ರೇವಾ (ಮಧ್ಯಪ್ರದೇಶ):ನೀರಿನ ಸಂರಕ್ಷಣೆ ಕುರಿತಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರೇವಾ ಕ್ಷೇತ್ರದ ಸಂಸದ ಜನಾರ್ದನ್​ ಮಿಶ್ರಾ ನೀಡಿರುವ ವಿಚಿತ್ರ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಭೂಮಂಡಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಅದನ್ನು ಉಳಿಸಲೇಬೇಕಿದೆ. ನೀವು ಗುಟ್ಕಾನಾದರೂ ಜಿಗಿರಿ, ಮದ್ಯವನ್ನಾದರೂ ಕುಡಿಯಿರಿ, ಥಿನ್ನರ್​ ಆದರೂ ಬಳಸಿ ಅಥವಾ ಐಯೋಡೆಕ್ಸ್​ ಆದ್ರೂ ತಿನ್ನಿ ಆದರೆ, ನೀರಿನ ಮಹತ್ವವನ್ನು ಅರ್ಥ ಮಾಡಿಕೊಳ್ಳಿ ಎಂದು ಜನಾರ್ದನ ಮಿಶ್ರಾ ಅವರು ವಿಚಿತ್ರ ಹೇಳಿಕೆ ನೀಡಿದ್ದಾರೆ.
ಕಳೆದ ಭಾನುವಾರ ರೇವಾ ಕೃಷ್ಣರಾಜ್​ ಕಪೂರ್​ ಆಡಿಟೋರಿಯಂನಲ್ಲಿ ನಡೆದ ನೀರಿನ ಸಂರಕ್ಷಣೆ ಕಾರ್ಯಗಾರದಲ್ಲಿ ಮಾತನಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೀರನ್ನೂ ಹೀಗೂ ಸಂರಕ್ಷಣೆ ಮಾಡಬಹುದಾ ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ.
#WATCH| Rewa, Madhya Pradesh: "Lands are running dry of water, it must be saved… Drink alcohol, chew tobacco, smoke weed or smell thinner and solution but understand the importance of water," says BJP MP Janardan Mishra during a water conservation workshoppic.twitter.com/Nk878A9Jgc
— ANI (@ANI)November 7, 2022

ಯಾವುದೇ ಸರ್ಕಾರವು ನೀರಿನ ತೆರಿಗೆಯನ್ನು ಮನ್ನಾ ಮಾಡುವುದಾಗಿ ಘೋಷಿಸಿದರೆ, ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ ಎಂದು ಹೇಳಿ. ಅದರ ಬದಲಾಗಿ ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳನ್ನು ಮನ್ನಾ ಮಾಡುವಂತೆ ತಿಳಿಸಿ ಎಂದು ಜನರಿಗೆ ಕರೆ ನೀಡಿದ್ದಾರೆ.
ಇನ್ನು ಜನಾರ್ದನ ಮಿಶ್ರಾ ಈ ರೀತಿಯ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ವಿವಾದಗಳಿಂದಲೇ ಇವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ರೇವಾ ಜಿಲ್ಲೆಯಲ್ಲಿರುವ ಬಾಲಕಿಯರ ಶಾಲೆಯ ಟಾಯ್ಲೆಟ್​ ಅನ್ನು ಬರಿಗೈಯಲ್ಲಿ ಕ್ಲೀನ್​ ಮಾಡಿ, ಭಾರಿ ಸುದ್ದಿಯಾಗಿದ್ದರು.(ಏಜೆನ್ಸೀಸ್​)
VIDEO| ಬರಿಗೈಯಲ್ಲಿ ಬಾಲಕಿಯರ ಶಾಲೆಯ ಟಾಯ್ಲೆಟ್ ತೊಳೆದ ಬಿಜೆಪಿ ಸಂಸದ! ವಿಡಿಯೋ​ ವೈರಲ್​

ವಿಶಾಲ ಅರಣ್ಯ ಪ್ರದೇಶಕ್ಕೆ 8ರಲ್ಲಿ ಕೇವಲ 2 ಚೀತಾಗಳನ್ನು ಬಿಡುಗಡೆ ಮಾಡಿದ್ದೇಕೆ? ಇಲ್ಲಿದೆ ಕಾರಣ…

ಕೆಆರ್​ಎಸ್ ಡ್ಯಾಂ ಮುಖ್ಯದ್ವಾರದ ಬಳಿ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಓಡಾಟದ ದೃಶ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
