ನವದೆಹಲಿ :ಪಿಎಂ ಕೇರ್ಸ್​ ಫಂಡ್​​ಅನ್ನು ಬಳಸಿಕೊಂಡು ಒಂದೂವರೆ ಲಕ್ಷ ಆಕ್ಸಿಕೇರ್​ ಸಿಸ್ಟಂಗಳನ್ನು ಖರೀದಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ. ಈ ಘಟಕಗಳಿಂದ ಪ್ರಸ್ತುತ ಆರೋಗ್ಯ ಸೇವಾಕರ್ತರ ಮೇಲಿರುವ ಕಾರ್ಯದೊತ್ತಡ ಕಡಿಮೆಯಾಗಲಿದೆ ಎಂದಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾದ ಆಕ್ಸಿಕೇರ್​ ಸಿಸ್ಟಂಅನ್ನು ಡಿಆರ್​ಡಿಒ ರೂಪಿಸಿದೆ. ಈ ವ್ಯವಸ್ಥೆಯಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಆಕ್ಸಿಜನ್​ ಪ್ರಮಾಣವನ್ನು ಅವರ ಎಸ್​ಪಿಒ2 ಮಟ್ಟದ ಪ್ರಕಾರ ತಾನಾಗೇ ನಿಯಂತ್ರಿಸುವ ಸೌಲಭ್ಯ ಇರುತ್ತದೆ. ಇದರಿಂದ ಕರೊನಾ ರೋಗಿಗಳಿಗೆ ಮತ್ತೆ ಮತ್ತೆ ಪರೀಕ್ಷೆ ನಡೆಸಿ ಆಕ್ಸಿಜನ್ ಫ್ಲೋನಲ್ಲಿ ವ್ಯತ್ಯಾಸ ಮಾಡುವ ಶ್ರಮ ತಪ್ಪುತ್ತದೆ. ಅಷ್ಟು ಮಟ್ಟಿಗೆ ಆರೋಗ್ಯ ಸೇವಾಕರ್ತರ ವರ್ಕ್​ಲೋಡ್​ ಮತ್ತು ಎಕ್ಸ್​ಪೋಷರ್​ಗಳು ಕಡಿಮೆಯಾಗುತ್ತವೆ ಎಂದು ಪ್ರೆಸ್​ ಇನ್​ಫರ್ಮೇಷನ್ ಬ್ಯೂರೋ ವಿವರಿಸಿದೆ.
ಇದನ್ನೂ ಓದಿ:ಪಡಿತರ ಪಡೆಯಲು ಈ ತಿಂಗಳು ಹಲವು ಸೌಲಭ್ಯ ; ಬೆರಳಚ್ಚು ಕಡ್ಡಾಯವಲ್ಲ !
ಡಿಆರ್​ಡಿಒ ಈ ನಿಟ್ಟಿನಲ್ಲಿ ಸಿದ್ಧಪಡಿಸಿರುವ ತಂತ್ರಜ್ಞಾನವನ್ನು ಭಾರತದ ಅನೇಕ ಕೈಗಾರಿಕೆಗಳಿಗೆ ವರ್ಗಾಯಿಸಿದೆ. ಅವರು ಭಾರತದಾದ್ಯಂತ ಆಕ್ಸಿಕೇರ್ ವ್ಯವಸ್ಥೆಗಳನ್ನು ಉತ್ಪಾದಿಸಲಿದ್ದಾರೆ ಎನ್ನಲಾಗಿದೆ. ಪಿಎಂ ಕೇರ್ಸ್​ ಫಂಡ್​ನಿಂದ 322.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ 1 ಲಕ್ಷ 50 ಸಾವಿರ ಘಟಕಗಳನ್ನು ಸರ್ಕಾರ ಪಡೆದುಕೊಳ್ಳಲಿದೆ ಎನ್ನಲಾಗಿದೆ.(ಏಜೆನ್ಸೀಸ್)
ಕೈಮುಗಿದು, ಮನೆಯೊಳಗೇ ಇರಿ ಎನ್ನುವ ಪೊಲೀಸ್ ಅಧಿಕಾರಿ !

ಡಬಲ್ ರೂಪಾಂತರಿ ಕರೊನಾ ವೈರಸ್​​ಅನ್ನು ‘ಇಂಡಿಯನ್ ವೇರಿಯಂಟ್’ ಅನ್ನಬೇಡಿ : ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
