ಮುಂಬೈ:ಷೇರು ಮಾರುಕಟ್ಟೆಗಳಲ್ಲಿ ನೇರ ಹೂಡಿಕೆ ಮಾಡದೆ ಪರೋಕ್ಷವಾಗಿ ಹೂಡಿಕೆ ಮಾಡಬೇಕೆನ್ನುವವರು ಈಕ್ವಿಟಿ ಮ್ಯೂಚುವಲ್​ ಫಂಡ್​ಗಳಲ್ಲಿ ಹಣ ತೊಡಗಿಸುತ್ತಾರೆ.
ಈಕ್ವಿಟಿ ಮ್ಯೂಚುವಲ್​ ಫಂಡ್​ಗಳಲ್ಲಿ ಹಲವು ರೀತಿಗಳಿವೆ. ಲಾರ್ಜ್​ ಕ್ಯಾಪ್​, ಮಿಡ್​ ಕ್ಯಾಪ್​, ಸ್ಮಾಲ್​ ಕ್ಯಾಪ್​, ಲಾರ್ಜ್​ ಆ್ಯಂಡ್​ ಮಿಡ್​ ಕ್ಯಾಪ್​, ಮಲ್ಟಿ ಕ್ಯಾಪ್​, ವ್ಯಾಪ್​ ಫಂಡ್​, ಫೋಕಸ್​​ಡ್​ ಫಂಡ್​, ಫ್ಲೆಕ್ಸಿ ಕ್ಯಾಪ್, ಇಂಡೆಕ್ಸ್ ಫಂಡ್ಸ್ ಹೀಗೆ ಹತ್ತು ಹಲವು ವರ್ಗಗಳ ಈಕ್ವಿಟಿ ಮ್ಯೂಚುವಲ್​ ಫಂಡ್​ಗಳಿವೆ.
2023ರಲ್ಲಿ ಬಹುತೇಕ ಎಲ್ಲ ಮ್ಯೂಚುವಲ್​ ಫಂಡ್​ಗಳಲ್ಲಿ ಹೂಡಿಕೆಗೆ ಉತ್ತಮ ಆದಾಯ ದೊರೆತಿದೆ. ಹಾಗಿದ್ದರೆ, ಅತಿಹೆಚ್ಚು ಲಾಭ ಕೊಟ್ಟ ಮ್ಯೂಚುವಲ್​ ಫಂಡ್​ ಯಾವುದು ಎಂಬ ಕುತೂಹಲ ಇದ್ದೇ ಇರುತ್ತದೆ.
2023ರಲ್ಲಿ ಅತಿಹೆಚ್ಚು ಲಾಭ ಕೊಟ್ಟ ಮ್ಯೂಚುವಲ್​ ಫಂಡ್​ ಮಿರಾಯ್​ ಅಸೆಟ್​ ಎನ್​ವೈಎಸ್​ಇ ಫಂಗ್​ ಪ್ಲಸ್​ ಇಟಿಎಫ್​ (Mirae Asset NYSE FANG+ ETF). 2023ರ ಒಂದು ವರ್ಷದಲ್ಲಿ ಈ ಫಂಡ್​ನಲ್ಲಿ ದೊರೆತ ಲಾಭ ಶೇಕಡಾ 90ರಷ್ಟಿದೆ. ಅಂದರೆ, ಈ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದ ಹಣ ಬಹುತೇಕ ದುಪ್ಪಟ್ಟಾಗಿದೆ.
ಅಪಾರ ಲಾಭ ನೀಡುವ ಮೂಲಕ ಉಳಿದೆಲ್ಲ ಫಂಡ್​ಗಳನ್ನು ಹಿಂದಿಕ್ಕಿ ಇದು ಮೊದಲನೇ ಸ್ಥಾನಕ್ಕೇರಿದೆ. ಎರಡು ವರ್ಷಗಳಲ್ಲಿ ಇದರ ವಾರ್ಷಿಕ ಲಾಭ ಶೇಕಡಾ 14.53 ಇದೆ. ಆದರೆ, 2023ರಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಲಾಭ ಪ್ರಮಾಣ ಗಗನಕ್ಕೇರಿದೆ.
2021ರ ಮೇ 10ರಂದು ಈ ಫಂಡ್​ ಆರಂಭಿಸಲಾಗಿದ್ದು, ಅಲ್ಲಿಂದ ಇದುವರೆಗೆ ವಾರ್ಷಿಕ ಸರಾಸರಿ ಶೇಕಡಾ 17.12ರಷ್ಟು ಆದಾಯವನ್ನು ಇದು ನೀಡಿದೆ.
ಈ ಮ್ಯೂಚುವಲ್​ ಫಂಡ್​ NYSE FANG+ ಸೂಚ್ಯಂಕದ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ. “FANG” ಎಂಬ ಸಂಕ್ಷಿಪ್ತ ರೂಪವು ಅಮೆರಿಕದ ನಾಲ್ಕು ಜನಪ್ರಿಯ ತಂತ್ರಜ್ಞಾನ ಕಂಪನಿಗಳ ಷೇರುಗಳನ್ನು ಸೂಚಿಸುತ್ತದೆ: Facebook (Meta), Amazon, Netflix, ಮತ್ತು Google (Alphabet). 2017 ರಿಂದ, ಆಪಲ್ ಅನ್ನು ಸಹ ಇದರಲ್ಲಿ ಸೇರಿಸಲಾಗಿದೆ, ಇದಕ್ಕೆ FAANG ಎಂಬ ಸಂಕ್ಷಿಪ್ತ ರೂಪ ನೀಡಲಾಗಿದೆ.
ಈಗ FANG+ ಪಟ್ಟಿಯಲ್ಲಿ ಇನ್ನಷ್ಟು ಕಂಪನಿಗಳು ಸೇರಿವೆ. NYSE FANG+ ಸೂಚ್ಯಂಕವು ಹೆಚ್ಚು-ವ್ಯಾಪಾರ ಮಾಡುವ 10 ಟೆಕ್ ದೈತ್ಯ ಕಂಪನಿಗಳಿಗೆ ಸಂಬಂಧಿಸಿದ್ದಾಗಿದೆ. ಪ್ರಸ್ತುತ ಪಟ್ಟಿಯು Meta (Facebook), Apple, Amazon Netflix, Microsoft, Google, Tesla, NVIDA, Snowflake ಮತ್ತು Broadcom Inc. ಕಂಪನಿಗಳನ್ನು ಒಳಗೊಂಡಿದೆ.
ಪ್ರತಿ FANG ಕಂಪನಿಗಳು ಅಸಾಧಾರಣ ಬೆಳವಣಿಗೆಯನ್ನು ತೋರಿಸಿವೆ. ಹೀಗಾಗಿ, ಇದರಲ್ಲಿ ಹೂಡಿಕೆ ಮಾಡಲಾದ ಮ್ಯೂಚುವಲ್​ ಫಂಡ್​ ಹಣವು ಕೂಡ ಉತ್ತಮ ಆದಾಯ ಮತ್ತು ಲಾಭ ತಂದುಕೊಟ್ಟಿದೆ.
NYSE FANG+ ಸೂಚ್ಯಂಕವು ಅಮೆರಿಕದ ಇತರ ಪ್ರಮುಖ ಸೂಚ್ಯಂಕಗಳನ್ನು ಮೀರಿಸಿದೆ. ಅಮೆರಿಕದ ಇತರ ಸೂಚ್ಯಂಕಗಳಾದ NASDAQ-100 ಸೂಚ್ಯಂಕ 17%, S&P 500 ಸೂಚ್ಯಂಕ 11.39% ಮತ್ತು S&P 500 ಮಾಹಿತಿ ತಂತ್ರಜ್ಞಾನ ಸೂಚ್ಯಂಕಕ್ಕೆ 20.4% ಲಾಭವನ್ನು ಗಳಿಸಿವೆ. ಆದರೆ, NYSE FANG+ ಸೂಚ್ಯಂಕವು ಕಳೆದ 10 ವರ್ಷಗಳಲ್ಲಿ ಸೂಚ್ಯಂಕವು ವಾರ್ಷಿಕವಾಗಿ 26ರಷ್ಟು ಲಾಭ ನೀಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
