ನವದೆಹಲಿ:ಗಡಿ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಕೀಳಂದಾಜು ಮಾಡಬೇಡಿ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್​ಯಿಂಗ್​ ಟ್ವೀಟ್​ ಮೂಲಕ ಭಾರತವನ್ನು ಎಚ್ಚರಿಸಿದ್ದಾರೆ.ಲಡಾಖ್​ನ ಪೂರ್ವವಲಯದಲ್ಲಿ ಹಾಲಿ ಇರುವ ಪರಿಸ್ಥಿತಿಯನ್ನು ಭಾರತ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅಥವಾ ಗಡಿ ರಕ್ಷಿಸಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಕೀಳಂದಾಜು ಮಾಡಬಾರದು ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.
ಲಡಾಖ್​ನ ಪೂರ್ವಭಾಗದ ಗಾಲ್ವಾನ್​ ಕಣಿವೆಯ ಗಡಿ ಭಾಗದ ಸಾರ್ವಭೌಮತ್ವ ತಮ್ಮದೆಂದು ಹೇಳಿದ್ದ ಚೀನಿ ಮಿಲಿಟರಿ ಹೇಳಿಕೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಅಲ್ಲಗಳೆದ ಮರುದಿನ ಹುವಾ ಚುನ್​ಯಿಂಗ್​ ಈ ಟ್ವೀಟ್​ ಮಾಡಿದ್ದಾರೆ.
ವಾಸ್ತವ ಗಡಿರೇಖೆಯ ಬಳಿ ಜಮಾವಣೆ ಮಾಡಲಾಗಿದ್ದ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವಿಷಯವಾಗಿ ಹಿರಿಯ ಮಿಲಿಟರಿ ಕಮಾಂಡರ್​ಗಳ ನಡುವೆ ಜೂನ್​ 6ರಂದು ಏರ್ಪಟ್ಟಿದ್ದ ಒಪ್ಪಂದಕ್ಕೆ ಚೀನಾದ ಈ ನಿಲುವು ವಿರುದ್ಧವಾಗಿದೆ. ಅದರ ಈ ಹೇಳಿಕೆ ನ್ಯಾಯಸಮ್ಮತವಲ್ಲ ಎಂದು ಭಾರತ ಹೇಳಿತ್ತು.
ಇದನ್ನೂ ಓದಿ:ಸಚಿವ ಸುರೇಶ್ ಕುಮಾರ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು!
ಗಾಲ್ವಾನ್​ ಕಣಿವಯೆ ಬಳಿ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಯೋಧರ ನಡುವೆ ಹೊಯ್​ಕೈ ಏರ್ಪಟ್ಟಿದ್ದು, ಭಾರತದ ಒಬ್ಬ ಕರ್ನಲ್​ ದರ್ಜೆಯ ಅಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. 76ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇವರಲ್ಲಿ 18 ಯೋಧರ ಸ್ಥಿತಿ ಗಂಭೀರವಾಗಿರುವುದಾಗಿ ಹೇಳಲಾಗುತ್ತಿದೆ.
ಈ ಘಟನೆಯ ನಂತರದಲ್ಲಿ ಮ್ಯಾಂಡರಿನ್ ಭಾಷೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಪಶ್ಚಿಮ ಕಮಾಂಡ್, ಗಾಲ್ವಾನ್​ ನದಿ ಕಣಿವೆಯ ಸಾರ್ವಭೌಮತ್ವ ಸದಾ ನಮ್ಮದಾಗಿದೆ ಎಂದು ಹೇಳಿಕೊಂಡಿತ್ತು.ಆದರೆ, ಗಡಿ ಸಾರ್ವಭೌಮತ್ವ ವಿಷಯದಲ್ಲಿ ಅತಿರೇಕದ ಮತ್ತು ಒಪ್ಪಲಾಗದ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಶ್ರೀವಾಸ್ತವ ಹೇಳಿದ್ದರು.
ಸಂಗಾತಿ ಮುಟ್ಟಾದರೆ ಪುರುಷರಿಗೆ ವೇತನಸಹಿತ ರಜೆ ನೀಡುತ್ತಂತೆ ಈ ಕಂಪನಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
