ಮುಂಬೈ:ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಡಬಲ್​ ಡೆಕರ್ ಬಸ್​​ಗಳು ಓಡಾಡುತ್ತಿದ್ದುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥವೇ. ಅಂಥ ಬಸ್​ಗಳು ಸದ್ಯದಲ್ಲೇ ಮತ್ತೆ ರಸ್ತೆಗಿಳಿಯಲಿವೆ. ಇನ್ನು ಮುಂದೆ ಇವೇ ‘ಬೆಸ್ಟ್’ ಎಂಬ ಅಭಿಪ್ರಾಯದೊಂದಿಗೆ ಇಂಥದ್ದೊಂದು ನಿರ್ಧಾರವನ್ನು ತಳೆಯಲಾಗಿದೆ.
ಹೌದು.. ಒಂದೆರಡಲ್ಲ, ಹಲವು ಡಬಲ್ ಡೆಕರ್ ಬಸ್​ಗಳು ಇನ್ಮುಂದೆ ರಸ್ತೆಗೆ ಇಳಿಯಲಿವೆ. ಆದರೆ ಅದು ಬೆಂಗಳೂರಿನಲ್ಲಲ್ಲ, ಬದಲಿಗೆ ಮುಂಬೈನಲ್ಲಿ. ಮುಂಬೈನ ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್​​ಪೋರ್ಟ್​ (BEST) ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆ ಜಂಟಿಯಾಗಿ ಡಬಲ್ ಡೆಕರ್​ ಬಸ್​ಗಳನ್ನು ರಸ್ತೆಗಿಳಿಸಲಿವೆ.
ಅಂದಹಾಗೆ ಹೊಸದಾಗಿ ರಸ್ತೆಗಿಳಿಯಲಿರುವ ಈ ಡಬಲ್​ ಡೆಕರ್​ ಬಸ್​ಗಳು ಎಲೆಕ್ಟ್ರಿಕ್ ವಾಹನಗಳಾಗಿರುವುದರಿಂದ ಶಬ್ದ ಹಾಗೂ ಹೊಗೆ ಪ್ರಮಾಣ ಶೂನ್ಯವಾಗಿರಲಿದೆ. ಇದು ಪರಿಸರಸ್ನೇಹಿ ಆಗಿರುವುದರಿಂದ 900 ಎಸಿ ಡಬಲ್ ಡೆಕರ್ ಬಸ್​ಗಳನ್ನು ರಸ್ತೆಗಿಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರದ ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.

‘ವಿಕ್ರಾಂತ್ ರೋಣ’ ಬಿಡುಗಡೆ ಮತ್ತೆ ಮುಂದಕ್ಕೆ: ಮುಂದಿನ ದಿನಾಂಕ…

ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ, ಕೊಲೆ ಬೆದರಿಕೆ; ಊಟಕ್ಕೆಂದು ಕರೆದು ಹೊಡೆದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
