ’ ಎಂದು ನೈನಿಕಾ ಮನವಿ ಮಾಡಿದ್ದಾರೆ.
அம்மா வந்து ஒரு Heroine ah இருக்கலாம்.. ஆனா உங்கள மாதிரி ஒரு Human தான்.. அவங்களுக்கும் Feelings இருக்கு 🥲❤️❤️#meena#nainika#meena40#ladysuperstar#மீனாpic.twitter.com/rYZA4Avrk2
— Kamala மீனா (@MeenaNavy)April 22, 2023

ಕಳೆದ ವರ್ಷ ಜೂನ್‌ನಲ್ಲಿ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ನಿಧನರಾದರು. ಇದಾದ ನಂತರ ಖಿನ್ನತೆಯಿಂದ ಬಳಲುತ್ತಿದ್ದ ನಟಿ ಮೀನಾ ಅವರನ್ನು ಆಕೆಯ ಸ್ನೇಹಿತರು ರಕ್ಷಿಸಿ ಸಹಜ ಸ್ಥಿತಿಗೆ ತಂದರು. ಪತಿಯ ನಿಧನದ ಬಳಿಕ ತೀವ್ರ ದುಃಖದಲ್ಲಿದ್ದ ಮೀನಾಗೆ ಸುಳ್ಳು ಸುದ್ದಿಗಳ ಕಾಟ ಮತ್ತಷ್ಟು ಕುಗ್ಗುವಂತೆ ಮಾಡಿತ್ತು. ಮೀನಾ 2ನೇ ಮದುವೆಗೆ ಸಿದ್ಧರಾಗಿದ್ದಾರೆ, ನಟ ಧನುಷ್ ಜೊತೆ ಮದುವೆ ಆಗುತ್ತಾರೆ, ಮೀನಾ ಮತ್ತು ಗರ್ಭಿಣಿ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹಲಸಿನ ಹಣ್ಣು ಸಿಕ್ಕಿದ್ರೆ ಬಿಡ್ಬೇಡಿ; ಈ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − nine =
Remember me
