ಬೆಂಗಳೂರು:ನೀವು ಗೂಗಲ್​ ತೆರೆದಾಗ ಅಲ್ಲೊಂದು ಡೂಡಲ್​ ಕಾಣಿಸುತ್ತಲ್ವಾ? ಅದು ದಿನವೂ ಇರೋದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಇರುವುದು. ಇವತ್ತು (ನ.14) ಗೂಗಲ್​ ನ ಡೂಡಲ್​ ಕೊಲ್ಕತ್ತಾದ ಹುಡುಗ ಬಿಡಿಸಿದ್ದು ಇಡೀ ದಿನ ಕಾಣಿಸಲಿದೆ.
ಇತ್ತೀಚೆಗೆ ಗೂಗಲ್​ ಸಂಸ್ಥೆ ಮಕ್ಕಳ ದಿನಾಚರಣೆ ಅಂಗವಾಗಿ ಭಾರತದಲ್ಲಿ ‘Doodle For Google’ ಎನ್ನುವ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯ ವಸ್ತು ‘ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ…’ ಎನ್ನುವುದಾಗಿತ್ತು. ಈ ಸ್ಪರ್ಧೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಲ್ಲಿ ದೇಶದ ನೂರಕ್ಕೂ ಹೆಚ್ಚು ನಗರಗಳಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು. ಅಷ್ಟು ಕಠಿಣ ಸ್ಪರ್ಧೆಯಲ್ಲಿ ಕೊಲ್ಕತ್ತಾದ ಶ್ಲೋಕ್​ ಮುಖರ್ಜಿ ಎನ್ನುವ ಹುಡುಗ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ.
ಶ್ಲೋಕ್​ ಮುಖರ್ಜಿ ತಮ್ಮ ಚಿತ್ರದಲ್ಲಿ ಯೋಗ, ಮಾನವ ಮತ್ತು ತಂತ್ರಜ್ಞಾನ ನಡುವಿನ ಸಂಬಂಧ, ಬಾಹ್ಯಾಕಾಶದಲ್ಲಿ ಸಾಧನೆ, ಪ್ರಕೃತಿ, ಆಯುರ್ವೇದ ಮುಂತಾದ ವಿಷಯಗಳನ್ನು ತನ್ನ ಡೂಡಲ್​ನಲ್ಲಿ ಸೇರಿಸಿದ್ದಾನೆ.
‘ಟಿಂಕಲ್​ ಕಾಮಿಕ್ಸ್​ನ ಸಂಪಾದಕರೂ ಸೇರಿದ್ದ ತೀರ್ಪುಗಾರರ ತಂಡ ಇಪ್ಪತ್ತು ಡೂಡಲ್​ಗಳನ್ನು ಕೊನೆಯ ಹಂತಕ್ಕೆ ಆಯ್ಕೆ ಮಾಡಿತ್ತು. ಕಡೆಗೆ ಆನ್​ಲೈನ್​ ವೋಟಿಂಗ್​ ಮುಖಾಂತರ ಅತ್ಯುತ್ತಮ ಚಿತ್ರವನ್ನು ಆಯ್ಕೆ ಮಾಡಲಾಯಿತು’ ಎಂದು ಗೂಗಲ್​ ಸಂಸ್ಥೆ ಮಾಹಿತಿ ನೀಡಿತು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
