ನವದೆಹಲಿ:ಗುಡ್ಡಗಾಡು, ಒಳನಾಡು ಮುಂತಾದ ಸಾರಿಗೆ ಸಂಪರ್ಕ ಕಷ್ಟಸಾಧ್ಯವಾದ ಪ್ರದೇಶಗಳಿಗೆ ಡ್ರೋನ್​ ಮೂಲಕ ಕರೊನಾ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕಾನ್ಪುರ ನಡೆಸಿದ ಅಧ್ಯಯನದ ಆಧಾರದಲ್ಲಿ ಮಾನವರಹಿತ ವೈಮಾನಿಕ ವಾಹನ (ಯುಎವಿ) ಬಳಸಲು ಕೇಂದ್ರ ಮುಂದಾಗಿದೆ. ಇದಕ್ಕಾಗಿ ಬಿಡ್​ ಆಹ್ವಾನಿಸಿದೆ. ಆಯ್ದ ಸ್ಥಳಗಳಿಗೆ ಯುಎವಿ ಮೂಲಕ ಲಸಿಕೆ ಸರಬರಾಜು ಮಾಡಲು ಎಚ್​ಎಲ್​ಎಲ್​ ಇನ್​್ರಾ ಟೆಕ್​ ಸರ್ವೀಸಸ್​, ಭಾರತೀಯ ವೈದ್ಯಕಿಯ ಸಂಶೋಧನಾ ಮಂಡಳಿ (ಐಸಿಎಂಆರ್​) ಪರವಾಗಿ ಎಕ್ಸ್​ ಪ್ರೆಷನ್​ ಆ್​ ಇಂಟರೆಸ್ಟ್​ (ಇಒಐ) ಆಹ್ವಾನಿಸಿದೆ. ಎಚ್​ಎಲ್​ಎಲ್​ ಇನ್​್ರಾ ಟೆಕ್​, ಸರ್ಕಾರಿ ಸ್ವಾಮ್ಯದ ಎಚ್​ಎಲ್​ಎಲ್​ ಲ್​ೈಕೇರ್​ನ ಸಬ್ಸಿಡಿಯರಿ ಆಗಿದೆ. ಕರೊನಾ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡಿದ್ದರಿಂದ ಲಸಿಕೆ ಅಭಿಯಾನವನ್ನೂ ಅಲ್ಲಿಗೂ ತಲುಪಿಸುವುದು ಅಗತ್ಯವಾಗಿದೆ.ಆದ್ದರಿಂದ ಗುಡ್ಡಗಾಡು ಹಾಗೂ ಪ್ರಯಾಣ ಅಸಾಧ್ಯವಾದಂಥ ಪ್ರದೇಶಗಳಿಗೂ ಲಸಿಕೆ ತಲುಪಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಡ್ರೋನ್​ ಬಳಕೆಯ ಚಿಂತನೆ ನಡೆಸಲಾಗಿದೆ. ಇದುವರೆಗೆ ತೆಲಂಗಾಣ ಮಾತ್ರ ಲಸಿಕೆ ಸಾಗಿಸಲು ಯುಎವಿ ಬಳಸುವ ಆಲೋಚನೆ ನಡೆದಿದೆ.
ಮಾನದಂಡ* ಯುಎವಿಗೆ 35 ಕಿಲೋ ಮೀಟರ್​ ದೂರದವರೆಗೆ ಪ್ರಯಾಣಿಸಿ ಲಸಿಕೆ ಪೂರೈಸುವ ಸಾಮರ್ಥ್ಯವಿರಬೇಕು. ಅದು ಕನಿಷ್ಠ 100 ಮೀಟರ್​ ಎತ್ತರ ಹಾರಬಲ್ಲ ಸಾಮರ್ಥ್ಯ ಹೊಂದಿರಬೇಕು.* ಜೂನ್​ 22ರೊಳಗೆ ಬಿಡ್​ ಸಲ್ಲಿಸುವಂತೆ ಸೂಚಿಸಲಾಗಿದೆ.* ಯುಎವಿ ಕನಿಷ್ಠ ನಾಲ್ಕು ಕಿಲೋ ಗ್ರಾಂ ತೂಕದ ವಸ್ತುಗಳನ್ನು ಒಯ್ಯಬೇಕು. ಸಾಮಗ್ರಿಯನ್ನು ಸುರತವಾಗಿ ತಲುಪಿಸಿದ ನಂತರ ನಿರ್ದೇಶಿತ ಸ್ಥಳಕ್ಕೆ ಮರಳಬೇಕು.* ಯುಎವಿ ಟೇಕ್​ಆ್​ ಮತ್ತು ಲ್ಯಾಂಡಿಂಗ್​ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮಾರ್ಗಸೂಚಿ ಅನ್ವಯವಾಗುತ್ತದೆ. ಪ್ಯಾರಾಚೂಟ್​ ಆಧರಿತ ಡೆಲಿವರಿಗೆ ಆದ್ಯತೆ ಇಲ್ಲ.
18ರಿಂದ ಪರೀಾರ್ಥ ಹಾರಾಟಭಾರತದ ಪ್ರಥಮ ಅಧಿಕೃತ ಬಿಯಾಂಡ್​ ವಿಜುವಲ್​ ಲೈನ್​ ಆ್​ ಸೈಟ್​ (ಬಿವಿಎಲ್​ಒಎಸ್​) ವೈದ್ಯಕಿಯ ಡ್ರೋನ್​ ಡೆಲಿವರಿ ಪರೀಾರ್ಥ ಪ್ರಯೋಗ ಜೂನ್​ 18ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಆರಂಭವಾಗಲಿದೆ. ಸುಮಾರು 30ರಿಂದ 45 ದಿನ ಕಾಲ ಪರೀೆ ನಡೆಸಲಾಗುತ್ತದೆ. ಪರೀೆ ನಡೆಸಲು ಬೆಂಗಳೂರಿನ ಥ್ರಾಟಲ್​ ಏರೋಸ್ಪೇಸ್​ ಸಿಸ್ಟಂ (ಟಿಎಎಸ್​) ನೇತೃತ್ವದ ಕಂಪನಿಗಳ ಕೂಟಕ್ಕೆ ಡಿಜಿಸಿಎ ಅನುಮತಿ ನೀಡಿದೆ. ವಸ್ತುಗಳ ಸಾಗಾಟದ ಪರೀಾರ್ಥ ಹಾರಾಟ ನಡೆಸಲು 2020ರ ಮಾರ್ಚ್​ನಲ್ಲೇ ಟಿಎಎಸ್​ಗೆ ಅನುಮತಿ ಸಿಕ್ಕಿತ್ತು. ಆದರೆ, ಕರೊನಾ ಸಾಂಕ್ರಾಮಿಕತೆ ಉಲ್ಬಣಿಸಿದ್ದರಿಂದ ಸಂಬಂಧಪಟ್ಟ ಏಜೆನ್ಸಿಗಳಿಂದ ಅನುಮತಿ ಸಿಗುವುದು ವಿಳಂಬವಾಗಿತ್ತು. ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಈ ಪ್ರಯೋಗಕ್ಕೆ ಬೆಂಬಲ ನೀಡಿರುವುದಲ್ಲದೆ ಕೂಟದೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ಟ್ರಯಲ್​ ಅವಧಿಯಲ್ಲಿ ಸಾಗಿಸುವ ಔಷಧಗಳನ್ನು ನಾರಾಯಣ ಹೆಲ್ತ್​ ಪೂರೈಸಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
