ನವದೆಹಲಿ :ಲಸಿಕೆ ಹಿಂಜರಿಕೆಯನ್ನು ಮೀರಿ ಆದಷ್ಟು ಬೇಗ ಕರೊನಾ ಲಸಿಕೆ ಪಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ. “ನಾನು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದೀನಿ. ಇನ್ನೇನು 100 ವರ್ಷ ತುಂಬಲಿರುವ ನನ್ನ ತಾಯಿ ಕೂಡ ಲಸಿಕೆ ಪಡೆದಿದ್ದಾರೆ” ಎಂದು ತಿಳಿಸಿದ ಮೋದಿ, ಲಸಿಕೆ ಬಗೆಗಿನ ನಕಾರಾತ್ಮಕ ವದಂತಿಗಳನ್ನು ನಂಬದಂತೆ ಜನರನ್ನು ಕೋರಿದರು.
ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​ನ 78ನೇ ಆವೃತ್ತಿಯಲ್ಲಿ ಇಂದು ಮಾತನಾಡಿದ ಮೋದಿ, “ನಿಮಗೆಲ್ಲಾ ಕೇಳಿಕೊಳ್ಳುತ್ತೇನೆ – ವಿಜ್ಞಾನವನ್ನು ನಂಬಿರಿ. ನಮ್ಮ ವಿಜ್ಞಾನಿಗಳನ್ನು ನಂಬಿರಿ. ಇಡೀ ದೇಶದಲ್ಲಿ 31 ಕೋಟಿಗೂ ಹೆಚ್ಚು ಜನರು ಲಸಿಕೆ ತೆಗೆದುಕೊಂಡಿದ್ದಾರೆ. ಲಸಿಕೆಗೆ ಸಂಬಂಧಿಸಿದ ನಕಾರಾತ್ಮಕ ವದಂತಿಗಳನ್ನು ನಾವು ಎಂದಿಗೂ ನಂಬಬಾರದು” ಎಂದರು.
ಇದನ್ನೂ ಓದಿ:ದೆಹಲಿ : ಒಂದೇ ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ
“ಲಸಿಕೆ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವವರು ಅವರ ಪಾಡಿಗೆ ಇರಲಿ ಬಿಡಿ. ನಾವೆಲ್ಲಾ ನಮ್ಮ ಸುತ್ತಲ ಜನರು ಲಸಿಕೆ ಪಡೆಯುವಂತೆ ಕೆಲಸ ಮಾಡೋಣ. ಕೋವಿಡ್​-19ನ ಅಪಾಯ ಇನ್ನೂ ಇರುವುದರಿಂದ, ಲಸಿಕಾಕರಣದ ಬಗ್ಗೆ ಹೆಚ್ಚು ಒತ್ತು ನೀಡೋಣ ಮತ್ತು ಕೋವಿಡ್​ ಪ್ರೋಟೋಕಾಲ್​ಗಳನ್ನು ಪಾಲಿಸೋಣ” ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದರು.(ಏಜೆನ್ಸೀಸ್)
ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲಿದ್ದಾರೆ ನಟ ಪಂಕಜ್​ ತ್ರಿಪಾಠಿ
ಆರೋಪಿ ಸುಶೀಲ್​ಕುಮಾರ್​ ಜೊತೆ ಪೊಲೀಸರ ಸೆಲ್ಫಿ ಸೆಷನ್!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
