ಬೆಂಗಳೂರು:ವಿಶ್ವ ಪರ್ಯಟನೆ ಮಾಡುತ್ತ, ‘ನಮಸ್ಕಾರ ದೇವರು’ ಎನ್ನುತ್ತ, ಕನ್ನಡಿಗರಿಗೆ ಕನ್ನಡದಲ್ಲೇ ಮಾತನಾಡುತ್ತ ಜಗತ್ತನ್ನೇ ತೋರಿಸುತ್ತಿರುವ ‘ಡಾ.ಬ್ರೋ’ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಆಗ್ರಹವೊಂದು ಕೇಳಿಬಂದಿದೆ.
ಸತತ ವಿಶ್ವ ಪರ್ಯಟನೆಯಲ್ಲಿರುವ ಡಾ. ಬ್ರೋ (ಗಗನ್ ಶ್ರೀನಿವಾಸ್​) ಅವರನ್ನು ಕನ್ನಡದ ಜಾಗತಿಕ ರಾಯಭಾರಿ ಎಂದರೂ ಅತಿಶಯೋಕ್ತಿ ಏನಲ್ಲ. ಏಕೆಂದರೆ ಹೋದಲ್ಲೆಲ್ಲ ಆದಷ್ಟೂ ಕನ್ನಡದಲ್ಲೇ ಮಾತನಾಡುತ್ತ, ಅಲ್ಲಿನ ಸ್ಥಳ-ವಿಶೇಷಗಳನ್ನು ಕನ್ನಡದಲ್ಲೇ ವಿವರಿಸುತ್ತ ಅಸಂಖ್ಯಾತ ಕನ್ನಡಿಗರ ಮನಗೆದ್ದಿರುವ ಡಾ.ಬ್ರೋ ಕನ್ನಡಿಗರ ಅಚ್ಚುಮೆಚ್ಚಿನ ಯೂ-ಟ್ಯೂಬರ್​.
ಹೀಗೆ ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುತ್ತಿರುವ ಡಾ.ಬ್ರೋ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಈ ಅಭಿಮಾನದ ಆಗ್ರಹಕ್ಕೆ ಸಂಬಂಧಿಸಿದಂತೆ ಡಾ.ಬ್ರೋ ಅವರು ದುಬೈನಿಂದ ವಿಜಯವಾಣಿಗೆ ಪ್ರತಿಕ್ರಿಯಿಸಿದ್ದು, ಆ ಕುರಿತು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
‘ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಳ್ಳುವಂಥ ದೊಡ್ಡ ಕೆಲಸ ನಾನೇನೂ ಮಾಡಿಲ್ಲ. ಬೇಡ ಬೇಡ.. ಮುಂದೆ ಇನ್ನೂ ಏನಾದರೂ ಸಾಧನೆ ಮಾಡಿಬಿಟ್ಟು ತೆಗೆದುಕೊಳ್ಳೋಣ. ಆ ಪ್ರಶಸ್ತಿಗೆ ತುಂಬಾ ದೊಡ್ಡ ಗೌರವ ಇದೆ. ನಾನು ಇನ್ನೂ ಏನೂ ಮಾಡಿಲ್ಲ, ಇನ್ನು ಏನಾದರೂ ಮಾಡಿದ್ರೆ ಮುಂದೆ ಆವಾಗ ಕೊಡಲಿ, ತೆಗೆದುಕೊಳ್ಳುತ್ತೇನೆ’ ಎಂದು ಅಭಿಮಾನಿಗಳ ಒತ್ತಾಯಕ್ಕೆ ಡಾ.ಬ್ರೋ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವಪರ್ಯಟನೆಯಲ್ಲಿ ಗಗನಸುಖಿ: ನಮಸ್ಕಾರ ದೇವರು.. ಇದು ಡಾಕ್ಟರ್ ಬ್ರೋ..!

‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

Sign in to your account
Please enter an answer in digits:five + 13 =
Remember me
