ಚೆನ್ನೈ:ಚೀನಾದಂತಹ ಮುಂದುವರಿದ ರಾಷ್ಟ್ರಗಳ ಮಹಾನಗರಗಳಲ್ಲಿ ಕಟ್ಟಡವೊಂದರ ಮೂಲಕ ಮೆಟ್ರೋ ಹಾದು ಹೋಗುವುದನ್ನು ನಾವೆಲ್ಲ ಕಂಡಿದ್ದೇವೆ. ಇಂತಹ ಪ್ರಯೋಗವನ್ನೇ ಭಾರತ ದೇಶದಲ್ಲೂ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿ ಮೆಟ್ರೋ ರೈಲುಗಳು 12 ಅಂತಸ್ತಿನ ಕಟ್ಟಡದೊಳಗಿನಿಂದ ಮೆಟ್ರೋಗಳು ಸಂಚರಿಸಲಿವೆ. ನಿಲ್ದಾಣಗಳು ಮೂರನೇ ಮಹಡಿಯಲ್ಲಿದ್ದರೆ ಉಳಿದವು ವಾಣಿಜ್ಯ ಮತ್ತು ಕಚೇರಿ ಸ್ಥಳಗಳಾಗಿವೆ ಎಂದು ಮೂರು ಸ್ಥಳಗಳ ಬಗ್ಗೆ ಸಿಎಂಆರ್​ಎಲ್​ ಮಾಹಿತಿ ನೀಡಿದೆ.
ಇದನ್ನೂ ಓದಿ:ಕೆಂಪು ಸಮುದ್ರದಲ್ಲಿ ಮುಂದುವರಿದ ಹೌತಿ ಬಂಡುಕೋರರ ಹಾವಳಿ- ಮತ್ತೊಂದು ಕಾರ್ಗೋ ಶಿಪ್ ಮೇಲೆ ಕ್ಷಿಪಣಿ ದಾಳಿ
ಚಾಲಕ ರಹಿತ ಮೆಟ್ರೋ ರೈಲುಗಳು ನಗರದ ತಿರುಮಂಗಲಂ, ಕೊಯಂಬೇಡು ಮತ್ತು ತಿರುಮಾಯಿಲೈನಲ್ಲಿ 12 ಅಂತಸ್ತಿನ ಕಟ್ಟಡದ ಮೂಲಕ ಹಾದು ಹೋಗಲಿದೆ. ಚೆನ್ನೈ ಮೆಟ್ರೋ ರೈಲ್ ಲಿಮಿಟೆಡ್ ಮುಂಬರುವ ಎರಡನೇ ಹಂತ ಮೆಟ್ರೋದಲ್ಲಿ 3 ಸ್ಥಳಗಳಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿಗೆ ಯೋಜಿಸಿದೆ.ತಿರುಮಂಗಲಂನಲ್ಲಿ 12 ಅಂತಸ್ತಿನ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ.
ಎರಡನೇ ಹಂತದ ಮೆಟ್ರೋ ಯೋಜನೆಯು ಮಾಧವರಂ-ಸಿರುಚೆರಿ, ಪೂನಮಲ್ಲೆ-ವಿವೇಕಾನಂದ ಇಲ್ಲಂ, ಮತ್ತು ಮಾಧವರಂನಿಂದ ಶೋಲಿಂಗನಲ್ಲೂರು ಎಂಬ ಮೂರು ಮಾರ್ಗಗಳನ್ನೊಳಗೊಂಡಿದ್ದು 119 ಕಿ.ಮೀ ದೂರ ಕ್ರಮಿಸಲಿದೆ. ಇದರ ವೆಚ್ಚ 69,000 ಕೋಟಿ ರೂ.ಗಳಾಗಿದೆ.
ಸಿಎಂಆರ್‌ಎಲ್ ನಿಲ್ದಾಣಗಳ ವಿನ್ಯಾಸ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಚೆನ್ನೈ ಮೆಟ್ರೋ ಎರಡನೇ ಹಂತಗಾಗಿ ಮೂರು ಬೋಗಿಗಳ ಚಾಲಕರಹಿತ ರೈಲುಗಳ ಮೊದಲ ಸೆಟ್ ಆಗಸ್ಟ್ 2024ರ ವೇಳೆಗೆ ನಗರಕ್ಕೆ ಆಗಮಿಸುವ ಸಾಧ್ಯತೆಯಿದೆ.
ಗೋವಾ ಬೀಚ್​ನಲ್ಲಿ ಯುಕೆ ಮೂಲದ ಮಹಿಳೆ ಮೃತ್ಯು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 8 =
Remember me
