ನವದೆಹಲಿ:ಲಡಾಖ್​ನ ಪೂರ್ವಭಾಗದ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ಚೀನಾ ಮತ್ತು ಭಾರತ ಯೋಧರು ಬಿರುಗಣ್ಣು ಬಿಟ್ಟುಕೊಂಡು ಕುಳಿತಿರುವ ಹಿನ್ನೆಲೆಯಲ್ಲಿ ಗಡಿಯುದ್ಧಕ್ಕೂ ಡ್ರೋನ್​ ಪಹರೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಅತಿಕ್ರಮಣದ ಮೇಲೆ ಹದ್ದಿನಕಣ್ಣು ಇಡುವುದು ಇದರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗಡಿ ಭಾಗದಲ್ಲಿ ಡ್ರೋನ್​ ಪಹರೆ ಹೆಚ್ಚಳಕ್ಕೆ ಅನುವು ಮಾಡಿಕೊಡುವಂತೆ ಹೆಚ್ಚಿನ ಸಂಖ್ಯೆಯ ಡ್ರೋನ್​ಗಳನ್ನು ನಿಯೋಜಿಸುವಂತೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಗೆ (ಎನ್​ಟಿಆರ್​ಒ) ಸೂಚಿಸಿದೆ. ಹೀಗೆ ಮಾಡುವುದರಿಂದ, ಯುದ್ಧದ ಪರಿಸ್ಥಿತಿಯ ಕುರಿತು ಹೆಚ್ಚು ಪಾರದರ್ಶಕ ಮಾಹಿತಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಭಾರತೀಯ ವೇಟ್‌ಲಿಫ್ಟಿಂಗ್ ಒಕ್ಕೂಟದಿಂದ ‘ಮೇಡ್ ಇನ್ ಚೀನಾ’ ಸಲಕರಣೆಗಳಿಗೆ ಬಹಿಷ್ಕಾರ
ಇಸ್ರೇಲ್​ ಡ್ರೋನ್​ಗಳ ಬಳಕೆ:ಕೇಂದ್ರ ಸರ್ಕಾರ ಇಸ್ರೇಲ್​ನಿಂದ ಖರೀದಿಸಿರುವ ಹೆರಾನ್​ ಮಧ್ಯಮ ಎತ್ತರದ ಡ್ರೋನ್​ಗಳನ್ನು ಸದ್ಯ ಬಳಸಲಾಗುತ್ತಿದೆ. ಇವುಗಳ ಪಹರೆ ಕಾರ್ಯಕ್ಕೆ ಎನ್​ಟಿಆರ್​ಒ ತಾಂತ್ರಿಕ ಸಹಕಾರ ಒದಗಿಸುತ್ತಿದೆ.
ಪಿಎಲ್​ಎ ಲೂಂಗ್​ ಎಂಬ ಶಸ್ತ್ರಸಜ್ಜಿತ ಡ್ರೋನ್​ನ ಪಡೆಯನ್ನು ರಚಿಸಿಕೊಂಡಿದೆ. ಆದರೆ, ಇದರ ಕಾರ್ಯಕ್ಷಮತೆಯ ಬಗ್ಗೆ ಅಷ್ಟೇನೂ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಕೂಡ ತನ್ನ ಸೇನಾಪಡೆಗೆ ಡ್ರೋನ್​ ಪಡೆಯನ್ನು ಸೇರ್ಪಡೆಗೊಳಿಸುವ ಚಿಂತನೆ ನಡೆಸಿದೆ. ಇದಕ್ಕಾಗಿ ಅದು ಇಸ್ರೇಲ್​ ಅಥವಾ ಅಮೆರಿಕದಿಂದ ಡ್ರೋನ್​ಗಳನ್ನು ಖರೀದಿಸುವ ಬಗ್ಗೆ ಆಲೋಚಿಸುತ್ತಿದೆ ಎನ್ನಲಾಗಿದೆ.
ಕರ್ಫ್ಯೂ ನಡುವೆ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 2 =
Remember me
