ನವದೆಹಲಿ:Dobule Yummy ಎಂದರೆ ಇದಪ್ಪಾ. ಒಂದೇ ಮಂಟಪದಲ್ಲಿ ಪ್ರೇಮಿಕೆ ಜತೆಗೆ ಹಾಗೂ ಪಾಲಕರು ನೋಡಿ ನಿಗದಿಪಡಿಸಿದ ಯುವತಿಯೊಂದಿಗೆ ಯುವಕನೊಬ್ಬ ಸಪ್ತಪದಿ ತುಳಿದಿದ್ದಾನೆ.
ಮಧ್ಯಪ್ರದೇಶದ ಬೇತುಲ್​ ಸಮೀಪದ ಕೇರಿಯಾ ಎಂಬ ಗ್ರಾಮದಲ್ಲಿ ಈ ವಿವಾಹ ಸಂಪನ್ನವಾಗಿದೆ. ಸಂದೀಪ್​ ಉಯಿಕೆ ಎಂಬಾತ ಭೋಪಾಲ್​ನಲ್ಲಿ ಓದುತ್ತಿದ್ದಾಗ ಹೊಶಂಗಾಬಾದ್​ನ ಯುವತಿಯನ್ನು ಪ್ರೇಮಿಸುತ್ತಿದ್ದ. ಇವರ ಪ್ರೇಮದಾಟ ಮುಂದುವರಿದಿರುವಂತೆ ಆತನ ಪಾಲಕರು ಕೊಯಲಾರಿ ಎಂಬ ಗ್ರಾಮದ ಯುವತಿಯೊಂದಿಗೆ ವಿವಾಹ ನಿಷ್ಕರ್ಷಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ವಿಷಯ ಗ್ರಾಮದ ಪಂಚಾಯ್ತಿ ಕಟ್ಟೆಗೆ ಹೋಯಿತು. ಪಂಚಾಯ್ತಿಗೆ ಸಂದೀಪ್​ ಅಲ್ಲದೆ ಇನ್ನಿಬ್ಬರು ಯುವತಿಯರ ಮನೆಯವರನ್ನೂ ಕರೆಸಲಾಯಿತು. ಸಾಕಷ್ಟು ಚರ್ಚೆಯ ಬಳಿಕ ಇಬ್ಬರು ಯುವತಿಯರನ್ನು ಸಂದೀಪ್​ ವಿವಾಹವಾಗಬೇಕು ಎಂಬ ನಿರ್ಣಯಕ್ಕೆ ಬರಲಾಯಿತು. ಇದಕ್ಕೆ ಯುವತಿಯರಿಬ್ಬರೂ ಒಪ್ಪಿಕೊಂಡರು ಎನ್ನಲಾಗಿದೆ.
ಇದನ್ನೂ ಓದಿ:ದುಬೆ ಬಂಧನಕ್ಕೆ ಸಹಕರಿಸಿದರು, ಮರುದಿನವೇ ಉದ್ಯೋಗವನ್ನೇ ಕಳೆದುಕೊಂಡರು!
ಪಂಚಾಯ್ತಿ ನಿರ್ಣಯದಂತೆ ಕೇರಿಯಾ ಗ್ರಾಮದಲ್ಲಿ ವಿವಾಹ ಕಾರ್ಯಕ್ರಮ ಆಯೋಜಿಸಲ್ಪಟ್ಟಿತು. ಗ್ರಾಮಸ್ಥರೆಲ್ಲರ ಸಮ್ಮುಖದಲ್ಲಿ ಸಂದೀಪ್​ ಇಬ್ಬರೂ ಯುವತಿಯರಿಗೂ ಒಂದೇ ಮುಹೂರ್ತದಲ್ಲಿ ತಾಳಿ ಕಟ್ಟಿದ್ದಲ್ಲದೆ ಸಪ್ತಪದಿಯನ್ನೂ ತುಳಿದ.
ಈ ಮಾಹಿತಿ ಈಗ ಜಿಲ್ಲಾಡಳಿತಕ್ಕೆ ತಲುಪಿದ್ದು, ಇಬ್ಬಿಬ್ಬರು ಯುವತಿಯರನ್ನು ಹೇಗೆ ಮದುವೆಯಾಗಲು ಸಾಧ್ಯ ಎಂಬ ಪ್ರಶ್ನೆ ಎತ್ತಿದೆ. ಈ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಕೋವಿಡ್​ನ ಈ ಸಂದರ್ಭದಲ್ಲಿ ಪೂರ್ವಾನುಮತಿ ಇಲ್ಲದೆ ವಿವಾಹ ಸಮಾರಂಭ ಆಯೋಜಿಸಿದ್ದ ಬಗ್ಗೆಯೂ ಘೋಡಾಡೋಂಗ್ರಿಯ ತಹಸೀಲ್ದಾರ್​ ಮೋನಿಕಾ ವಿಶ್ವಕರ್ಮ ಪ್ರಶ್ನೆ ಎತ್ತಿದ್ದು, ಈ ಬಗ್ಗೆಯೂ ತನಿಖೆಗೆ ಮುಂದಾಗಿದ್ದಾರೆ. ಹೀಗಾಗಿ ಈ ಮದುವೆ ಯುವಕನ ಪಾಲಿಗೆ Double Yummy ಆಗುವ ಬದಲು Double Whammy ಆಗಿ ಮಾರ್ಪಟ್ಟಿದೆ.
ಅತಿಯಾದ ದೇಹ ತೂಕದಿಂದ ಬಳಲುತ್ತಿದ್ದೀರಾ? ಕೈಗೆಟುಕುವ ದರದಲ್ಲಿ ಲಭ್ಯವಿದೆ ಪರಿಹಾರ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
