ನವದೆಹಲಿ: ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ಗಡಿಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅನೇಕ ಮನೆ, ಅಂಗಡಿ ಮುಂಗಟ್ಟೆಗಳು ನಾಶವಾಗಿವೆ. ಎರಡೂ ರಾಜ್ಯಗಳು ಕೇಂದ್ರದ ನೆರವಿಗೆ ಮೊರೆ ಹೋಗಿವೆ. ಈ ಹಿಂಸಾಚಾರ ಬೆನ್ನಿಗೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ.
ಗಡಿ ವಿವಾದ ಇತ್ಯರ್ಥಗೊಳಿಸುವುದಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿರುವಾಗಲೇ ಅಸ್ಸಾಂನ ಗಡಿಯುದ್ದಕ್ಕೂ ನಡೆಸುತ್ತಿರುವ ಉಲ್ಲಂಘನೆಗಳ ಪರಿಣಾಮ ಈ ಹಿಂಸಾಚಾರ ಉಂಟಾಗಿದೆ ಎಂದು ಮಿಜೋರಾಂ ಆರೋಪಿಸಿದೆ. ಈ ನಡುವೆ, ಹಿಂಸಾಚಾರ ಭುಗಿಲೆದ್ದ ಲೈಲಾಪುರಕ್ಕೆ ಭೇಟಿ ನೀಡಿರುವ ಅಸ್ಸಾಂನ ಪರಿಸರ ಮತ್ತು ಅರಣ್ಯ ಸಚಿವ ಪರಿಮಲ್ ಶುಕ್ಲಬೈದ್ಯ, ಮಿಜೋರಾಂನಿಂದ ಆಗಮಿಸಿ ಅಲ್ಲಿನ ಮನೆ, ಸ್ಟಾಲ್​ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಬಹುಕಾಲದ ನಂತರ ಹಿಂದೂ ಜಾಗೃತವಾಗಿದ್ದಾನೆ! : ಚಕ್ರವರ್ತಿ ಸೂಲಿಬೆಲೆಯವರ ವಿಶ್ವಗುರು ಅಂಕಣ
ಮಿಜೋರಾಂನ ಥಿನ್​ಘ್ಲುನ್​, ಸಾಯಿಹಪುಯಿ ‘v’ ಮತ್ತು ವೈರೆನ್​ಗ್ಟೆ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯವಸ್ತವಾಗಿದೆ. ಇಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಸ್ಸಾಂನ ಸಹಕಾರ ಬೇಕು. ಅಸ್ಸಾಂನ ಚಾಚರ್​ ಮತ್ತು ಕರೀಮ್​ಗಂಜ್​ ಜಿಲ್ಲೆಗಳ ಅಧಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೆ ಸಾಕಾಗುವುದು. ಎಲ್​ಪಿಜಿ ಸೇರಿ ಅಗತ್ಯವಸ್ತುಗಳ ಸರಬರಾಜಿಗೆ ಅಡ್ಡಿ ಉಂಟುಮಾಡುತ್ತಿರುವುದೇ ಸಮಸ್ಯೆ ಕಾರಣ ಎಂದು ಮಿಜೋರಾಂ ಸರ್ಕಾರ ಹೇಳಿದೆ.
ಇದನ್ನೂ ಓದಿ:ಇಮ್ರಾನ್ ಖಾನ್​ ಅವರನ್ನು ಜೈಲಿಗೆ ಕಳುಹಿಸಿಯೇ ಸಿದ್ಧ- ಮರಿಯಂ ನವಾಜ್ ಪ್ರತಿಜ್ಞೆ
ಈ ನಡುವೆ, ಸೋಷಿಯಲ್ ಮೀಡಿಯಾಗಳಲ್ಲಿ ದಾರಿತಪ್ಪಿಸುವ ಮತ್ತು ದ್ವೇಷ ಉಂಟುಮಾಡುವ ಅನೇಕ ಸಂದೇಶಗಳು ರವಾನೆಯಾಗಿವೆ ಮತ್ತು ಆಗುತ್ತಿವೆ. ಇವೆಲ್ಲವೂ ಶಾಂತಿ -ಸುವ್ಯವಸ್ಥೆ ಹದಗೆಡುವುದಕ್ಕೆ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ಇಎಂಐ ಪಾವತಿಸಿದ್ದೀರಾ?: ಮಾರಟೋರಿಯಂ ಅವಧಿಯ ರಿವಾರ್ಡ್ ನಿಮ್ಮದಾಗಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 2 =
Remember me
