ಕೊಯಿಕ್ಕೋಡ್​:ಸಚಿವರ ವಾಹನಕ್ಕೆ ಸೈಡ್​ ಕೊಡಲಿಲ್ಲ ಅಂತ ಚಾಲಕನೊಬ್ಬನ ಮೇಲೆ ಪೊಲೀಸರು ದಾಳಿ ಮಾಡಿರುವ ಆಘಾತಕಾರಿ ಘಟನೆ ಕೇರಳದ ಕೊಯಿಕ್ಕೋಡ್​ನಲ್ಲಿ ನಡೆದಿದೆ.
ಚೆಲಾರಿ ಮೂಲದ ಮುಹಮ್ಮದ್​ ಸಾದಿಫ್​ ಹಲ್ಲೆಗೊಳಗಾದ ಚಾಲಕ. ಈತ ಮೀನು ಸಾಗಿಸುತ್ತಿದ್ದ ವೇಳೆ ಸಚಿವ ಅಹ್ಮದ್​ ದೇವರಕೋವಿಲ್​ ಅವರ ವಾಹನಕ್ಕೆ ಸೈಡ್​ ಕೊಡಲಿಲ್ಲ ಅಂತ ಹಲ್ಲೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಬೀಚ್​​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಹಮ್ಮದ್​ನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕ್ರಮದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬಹುನಿರೀಕ್ಷಿತ ‘ಸಲಾರ್’ ಟೀಸರ್ ಬಿಡುಗಡೆ: ಪ್ರಶಾಂತ್ ನೀಲ್ ಅದ್ದೂರಿ ಮೇಕಿಂಗ್, ಮಾಸ್​ ಲುಕ್‌ನಲ್ಲಿ ಪ್ರಭಾಸ್​..!
ಪೊಲೀಸರು ಹೇಳುವ ಪ್ರಕಾರ ಚಾಲಕ ಮುಹಮ್ಮದ್​, ಸಚಿವರ ವಾಹನಕ್ಕೆ ಅಪಾಯವಾಗುವಂತೆ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಹಾಗೂ ಭದ್ರತಾ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರ ಈ ಹೇಳಿಕೆಯನ್ನು ಸ್ಥಳೀಯರು ಒಪ್ಪಿಲ್ಲ. ಪೊಲೀಸರದ್ದೇ ತಪ್ಪು ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ದೌರ್ಜನ್ಯ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಕೊಯಿಕ್ಕೋಡ್​ನ ಸೌಥ್​ ಬೀಚ್​ನಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ. ಸಚಿವರ ವಾಹನದ ಮುಂದೆ ಬಹಳ ಹೊತ್ತು ಅಡ್ಡಿಪಡಿಸಿದ ಮುಹಮ್ಮದ್​​ಗೆ ಸಚಿವರ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡಿದರೂ, ಮತ್ತೆ ಸಚಿವರ ವಾಹನಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನ ಚಲಾಯಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಧರಣಿ ಕೈಬಿಟ್ಟ ಬಿಜೆಪಿ, ಹಳಿಮೇಲೆ ಬಂದ ಸದನ: ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಭರವಸೆ
ಈ ಘಟನೆಯನ್ನು ಕೆಲವರು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಸಚಿವರ ಕಚೇರಿ ತಿಳಿಸಿದೆ. ಮುಹಮ್ಮದ್​ ಅವರ ಮೀನಿನ ವಾಹನವು ಚೋಂಬಳದಿಂದ ಪರಪ್ಪನಂಗಡಿ ಕಡೆಗೆ ಹೋಗುತ್ತಿತ್ತು.(ಏಜೆನ್ಸೀಸ್​)
ಯೂಟ್ಯೂಬರ್​ ಚೊಚ್ಚಲ​ ನಿರ್ದೇಶನದ ಸಿನಿಮಾಗೆ ಲೇಡಿ ಸೂಪರ್​ಸ್ಟಾರ್​ ನಯನತಾರಾ ನಾಯಕಿ!

ಮನೆ ಮಾಲೀಕರ ಪ್ರಾಣ ಉಳಿಸಿದ ಬೆಕ್ಕುಗಳು! ಅಡುಗೆ ಮನೆಯಲ್ಲಿತ್ತು ವಿಷಕಾರಿ ನಾಗರಹಾವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
