ಮುಂಬೈ:ಎರಡು ಕಂಟೇನರ್​ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಮೃತ ಚಾಲಕನನ್ನು ಮಜೀದ್​ ಖಾನ್​(40) ಎಂದು ಗುರುತಿಸಲಾಗಿದ್ದು, ಘಟನೆಯೂ ಶನಿವಾರ ತಡರಾತ್ರಿ 2:15ರ ಸುಮಾರಿಗೆ ಸಂಭವಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾದೇಶಿಕ ವಿಪತ್ತು ನಿರ್ವಹಣಾ ಮುಖ್ಯಸ್ಥ ಯಾಸಿನ್​ ತಾಡ್ವಿ ಮೃತ ಚಾಲಕ ಮಜೀದ್​ ರಾಜಸ್ಥಾನದಿಂದ ಮಹಾರಾಷ್ಟ್ರದ ರಾಯ್ಗಡಕ್ಕೆ ಬಟ್ಟೆ ತುಂಬಿದ್ದ ಕಂಟೇನರ್​ ಚಲಾಯಿಸಿಕೊಂಡು ಬರುತ್ತಿದ್ದರು. ತಡರಾತ್ರಿ ಆಗಿದ್ದ ಕಾರಣ ನಿದ್ದೆ ಮಂಪರಿನಲ್ಲಿ ಮುಂಬದಿ ಸೋಲಾರ್​ ಪ್ಯಾನಲ್​ಗಳನ್ನು ಹೊತ್ತು ಸಾಗುತ್ತಿದ್ದ ಕಂಟೇನರ್​ಗೆ ಡಿಕ್ಕಿ ಲಾರಿ ಹೊಡೆದಿದೆ.
ಡಿಕ್ಕಿ ಹೊಡೆದಿರುವ ರಭಸಕ್ಕೆ ಚಾಲಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಅವರ ಮೃತದೇಹವು ಎರಡು ಲಾರಿಗಳ ನಡುವೆ ಸಿಲುಕಿ ಛಿದ್ರವಾಗಿತ್ತು. ಅವರ ಮೃತದೇಹವನ್ನು ಹೊರತೆಗೆದ ಅಧಿಕಾರಿಗಳು ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ಮುಖ್ಯಸ್ಥ ಯಾಸಿನ್​ ತಾಡ್ವಿ ತಿಳಿಸಿದ್ದಾರೆ.
ಇದನ್ನೂ ಓದಿ:VIDEO| ತಂದೆಯನ್ನೇ ಮಗಳು ವರಿಸಿದ ಪ್ರಕರಣಕ್ಕೆ ಟ್ವಿಸ್ಟ್​; ವೈರಲ್​ ವಿಡಿಯೋದ ಅಸಲಿಯತ್ತು ವಿವರಿಸಿದ ಮಹಿಳೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − thirteen =
Remember me
