ಬೆಂಗಳೂರು:ಇ-ತ್ಯಾಜ್ಯಗಳನ್ನು ಬಳಸಿ ಡ್ರೋನ್ ಮಾಡು ಮೂಲಕ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಶಸ್ತಿಗಳನ್ನು ಪಡೆದು ‘ಡ್ರೋನ್‌ ಪ್ರತಾಪ್‌’ ಎಂದೇ ಪ್ರಸಿದ್ಧಿ ಪಡೆದಿರು ಮಂಡ್ಯದ ಹುಡುಗನ ಬಗ್ಗೆ ಈಗ ಸಾಕಷ್ಟು ವಿವಾದಗಳು ಎದ್ದಿವೆ.
ಈತ ಹೇಳಿದ್ದೆಲ್ಲವೂ ಸುಳ್ಳು, ಈತನ ಸಾಧನೆ ಝಿರೋ, ಯಾವ ಪ್ರಶಸ್ತಿಗಳೂ ಈತನಿಗೆ ಸಿಕ್ಕಿಲ್ಲ, ಮಠಾಧೀಶರು, ಚಿತ್ರನಟರಿಂದ ಹಿಡಿದು ರಾಜಕೀಯ ಮುಖಂಡರವರನ್ನೂ ಈತ ಯಾಮಾರಿಸಿದ್ದಾನೆ ಎಂಬ ವಿವಾದ ಇದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈತ ಭಾಗವಹಿಸಿರುವುದಾಗಿ ಈತನ ಬಳಿ ಇರುವ ದಾಖಲೆಗಳೆಲ್ಲವೂ ನಕಲಿಯದ್ದು, ಇದನ್ನೇ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ದುಡ್ಡು ಪಡೆದಿದ್ದಾನೆ ಎಂಬ ಗಂಭೀರ ಆರೋಪ ಬಂದಿದೆ.
ಈ ನಡುವೆಯೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಪ್ರತಾಪ್‌ ತನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳನ್ನೂ ನಿರಾಕರಿಸಿದ್ದಾನೆ.
ಇದನ್ನೂ ಓದಿ:ಡ್ರೋನ್ ತಯಾರಿಸಿದ್ದಾಗಿ ರೈಲು ಬಿಟ್ಟ ಪ್ರತಾಪ್: ಐಷಾರಾಮಿ ಜೀವನ ನಡೆಸುತ್ತಿರುವ ನಕಲಿ ವಿಜ್ಞಾನಿ
ಆತ ಹೇಳಿರುವ ಸಂಕ್ಷಿಪ್ತ ವಿವರ ಇಲ್ಲಿದೆ:
ನಾನು 40 ಕ್ಕೂ ಅಧಿಕ ದೇಶ ಸುತ್ತಿದ್ದೇನೆ. ಎಲ್ಲ ದಾಖಲೆಗಳೂ ನನ್ನ ಬಳಿ ಇವೆ. ಜಪಾನ್‌ನ ಟೋಕಿಯೊದಲ್ಲಿ 2017ರಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಮಟ್ಟದ ರೋಬೋಟಿಕ್‌ ಷೋನಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿದ್ದೇನೆ. ಗಣ್ಯಾತಿಗಣ್ಯರನ್ನು ಭೇಟಿ ಮಾಡಿದ್ದೇನೆ. ಎಲ್ಲದರ ಬಗ್ಗೂ ನನ್ನ ಬಳಿ ದಾಖಲೆ ಇದ್ದು, ಅದನ್ನು ನಾನು ತೋರಿಸಲು ಸಿದ್ಧ.
ಅಷ್ಟೇ ಅಲ್ಲದೇ, ನಾನು ತಯಾರಿಸಿರುವ ಡ್ರೋನ್‌ ಬಲು ವಿಶಿಷ್ಟವಾಗಿದ್ದು, ಅದನ್ನು ನೆರೆ ಹಾವಳಿ ಸಂದರ್ಭದಲ್ಲಿ ಬಳಸುಂಥದ್ದಾಗಿದೆ. ಜನರು ಪ್ರವಾಹದಲ್ಲಿ ಸಿಲುಕಿದಾಗ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ನನ್ನ ಡ್ರೋನ್‌ ಸ್ಪಷ್ಟ ಮಾಹಿತಿ ನೀಡುತ್ತದೆ. ಥರ್ಮಲ್‌ ಸೆನ್ಸ್‌ ಬಳಸಿ ಡ್ರೋನ್‌ ಜನರನ್ನು ಪತ್ತೆ ಹಚ್ಚುತ್ತದೆ. ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹ ಬಂದಾಗಲೂ ನನ್ನದೇ ಡ್ರೋನ್‌ ಬಳಕೆಯಾಗಿತ್ತು. ಈ ಮೂಲಕ ಅಪಾರ ಜನರ ರಕ್ಷಣೆ ಮಾಡಲಾಗಿತ್ತು ಎಂದು ಪ್ರತಾಪ್‌ ಹೇಳಿದ್ದಾನೆ.
ತಮ್ಮ ಜತೆ ಸೇರಿಕೊಂಡು ಕೆಲಸ ಮಾಡುವಂತೆ ಕೆಲವು ಕಂಪನಿಗಳು ನನಗೆ ಆಫರ್‌ ನೀಡಿದ್ದವು. ನನ್ನ ಡ್ರೋನ್‌ ಕೊಡುವಂತೆ ಅವರು ಕೇಳಿದ್ದರು. ಆದರೆ ನಾನು ಅದನ್ನು ನಿರಾಕರಿಸಿದ್ದೆ. ಬಹುಶಃ ಅಲ್ಲಿಂದಲೇ ಈ ವಿವಾದ ಶುರುವಾಗಿದೆ. ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳು ಬಂದಿವೆ ಎಂದಿದ್ದಾನೆ ಈ ಯುವಕ.
ನನ್ನ ಬಳಿ ಎಲ್ಲಾ ದೇಶಗಳ ಸರ್ಟಿಫಿಕೇಟ್‌, ಮೆಡಲ್‌ ಇವೆ. ಪಾಸ್‌ಪೋರ್ಟ್‌ನಲ್ಲಿಯೂ ನಾನು ವಿದೇಶಗಳಿಗೆ ಹೋಗಿರುವ ದಾಖಲೆಗಳು ಇವೆ. ಎಲ್ಲವನ್ನೂ ಇನ್ನೊಂದು ವಾರದಲ್ಲಿ ಪ್ರೆಸ್‌ಮೀಟ್‌ ಮಾಡಿ ಜನರ ಮುಂದೆ ಇಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಈತ ಉತ್ತರಿಸಿದ್ದಾನೆ.
ಒಂದು ವಾರದಲ್ಲಿಯೇ ಮಾಧ್ಯಮದ ಮುಂದೆ ಬಂದು ಸಾಬೀತು ಮಾಡುತ್ತೇನೆ. ಕೆಲವು ಕಡೆ ಪ್ರಚಾರ ಮಾಡಿದಂತೆ ನಾನು ಪ್ರಧಾನಿಯವರನ್ನು ಭೇಟಿಯಾಗಿಲ್ಲ. ಈ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ. ಆದರೆ ಮಠಾಧೀಶರನ್ನು, ರಾಜಕಾರಣಿಗಳನ್ನು, ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದು, ಅವರಿಂದ ಶಹಭಾಸ್‌ಗಿರಿ ಪಡೆದುಕೊಂಡಿದ್ದೇನೆ ಎಂದು ಈತ ಹೇಳಿಕೆ ನೀಡಿದ್ದಾನೆ.ಡ್ರೋನ್‌ ಬಳಿ ನಿಂತು ತೆಗೆಸಿಕೊಂಡಿರುವ ಫೋಟೋಗಳಲ್ಲಿ ಬೇರೆ ಕಂಪನಿಗಳ ಹೆಸರುಗಳು ಇವೆ, ಇದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರತಾಪ್‌, ಡ್ರೋನ್‌ನ ಕೆಲವೊಂದು ಪಾರ್ಟ್‌ಗಳನ್ನು ಖುದ್ದು ತಯಾರು ಮಾಡಲು ಸಾಧ್ಯವಿಲ್ಲ. ಅದನ್ನು ಬೇರೆ ಕಡೆಯಿಂದಲೇ ಎಲ್ಲರೂ ತೆಗೆದುಕೊಳ್ಳುವುದು. ಉಳಿದ ತಂತ್ರಜ್ಞಾನಗಳೆಲ್ಲವೂ ನನ್ನ ಸ್ವಂತದ್ದೇ. ಈ ಬಗ್ಗೆ ಶೀಘ್ರದಲ್ಲಿಯೇ ಜನತೆಯ ಮುಂದೆ ಸತ್ಯ ಇಡಲಿದ್ದೇನೆ ಎಂದಿದ್ದಾನೆ.
ಯಾಮಾರಿಬಿಟ್ಟೆನಪ್ಪಾ… ಕಣ್ಣು ಕಿತ್ತರೂ ನಿದ್ದೆ ಬರ್ತಿಲ್ಲ: ಜಗ್ಗೇಶ್‌ ನೋವಿನ ನುಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
