ಇನ್ನು ಕೆಲವೇ ದಿನಗಳಲ್ಲಿ ನಮ್ಮ ಗಣರಾಜ್ಯಕ್ಕೆ ಹೊಸ ರಾಷ್ಟ್ರಪತಿಗಳು ಬರಲಿದ್ದಾರೆ. ಅಲ್ಲದೆ, ಈ ಗೌರವಾನ್ವಿತ ಸ್ಥಾನಕ್ಕೆ ದ್ರೌಪದಿ ಮುಮು ಅವರ ಉಮೇದುವಾರಿಕೆಯನ್ನು ಇಡೀ ರಾಷ್ಟ್ರವು ಹೇಗೆ ಮೆಚ್ಚಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಅವರ ಉಮೇದುವಾರಿಕೆಯು ಸಮಾಜದ ವಿವಿಧ ವರ್ಗಗಳ ಹೃದಯವನ್ನು ಬಡಿದೆಬ್ಬಿಸಿದೆ. ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಈ ನೆಲದ ಅತ್ಯುನ್ನತ ಹುದ್ದೆಯನ್ನು ಬುಡಕಟ್ಟು ಸಮುದಾಯಕ್ಕೆ ಸೇರಿದ, ಸ್ವಂತ ಶ್ರಮದಿಂದ ಉನ್ನತಿಗೇರಿದ ಮಹಿಳೆಯೊಬ್ಬರು ಅಲಂಕರಿಸುತ್ತಾರೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆತರುವ ಸಂಗತಿಯಾಗಿದೆ. ಮಹಿಳೆಯೊಬ್ಬರು ನಮ್ಮ ಮುಂದಿನ ರಾಷ್ಟ್ರಪತಿಯಾಗುತ್ತಾರೆ ಎಂಬುದು ಸ್ತ್ರೀ ಸಬಲೀಕರಣದ ಸಂಕೇತ ಎಂದು ಭಾರತದ ಮಹಿಳೆಯರು ಭಾವಿಸುತ್ತಿದ್ದಾರೆ. ದ್ರೌಪದಿ ಮುಮು ಅವರು ಸ್ವಾತಂತ್ರಾ್ಯನಂತರ ಜನಿಸಿದ ಪ್ರಥಮ ರಾಷ್ಟ್ರಪತಿಯಾಗಲಿದ್ದಾರೆ ಎಂಬುದು ಕೂಡ ಮಹತ್ತರ ಸಂದೇಶವನ್ನು ನೀಡುತ್ತದೆ.
ದ್ರೌಪದಿ ಮುಮು ಅವರ ಉಮೇದುವಾರಿಕೆ ಹಲವಾರು ಕಾರಣಗಳಿಂದಾಗಿ ವಿಶೇಷವಾಗಿದೆ. ಅವರ ಸ್ವಂತ ಸಾಧನೆಗಳೊಂದಿಗೆ ಪ್ರಾರಂಭಿಸೋಣ. ಹಲವಾರು ದಶಕಗಳಿಂದ ವಂಶಪಾರಂಪರ್ಯ ಮತ್ತು ವೈಯಕ್ತಿಕ ಸಂಪತ್ತಿನ ಬಲದ ರಾಜಕೀಯ ವ್ಯವಸ್ಥೆಯಲ್ಲಿ, ದ್ರೌಪದಿ ಮುಮು ಅವರು ತಾಜಾ ಗಾಳಿಯ ಉಸಿರಾಗಿ ಹೊರಹೊಮ್ಮಿದ್ದಾರೆ. ಒಡಿಶಾದ ರಾಯರಂಗಪುರದಲ್ಲಿ ಶಿಕ್ಷಕಿಯಾಗಿ ಕೆಲಸ ಪ್ರಾರಂಭಿಸಿದ ಅವರು ನಂತರ ರಾಜ್ಯ ನೀರಾವರಿ ಇಲಾಖೆಗೆ ಕಿರಿಯ ಸಹಾಯಕರಾಗಿ ಸೇರಿದರು. ತಮ್ಮ ವೃತ್ತಿ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದರೂ, ಸಾರ್ವಜನಿಕ ಸೇವೆಯೇ ತಮ್ಮ ನಿಜವಾದ ಕ್ಷೇತ್ರ ಎಂಬುದು ಅವರಿಗೆ ಸ್ಪಷ್ಟವಾಯಿತು. ತಳಮಟ್ಟದಿಂದಲೇ ರಾಜಕೀಯ ಜೀವನ ಆರಂಭಿಸಿದ ಅವರು, 1997ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದರು. ರಾಯರಂಗಪುರ ನಗರ ಪಂಚಾಯತ್​ನ ಕೌನ್ಸಿಲರ್ ಆದರು. ಮೂರು ವರ್ಷಗಳ ನಂತರ, ಅವರು ರಾಯರಂಗಪುರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದರು. ಈ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿ ಸೇವೆ ಸಲ್ಲಿಸಿದರು. 147 ಶಾಸಕರಿರುವ ಒಡಿಶಾ ವಿಧಾನಸಭೆಯಲ್ಲಿ ಅತ್ಯುತ್ತಮ ಶಾಸಕರಿಗೆ ನೀಡಲಾಗುವ ನೀಲಕಂಠ ಪ್ರಶಸ್ತಿಯು 2007ರಲ್ಲಿ ಅವರ ಮುಡಿಗೇರಿತು. ಶಾಸಕರಾಗಿ ಅವರ ಟ್ರಾ್ಯಕ್ ರೆಕಾರ್ಡ್ ಅಸಾಧಾರಣವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಅವರು ಸಚಿವರಾಗಿ ವಾಣಿಜ್ಯ, ಸಾರಿಗೆ, ಮೀನುಗಾರಿಕೆ ಮತ್ತು ಪಶು ಸಂಪನ್ಮೂಲಗಳ ಅಭಿವೃದ್ಧಿಯಂತಹ ಮಹತ್ವದ ಇಲಾಖೆಗಳನ್ನು ನಿಭಾಯಿಸಿದ್ದಾರೆ. ಅವರ ಅಧಿಕಾರಾವಧಿಯು ಅಭಿವೃದ್ಧಿಪರ ಮತ್ತು ಭ್ರಷ್ಟಾಚಾರ ಮುಕ್ತವಾಗಿತ್ತು.
2015ರಲ್ಲಿ ಅವರು ಜಾರ್ಖಂಡ್​ನ ಮೊದಲ ಮಹಿಳಾ ರಾಜ್ಯಪಾಲರಾಗಿ ಮತ್ತು ಯಾವುದೇ ರಾಜ್ಯದ ಗವರ್ನರ್ ಆಗಿ ನೇಮಕಗೊಂಡ ಒಡಿಶಾದ ಮೊದಲ ಬುಡಕಟ್ಟು ಮಹಿಳೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರ 6 ವರ್ಷಗಳ ಈ ಅವಧಿಯು ಜಾರ್ಖಂಡ್​ನ ಇತಿಹಾಸದಲ್ಲಿ ಅತ್ಯಂತ ದೀರ್ಘವಾಗಿತ್ತು. ಅವರು ರಾಜಭವನವನ್ನು ಸಾರ್ವಜನಿಕ ಆಕಾಂಕ್ಷೆಗಳ ರೋಮಾಂಚಕ ಕೇಂದ್ರವನ್ನಾಗಿ ಮಾಡಿದರು. ಅಲ್ಲದೆ, ರಾಜ್ಯದ ಬೆಳವಣಿಗೆಯನ್ನು ಹೆಚ್ಚಿಸಲು ಅಂದಿನ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಿದರು.
ಸಾರ್ವಜನಿಕ ಜೀವನದಲ್ಲಿ ಅವರ ಯಶಸ್ಸು ಕಾಲಾನುಕ್ರಮದಲ್ಲಿ ಭರಿಸಲಾಗದ ವೈಯಕ್ತಿಕ ದುರಂತಗಳಿಂದ ಮುಚ್ಚಿಹೋಗಿತ್ತು. ಅವರು ತಮ್ಮ ಪತಿ ಮತ್ತು ಮಕ್ಕಳನ್ನು ಕಳೆದುಕೊಂಡರು. ಆದರೆ, ಈ ಹಿನ್ನಡೆಗಳು ಅವರನ್ನು ಇನ್ನಷ್ಟು ಶ್ರಮವಹಿಸಿ ಕೆಲಸ ಮಾಡಲು ಮತ್ತು ಇತರರ ಜೀವನದಲ್ಲಿ ದುಃಖ ನಿವಾರಿಸಲು ಪ್ರೇರೇಪಿಸಿದವು. ದಯೆಯು ಅವರ ದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ ಎಂದು ಅವರೊಂದಿಗೆ ಒಡನಾಡಿದವರು ಶ್ಲಾಘಿಸುತ್ತಾರೆ.
ವಿಶಾಲವಾಗಿ ನೋಡುವುದಾದರೆ, ಅವರ ಉಮೇದುವಾರಿಕೆಯು ನವ ಭಾರತದ ಚೈತನ್ಯವನ್ನು ಬಿಂಬಿಸುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರಗಳು ಕೇವಲ ಸರ್ಕಾರಗಳು ಮತ್ತು ಸಂಸ್ಥೆಗಳಿಂದ ನಿರ್ವಿುಸಲ್ಪಟ್ಟಿಲ್ಲ; ಅವುಗಳನ್ನು ನಾವು ಜನರು ನಿರ್ವಿುಸಿದ್ದೇವೆ. ಕಳೆದ 8 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವೈಶಿಷ್ಟ್ಯವನ್ನು ಇದು ಸೂಚಿಸುತ್ತದೆ. ತಳಮಟ್ಟದ ಜನರನ್ನು ಸಬಲೀಕರಣಗೊಳಿಸಲು ಮತ್ತು ದಶಕಗಳಿಂದ ಈ ಅಧಿಕಾರವನ್ನು ಹೊಂದಿದ್ದ ಕೆಲವು ಗಣ್ಯರ ಏಕಸ್ವಾಮ್ಯವನ್ನು ಮುರಿಯುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ನಮ್ಮ ಮಾರ್ಗದರ್ಶಿ ತತ್ವವು ಸ್ಪಷ್ಟವಾಗಿದೆ. ನಾವು ನೂರಕ್ಕೆ ನೂರಷ್ಟು ವ್ಯಾಪ್ತಿಯನ್ನು ತಲುಪಲು ಬಯಸಿದಾಗ, ಒಲವು ಅಥವಾ ವೋಟ್ ಬ್ಯಾಂಕ್ ರಾಜಕೀಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಾಂಕ್ರಾಮಿಕ ರೋಗ ಬಂದಾಗ, 80 ಕೋಟಿ ಜನರು ತಿಂಗಳುಗಟ್ಟಲೆ ಉಚಿತ ಆಹಾರಧಾನ್ಯಗಳನ್ನು ಪಡೆದರು. ಇದೇ ಸಮಯದಲ್ಲಿ, ವಿಜ್ಞಾನ ಚಾಲಿತ ಲಸಿಕಾರಣ ಅಭಿಯಾನ ಹೇಗಿರುತ್ತದೆ ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿಕೊಟ್ಟಿತು. ನಮ್ಮ 200 ಕೋಟಿ ಲಸಿಕೆಯ ಡೋಸ್​ಗಳು ಕೋವಿಡ್ ವಿರುದ್ಧದ ಜಾಗತಿಕ ಹೋರಾಟವನ್ನು ಬಲಗೊಳಿಸಿದವು.
ಒಂದು ಕಾಲದಲ್ಲಿ ಶ್ರೀಮಂತರು ಮತ್ತು ಕೆಲ ವಂಶಸ್ಥರಿಗೆ ಸೀಮಿತವಾಗಿದ್ದ ಪದ್ಮ ಪ್ರಶಸ್ತಿಗಳು ಈಗ ಜನರ ಪ್ರಶಸ್ತಿಗಳಾಗಿ ಮಾರ್ಪಟ್ಟಿವೆ. ಟಿವಿಯಲ್ಲಿ ಕಾಣಿಸಿಕೊಳ್ಳದ, ಆದರೆ ವಾಸ್ತವವಾಗಿ ಅತ್ಯುತ್ತಮ ಕೆಲಸ ಮಾಡಿದವರನ್ನು ಇವು ಗೌರವಿಸುತ್ತವೆ. ಮುಖ್ಯಮಂತ್ರಿಗಳು, ಸಚಿವರು, ಸಂಸದರು ಮತ್ತು ಶಾಸಕರು… ಹೀಗೇ ನಮ್ಮ ಉನ್ನತ ನಾಯಕತ್ವದ ಬಹುತೇಕರು ವಿನಮ್ರ ಹಿನ್ನೆಲೆಯಿಂದ ಬಂದವರು ಮತ್ತು ಕೇವಲ ಕಠಿಣ ಪರಿಶ್ರಮದ ಆಧಾರದ ಮೇಲೆ ರಾಜಕೀಯದಲ್ಲಿ ಉನ್ನತಿಗೇರಿದ್ದಾರೆ ಎಂದು ಹೇಳಲು ಬಿಜೆಪಿಯವರಾದ ನಾವು ಹೆಮ್ಮೆಪಡುತ್ತೇವೆ. ವಾಸ್ತವವಾಗಿ ಸ್ವತಃ ಪ್ರಧಾನಿ ಮೋದಿಯವರ ಕ್ಯಾಬಿನೆಟ್, 27 ಒಬಿಸಿಗಳು (ಇತರೆ ಹಿಂದುಳಿದ ವರ್ಗಗಳ ಜನ), 12 ಎಸ್​ಸಿಗಳು ಮತ್ತು 8 ಎಸ್​ಟಿಗಳಿಗೆ ಐತಿಹಾಸಿಕ ಪ್ರಾತಿನಿಧ್ಯವನ್ನು ನೀಡಿದೆ. ಒಟ್ಟಾರೆ ಕ್ಯಾಬಿನೆಟ್​ನಲ್ಲಿ ಶೇ. 60ಕ್ಕಿಂತ ಹೆಚ್ಚಿನ ಪಾಲನ್ನು ಇವರು ಹೊಂದಿದ್ದಾರೆ. 2019ರಲ್ಲಿ ಲೋಕಸಭೆಯಲ್ಲಿ ಬಿಜೆಪಿಗೆ ದೊಡ್ಡ ಯಶಸ್ಸು ಅತ್ಯಧಿಕ ಮಹಿಳಾ ಪ್ರಾತಿನಿಧ್ಯದೊಂದಿಗೆ ಬಂದಿತು. ಬಿಜೆಪಿಯು ಎಸ್​ಸಿ/ಎಸ್​ಟಿ ಕಾಯ್ದೆಯನ್ನು ಬಲಿಷ್ಠಗೊಳಿಸಿತು. ಅಲ್ಲದೆ, ಒಬಿಸಿ ಆಯೋಗದ ಕನಸನ್ನು ನನಸಾಗಿಸಿತು. ಆರ್ಥಿಕವಾಗಿ ದುರ್ಬಲರಾದವರಿಗೂ ಮೀಸಲಾತಿ ಖಾತ್ರಿಪಡಿಸಿತು. ವಿನಮ್ರ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಂದ ಎದುರಾಗುವ ಎಲ್ಲಾ ಸವಾಲುಗಳನ್ನು ಜಯಿಸಿ, ಭಾರತದ ಪ್ರಧಾನಿಯಾಗಬಹುದು ಎಂಬುದನ್ನು ಪ್ರಧಾನಿ ಮೋದಿಯವರ ಯಶಸ್ಸು ಇಂದು ತೋರಿಸಿಕೊಟ್ಟಿದೆ.
ಮೋದಿ ಸರ್ಕಾರವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್​ಜಿ, ಮಹಾತ್ಮಾ ಗಾಂಧೀಜಿ ಮತ್ತು ದೀನ್ ದಯಾಳ ಉಪಾಧ್ಯಾಯಜಿ ಅವರ ದೃಷ್ಟಿಕೋನಕ್ಕೆ ನ್ಯಾಯವನ್ನು ನೀಡುತ್ತಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಲಾಗಿದೆ. ಸ್ಟಾ್ಯಂಡ್ ಅಪ್ ಇಂಡಿಯಾ ಯೋಜನೆಯಡಿ ಎಸ್​ಸಿ ಮತ್ತು ಎಸ್​ಟಿ ಫಲಾನುಭವಿಗಳಿಗೆ 5300 ಕೋಟಿ ರೂ.ಗಿಂತ ಹೆಚ್ಚಿನ ಸಾಲ ಒದಗಿಸಲಾಗಿದೆ. ಪಿಎಂ ಕಿಸಾನ್, ಪಿಎಂ ಫಸಲ್ ಬಿಮಾ ಯೋಜನೆ, ಪಿಎಂ ಆವಾಸ್ ಮತ್ತು ಸ್ಕಾಲರ್​ಶಿಪ್ ಯೋಜನೆಗಳಡಿ ಶೇ. 60ರಷ್ಟು ಫಲಾನುಭವಿಗಳು ಎಸ್​ಸಿ/ಎಸ್​ಟಿ/ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಬಿಜೆಪಿಯು ರಾಜಕೀಯ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಸಮಾಜದ ಪರಿವರ್ತನೆ ಮತ್ತು ಉನ್ನತಿಯ ಸಾಧನವಾಗಿ ಪರಿಗಣಿಸುತ್ತದೆ ಎಂಬುದಕ್ಕೆ ಇವು ಉದಾಹರಣೆಗಳಾಗಿವೆ.
ಜನಜಾತಿಯ ಗೌರವ ದಿವಸ ಘೊಷಣೆ, ಭಾರತದಾದ್ಯಂತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯಗಳು, ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ಸಬಲೀಕರಣ, ಎಂಎಸ್​ಪಿ ಅಡಿಯಲ್ಲಿ ಬರುವ ಅರಣ್ಯ ಉತ್ಪನ್ನಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಬಡವರು- ತುಳಿತಕ್ಕೊಳಗಾದವರಲ್ಲಿ ಆತ್ಮವಿಶ್ವಾಸದ ಮನೋಭಾವ ತುಂಬುವಂತಹ ನಿರ್ಧಾರಗಳನ್ನು ಬಿಜೆಪಿ ಕೈಗೊಂಡಿದೆ. ಸಾರ್ವಜನಿಕ ಸೇವೆಯ ಈ ಹೊಸ ವಿಧಾನವು ದೀರ್ಘಕಾಲ ಉಳಿಯುವಂತಹದ್ದು. ದ್ರೌಪದಿ ಮುಮು ಅವರ ಚುನಾವಣೆ ಕೂಡ ಇದರ ಪ್ರತೀಕವಾಗಿದೆ. ಮೊದಲ ಬುಡಕಟ್ಟು ರಾಷ್ಟ್ರಪತಿ, ಮೊದಲ ಮಹಿಳಾ ಬುಡಕಟ್ಟು ರಾಷ್ಟ್ರಪತಿ ಮತ್ತು ಮೊದಲ ಒಡಿಯಾ ರಾಷ್ಟ್ರಪತಿಯಾಗಿ ಅವರ ಆಯ್ಕೆಯು ದಶಕಗಳ ಹಿಂದೆ ಒಡೆದು ಹಾಕಬೇಕಾಗಿದ್ದ ಅನೇಕ ಅಡೆತಡೆಗಳನ್ನು ಮುರಿಯುತ್ತದೆ. ರಾಷ್ಟ್ರಪತಿ ಹುದ್ದೆಗೆ ಎನ್​ಡಿಎಯ ಹಿಂದಿನ ಇಬ್ಬರು ಅಭ್ಯರ್ಥಿಗಳು- ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ರಾಮನಾಥ್ ಕೋವಿಂದ್ ಅವರು ಈ ದೇಶಕ್ಕೆ ಸ್ಪೂರ್ತಿದಾಯಕ ಮತ್ತು ಪ್ರಬುದ್ಧ ನಾಯಕತ್ವ ಒದಗಿಸಿದ್ದಾರೆ. ದ್ರೌಪದಿ ಮುಮು ಅವರ ಉಮೇದುವಾರಿಕೆಯು ಭರವಸೆಯ ಆಶಾಕಿರಣವಾಗಿದೆ. ಧ್ವನಿಯಿಲ್ಲದವರಿಗೆ ಧ್ವನಿ ನೀಡುತ್ತದೆ. ಇತಿಹಾಸವನ್ನು ಪುನಃ ಬರೆಯುತ್ತದೆ.
ಬಿಜೆಪಿಯ ಅಧ್ಯಕ್ಷನಾಗಿ, ಎಲ್ಲ ರಾಜಕೀಯ ನಾಯಕರಿಗೆ ಮತ್ತು ಪಕ್ಷಕ್ಕೆ, ರಾಷ್ಟ್ರಪತಿ ಚುನಾವಣೆಯ ಮತದಾರರಿಗೆ ಮತ್ತು ಪ್ರತಿಯೊಬ್ಬ ಭಾರತೀಯನಿಗೆ ನನ್ನ ಶ್ರದ್ಧಾಪೂರ್ವಕ ಮನವಿ ಏನೆಂದರೆ, ಎಲ್ಲಾ ರಾಜಕೀಯ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು, ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ದ್ರೌಪದಿ ಮುಮು ಅವರ ಉಮೇದುವಾರಿಕೆಯನ್ನು ಬೆಂಬಲಿಸಬೇಕು ಎಂಬುದು. ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಪರಿವರ್ತನೆಗಾಗಿ ನಮ್ಮ ಅನ್ವೇಷಣೆಯಲ್ಲಿ ಇದು ಅತ್ಯಂತ ಅದ್ಭುತವಾದ ಕ್ಷಣವಾಗಿದೆ; ನಾವು ಇದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು. ಏಕೆಂದರೆ ಇದು ಜನತಾ ರಾಷ್ಟ್ರಪತಿಗಳ ಚುನಾವಣೆ.
(ಲೇಖಕರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eleven =
Remember me
