ನವದೆಹಲಿ:ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರೆ ಶುರುವಾದ ದಿನದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ನಾಯಿಗೆ ಹಾಕಿದ್ದ ಬಿಸ್ಕಟ್​ ಅನ್ನು ಕಾರ್ಯಕರ್ತರಿಗೆ ನೀಡಿದ ವಿಚಾರಕ್ಕೆ ರಾಹುಲ್​ ಗಾಂಧಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು ಮತ್ತು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು.
ವೈರಲ್​ ವಿಡಿಯೋದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಿಜೆಪಿಗೆ ನಾಯಿಗಳ ಮೇಲೆ ಯಾಕಿಷ್ಟು ವ್ಯಾಮೋಹ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
#WATCH| On the viral video of him feeding a dog during the 'Bharat Jodo Nyay Yatra', Congress leader Rahul Gandhi says, "…I called the dog and the owner. The dog was nervous, shivering and when I tried to feed it, the dog got scared. So I gave biscuits to the dog's owner and…pic.twitter.com/QhO6QvfyNB
ಇದನ್ನೂ ಓದಿ:ದಳಪತಿ ವಿಜಯ್​ ಹೊಸ ರಾಜಕೀಯ ಪಕ್ಷ; ಸೂಪರ್​ಸ್ಟಾರ್​ ರಜಿನಿಕಾಂತ್​ ಏನಂದ್ರ ಗೊತ್ತಾ?
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಮೊದಲಿಗೆ ನಾನು ಬಿಸ್ಕೆಟ್​ ಕೊಟ್ಟಿರುವ ವ್ಯಕ್ತಿ ನಮ್ಮ ಪಕ್ಷದ ಕಾರ್ಯಕರ್ತರಲ್ಲ ಅವರು ಆ ನಾಯಿಯ ಮಾಲೀಕರು. ನಾನು ಮೊದಲಿಗೆ ನಾಯಿಗೆ ಬಿಸ್ಕೆಟ್​ ತಿನ್ನಿಸಲು ಹೋದಾಗ ಅದು ಹೆದರಿತು ಮತ್ತು ನನ್ನ ಕೈಯಲ್ಲಿರುವ ಬಿಸ್ಕೆಟ್​ಗಳನ್ನು ತಿನ್ನಲಿಲ್ಲ. ನಾನು ಕೂಡಲೇ ಆ ಬಿಸ್ಕೆಟ್​ಗಳನ್ನು ನಾಯಿಯ ಮಾಲೀಕರಿಗೆ ಕೊಟ್ಟೆ ಅವರೇ ಅದನ್ನು ತಿನ್ನಿಸಿದರು ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಪಕ್ಷದ ಬೂತ್ ಏಜೆಂಟರನ್ನು ನಾಯಿಗೆ ಹೋಲಿಸಿದ್ದರು. ರಾಹುಲ್​ ಗಾಂಧಿ ನಾಯಿ ತಿನ್ನದೇ ಇದ್ದಾಗ ಅದೇ ಬಿಸ್ಕೆಟ್ ಅನ್ನು ತಮ್ಮ ಕಾರ್ಯಕರ್ತನಿಗೆ ನೀಡಿದ್ದಾರೆ. ಯಾವ ಪಕ್ಷದ ಅಧ್ಯಕ್ಷ ಮತ್ತು ಯುವರಾಜ ತನ್ನ ಪಕ್ಷದ ಕಾರ್ಯಕರ್ತರನ್ನು ನಾಯಿಗಳಂತೆ ನಡೆಸಿಕೊಳ್ಳುತ್ತಾರೋ ಅಂತಹ ಪಕ್ಷವು ಕಣ್ಮರೆಯಾಗುವುದು ಸಹಜ ಎಂದು ಬಿಜೆಪಿ ಆರೋಪಿಸಿ ಕಿಡಿಕಾರಿತ್ತು.
Pallavi ji, not only Rahul Gandhi but the entire family could not make me eat that biscuit. I am a proud Assamese and Indian . I refused to eat and resign from the Congress.https://t.co/ywumO3iuBr
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six − four =
Remember me
