ಹುಬ್ಬಳ್ಳಿ:ವಿವಿಧ ದೇಶಗಳಲ್ಲಿನ ಭಾರತೀಯರು ರಚಿಸಿಕೊಂಡಿರುವ ಎನ್​ಆರ್​ಐ ಕನ್ನಡ ಬಳಗವು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರೊಂದಿಗೆ ಅ.24ರಂದು ಸಂವಾದ ಏರ್ಪಡಿಸಿದೆ. ಭಾರತೀಯ ಕಾಲಮಾನ ಶನಿವಾರ ಸಂಜೆ 4ರಿಂದ ನಡೆಯಲಿರುವ ಸಂವಾದದಲ್ಲಿ ಕತಾರ್, ಕುವೈತ್, ಇಥಿಯೋಪಿಯಾ, ಫಿನ್​ಲ್ಯಾಂಡ್, ಸೌದಿ ಅರೇಬಿಯಾ, ಯುಎಇ, ಓಮನ್, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ, ಸಿಡ್ನಿ, ನ್ಯೂಜಿಲೆಂಡ್, ಕೆನಡಾ ಮತ್ತಿತರ ಕಡೆಯ ಕನ್ನಡಿಗರು ಪಾಲ್ಗೊಳ್ಳಲಿದ್ದಾರೆ.
ಜೂಮ್ ಆ್ಯಪ್​ ಮೂಲಕ ನಡೆಯಲಿರುವ ಈ ಸಂವಾದದಲ್ಲಿ ಪ್ರಶ್ನೆ ಕೇಳುವವರು ಹೇಗೆ ಭಾಗವಹಿಸಬೇಕು, ಎಷ್ಟು ಕಡಿಮೆ ಸಮಯದಲ್ಲಿ ಪ್ರಶ್ನೆ ಕೇಳಬೇಕು ಎನ್ನುವುದು ಸೇರಿ ವಿವಿಧ ಸೂಚನೆಗಳನ್ನು ಸದಸ್ಯರಿಗೆ ಈಗಾಗಲೆ ತಿಳಿಸಲಾಗಿದೆ ಎಂದು ಎನ್​ಆರ್​ಐ ಕನ್ನಡ ಬಳಗದ ಪದಾಧಿಕಾರಿಗಳಾದ ರಾಜೀವ ಕೆ. ಮೇತ್ರಿ (ಅಮೆರಿಕ), ಈಶ್ವರ ಶೇಗುಣಶಿ (ಐರ್ಲೆಂಡ್), ನವೀನ ಅಪ್ಪಾಜಿಗೋಳ (ಜರ್ಮನಿ) ತಿಳಿಸಿದ್ದಾರೆ.
ಸಂವಾದದಲ್ಲಿ ಭಾಗವಹಿಸುವವರು ನೋಂದಾಯಿಸಿಕೊಳ್ಳಲು ಈ ಕೆಳಗಿನ ಲಿಂಕ್ ಸಂಪರ್ಕಿಸಲು ಕೋರಲಾಗಿದೆ.
https://docs.google.com/forms/d/1vfu8blQpOLtLwrmcVgk4vbUjrqOLMBMdEYQyztXvJPw/edit?usp=drivesdk
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
