ಕುಂದಾಪುರ:ಅಕ್ರಮ ಚಟುವಟಿಕೆಯ ಜಾಲ ಬಿದಿರಿನ ಬೊಂಬನ್ನೂ ಬಿಟ್ಟಿಲ್ಲ. ಚಾಲಾಕಿ ಖದೀಮರು ಬಿದಿರು ಬೊಂಬು ಸಾಗಾಟ ಸೋಗಿನಲ್ಲಿ ಗಾಂಜಾ ತರುತ್ತಿರುವಾಗ ಉಡುಪಿ ಡಿಸಿಐಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಉಡುಪಿ ಡಿಸಿಐಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಬ್ರಹ್ಮಾವರದ ಹೇರೂರು ಬಳಿ ಕಂಟೇನರ್ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ದೊಡ್ಡ ಪ್ರಮಾಣದ ಬಿದಿರಿನಲ್ಲಿ ಗಾಂಜಾವನ್ನು ಅಡಗಿಸಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿರಿಡಿಜೆ ಹಳ್ಳಿ ಗಲಭೆ; ಸಿಸಿಬಿ ಬಂಧಿತ ಸಯ್ಯದ್ ಸಮಿಯುದ್ದೀನ್ ಮಿಸ್ಸಿಂಗ್​… ಹುಡುಕಿಕೊಡಿ!
ಉತ್ತರ ಪ್ರದೇಶದಿಂದ ಗಾಂಜಾವನ್ನು ಬಿದಿರಿನ ಬೊಂಬಿನ ಒಳಗೆ ತುಂಬಿ ಕಂಟೇನರ್‌ ಲಾರಿಯಲ್ಲಿ ಕರಾವಳಿ ಹಾಗೂ ಕೇರಳ ಭಾಗಗಳಿಗೆ ಸಾಗಾಟ ಮಾಡಲಾಗುತ್ತಿತ್ತು. ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದು, ಬಿದಿರಿನ ಬೊಂಬಿನಲ್ಲಿ ಪತ್ತೆಯಾದ 49 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಮತ್ತು ಆತನ ಸಹಚರನನ್ನು ಬಂಧಿಸಿದ್ದಾರೆ.
ಸದ್ಯ ಪ್ರಕರಣವನ್ನು ಉಡುಪಿ ಸೆನ್ ಠಾಣೆಗೆ ವರ್ಗಾಯಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಡಿಸಿಐಬಿ ಇನ್​ಸ್ಪೆಕ್ಟರ್ ಮಂಜಪ್ಪ, ಎಎಸ್‌ಐ ರವಿಚಂದ್ರ, ಸಂತೋಷ್ ಕುಂದರ್, ರಾಮು ಹೆಗ್ಡೆ, ದಯಾನಂದ್, ರಾಜ್‌ಕುಮಾರ್, ಚಂದ್ರ ಶೆಟ್ಟಿ, ಸುರೇಶ್, ರಾಘವೇಂದ್ರ ಮತ್ತು ಶಿವಾನಂದ ಕಾರ್ಯಾಚರಣೆ ತಂಡದಲ್ಲಿದ್ದರು.
video/ ತರಕಾರಿ-ಹಣ್ಣು ತುಂಬುವ ಕ್ರೇಟ್​ನಲ್ಲಿದೆ 85 ಕೆ.ಜಿ. ಗಾಂಜಾ!

ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

ಪೊಲೀಸ್​ ಕಮಿಷನರ್​ಗೆ ಡಿಕೆಶಿ ಅವಾಜ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − 6 =
Remember me
