ಒಡಿಶಾ:ತಂತ್ರಜ್ಞಾನವನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೇವೋ ಅಷ್ಟರಮಟ್ಟಿಗೆ ಅದು ಅನುಕೂಲಕಾರಿ ಆಗಿರುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಏಕೆಂದರೆ ಅಂಗವಿಕಲ ವ್ಯಕ್ತಿಯೊಬ್ಬರಿಗೆ ಡ್ರೋನ್​ ಮೂಲಕ ಮನೆ ಬಾಗಿಲಿಗೇ ಪಿಂಚಣಿ ಕಳುಹಿಸಲಾಗಿದೆ.
ಒಡಿಶಾದ ನೌಪಾದ ಜಿಲ್ಲೆಯ ಬುಟ್ಕಪದ ಎಂಬ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಹೆತರಾಮ್ ಸತ್ನಾಮಿ ಎಂಬಾತ ಡ್ರೋನ್ ಮೂಲಕ ಪಿಂಚಣಿ ಪಡೆದ ಅಂಗವಿಕಲ ವ್ಯಕ್ತಿ. ಈತ ತನ್ನ ಪಿಂಚಣಿ ಹಣ ಪಡೆಯಲು ಪ್ರತಿ ತಿಂಗಳು ತನ್ನ ಮನೆಯಿಂದ ದಟ್ಟ ಕಾಡಿನಲ್ಲಿ 2 ಕಿ.ಮೀ. ದೂರ ತೆರಳಬೇಕಿತ್ತು.
ಆದರೆ ಈ ತಿಂಗಳಿನಲ್ಲಿ ಈತ ಪಿಂಚಣಿಗಾಗಿ ಕಾಡದಾರಿಯಲ್ಲಿ ಹಾದುಹೋಗುವ ಪ್ರಮೇಯವೇ ಬರಲಿಲ್ಲ. ಪಿಂಚಣಿ ಹಣ ಡ್ರೋನ್ ಮೂಲಕ ಮನೆ ಬಾಗಿಲಿಗೇ ಬಂದಿತ್ತು. ಸರಪಂಚರು ಡ್ರೋನ್ ಮೂಲಕ ಪಿಂಚಣಿ ಕಳುಹಿಸುವ ವ್ಯವಸ್ಥೆ ಮಾಡಿದ್ದಕ್ಕೆ ಸತ್ನಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಸತ್ನಾಮಿ ಒಡಿಶಾ ರಾಜ್ಯದ ಮಧುಬಾಬು ಪೆನ್ಷನ್ ಯೋಜನಾ ಫಲಾನುಭವಿಯಾಗಿದ್ದು, ಆತನಿಗೆ ಡ್ರೋನ್​ ಮೂಲಕ ಪೆನ್ಷನ್ ಕಳಿಸಲಾಗಿದೆ. ಸತ್ನಾಮಿ ಹುಟ್ಟಿನಿಂದಲೂ ನಡೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅವರಿಗೆ ಈ ಮೂಲಕ ಸಹಾಯ ಮಾಡಲಾಗಿದೆ ಎಂದು ಸರಪಂಚ ಸರೋಜ್ ಅಗರ್​ವಾಲ್​ ಹೇಳಿದ್ದಾರೆ. ಅವರು ಇಂಥ ನೆರವಿಗಾಗಿಯೇ ಡ್ರೋನ್ ಖರೀದಿಸಿದ್ದಾರೆ.
ಮಗುವಿಗೆ ಹಾಲು ಕುಡಿಸುತ್ತಿದ್ದ ಬಾಣಂತಿ ಕುಸಿದು ಬಿದ್ದು ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nineteen =
Remember me
