ನವದೆಹಲಿ:ಇತ್ತಿಚೆಗೆ ಕೈಗೊಳ್ಳಲಾಗಿದ್ದ ಸಂಶೋಧನೆಯಲ್ಲಿ ಅಜೀರ್ಣತೆ ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆ ನಿವಾರಣೆಗಾಗಿ ಬಳಸುವ ಮದ್ದು, ಕರೊನಾ ಸೋಂಕನ್ನು ಪರಿಣಾಮಕಾರಿಯಾಗಿ ಗುಣಪಡಿಸಿದೆ ಎಂಬುದು ಖಚಿತಪಟ್ಟಿದೆ.
ಸಂಶೋಧಕರ ಪ್ರಕಾರ ಅರ್ಜೀಣತೆ ಸಮಸ್ಯೆ ನಿವಾರಣೆಗೆ ಕೊಡುವ ಫ್ಯಾಮೋಟಿಡೀನ್​ (Famotidine) ಮಾತ್ರೆ ಕೊಟ್ಟಾದ ನಂತರದಲ್ಲಿ ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರ ಸ್ಥಿತಿ ಉತ್ತಮಗೊಂಡಿದ್ದಾಗಿ ಹೇಳಲಾಗಿದೆ.
ವೈದ್ಯಕೀಯ ಜರ್ನಲ್​ ಗಟ್​ನಲ್ಲಿ ಪ್ರಕಟವಾಗಿರುವ ಈ ಮಹಾಪ್ರಬಂಧದ ಪ್ರಕಾರ ಹೋಂ ಕ್ವಾರಂಟೈನ್​ನಲ್ಲಿ ಇರುವವರಿಗೆ ಈ ಮಾತ್ರೆಯನ್ನು ಕೊಟ್ಟರೆ, ಕರೋನಾ ಚಿಕಿತ್ಸೆ ಪರಿಣಾಮಕಾರಿಯಾಗುತ್ತದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಅಜೀರ್ಣತೆಯ ಸಮಸ್ಯೆಯನ್ನು ಪರಿಹರಿಸಲು ಫ್ಯಾಮೋಟಿಡೀನ್​ ಮಾತ್ರೆಯನ್ನು ಕೊಡಲಾಗುತ್ತದೆ. ಸಮಸ್ಯೆಯ ತೀವ್ರತೆಯನ್ನು ಆಧರಿಸಿ 20ರಿಂದ 160 ಎಂ.ಜಿ.ವರೆಗಿನ ಮಾತ್ರೆಯನ್ನು ದಿನದಲ್ಲಿ ನಾಲ್ಕು ಬಾರಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ವಿಶೇಷವಾಗಿ ಹುಳಿತೇಗು ಮತ್ತು ಎದೆಉರಿತದಂಥ ಸಮಸ್ಯೆಯನ್ನೂ ನಿಯಂತ್ರಿಸಲು ಇದು ಉತ್ತಮ ಮದ್ದಾಗಿದೆ.ಈ ಮದ್ದಿನ ಪರೀಕ್ಷೆಗಾಗಿ ಅಮೆರಿಕದ ಕೋಲ್ಡ್​ ಸ್ಪ್ರಿಂಗ್​ ಹಾರ್ಬರ್​ ಲ್ಯಾಬೋರೇಟರಿ ಕ್ಯಾನ್ಸರ್​ ಸೆಂಟರ್​ ಕರೊನಾ ಸೋಂಕಿಗೆ ತುತ್ತಾಗಿದ್ದ 10 ಮಂದಿಯನ್ನು (6 ಪುರುಷರು, ನಾಲ್ವರು ಮಹಿಳೆಯರು) ಆಯ್ಕೆ ಮಾಡಿಕೊಂಡಿದ್ದರು.
ಇದನ್ನೂ ಓದಿ:ಬಿಸಿಲಲ್ಲಿ ಒಣಗೋದಕ್ಕೂ ಕರೊನಾ ತಗಲೋದಕ್ಕೂ ಸಂಬಂಧ ಇದೆ….!
ಕೆಮ್ಮು, ಉಸಿರಾಟದ ಸಮಸ್ಯೆ, ಸುಸ್ತು, ತಲೆನೋವು ಮತ್ತು ರುಚಿ ಹಾಗೂ ವಾಸನೆ ಗ್ರಹಣ ಶಕ್ತಿ ಕುಂದಿದ್ದವರನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಇವರೆಲ್ಲರಿಗೂ 11 ದಿನಗಳ ಕಾಲ ದಿನಕ್ಕೆ 3 ಬಾರಿಯಂತೆ 80 ಎಂ.ಜಿ. ಫ್ಯಾಮೋಟಿಡೀನ್​ ಮಾತ್ರೆಗಳನ್ನು ಕೊಡಲಾಯಿತು. ಈ ಮಾತ್ರೆಯನ್ನು ಸೇವಿಸಿದ ಎಲ್ಲ 10 ಮಂದಿ 24ರಿಂದ 48 ಗಂಟೆಗಳ ಒಳಗೆ ತಮ್ಮ ದೇಹದ ಸ್ಥಿತಿ ಸುಧಾರಿಸಲು ಆರಂಭವಾಯಿತು. 14ನೇ ದಿನದ ವೇಳೆಗೆ ಎಲ್ಲವೂ ಗುಣವಾಗಿದ್ದವು ಎಂದು ಹೇಳಿದ್ದಾಗಿ ಸಂಶೋಧಕರು ತಿಳಿಸಿದ್ದಾರೆ. ಈ ಔಷಧವು ಹೊಟ್ಟೆಯಲ್ಲಿ ಬಿಡುಗಡೆಯಾಗುವ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡಿತ್ತು ಎಂದು ವಿವರಿಸಿದ್ದಾರೆ.
ಪ್ರಾಥಮಿಕ ಹಂತದಲ್ಲಿ ಫ್ಯಾಮೋಟಿಡೀನ್​ ಮಾತ್ರೆ ಕರೊನಾ ಸೋಂಕನ್ನು ಗುಣಪಡಿಸಿದೆ ಅಂದ ಮಾತ್ರಕ್ಕೆ ಕೋವಿಡ್​ ಚಿಕಿತ್ಸೆಯಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಬಹುದು ಎಂಬುದು ಅರ್ಥವಲ್ಲ. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ಅಮಾನವೀಯ ಕೃತ್ಯ: 3 ವರ್ಷದ ಮಗಳ ಗುಪ್ತಾಂಗಕ್ಕೆ ಸಿಗರೇಟ್ ಸುಟ್ಟ ತಾಯಿಯ ಲವರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 19 =
Remember me
