ಮುಂಬೈ:ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​​ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಪ್ರಕರಣದಲ್ಲಿ ಆರ್ಯನ್​ ಖಾನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ಚಿಟ್​​ ​​ ನೀಡಿದ್ದಾರೆ. ಕಳೆದ ಅಕ್ಟೋಬರ್​ 30 ರಂದು ಹಡಗಿನಲ್ಲಿ ಪಾರ್ಟಿಯೊಂದರಲ್ಲಿ ಆರ್ಯನ್​ ಖಾನ್​​ನನ್ನು ಬಂಧಿಸಲಾಗಿತ್ತು.
ಆರ್ಯನ್​ ಬಳಿ ಡ್ರಗ್ಸ್​​​ ಇದೆ ಎಂದು ಅಂದು ಬಂಧಿಸಿದ ಅಧಿಕಾರಿಗಳು ಸಾಕ್ಷ್ಯ ಸಮೇತವೇ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದರು. ಈ ಸಂಬಂಧ 22 ದಿನ ಜೈಲು ಶಿಕ್ಷೆಯನ್ನೂ ಸಹ ಆರ್ಯನ್​ ಅನುಭವಿಸಿದ್ದರು. ಇದೀಗ ಅಧಿಕಾರಿಗಳ ಹೇಳಿಕೆ ಆರ್ಯನ್​ ಖಾನ್​ಗೆ ಬಿಗ್​ ರಿಲೀಫ್​ ಕೊಟ್ಟಿದೆ.
ಆರ್ಯನ್​ ಖಾನ್​ ವಿರುದ್ಧ ಯಾವ ಸಾಕ್ಷ್ಯ ಆಧಾರಗಳು ಇಲ್ಲ, ಅವರು ಅಂದು ಪಾರ್ಟಿಯಲ್ಲಿ ಭಾಗವಹಿಸಿದ್ದರಷ್ಟೇ, ಡ್ರಗ್ಸ್​ ತೆಗೆದುಕೊಂಡಿರಲಿಲ್ ಎಂದು ಹೇಳಿದ್ದಾರೆ. ಸದ್ಯ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್ಯನ್​ ಹೆಸರಿಲ್ಲ. ಇದರಿಂದ ಶಾರೂಕ್​ ಖಾನ್​ ಕೂಡ ನಿರಾಳರಾಗಿದ್ದಾರೆ.
ಇನ್ನು ಪ್ರಕರಣದ ಪ್ರಮುಖ ತನಿಖೆ ಕೈಗೊಂಡಿದ್ದ ಸಮೀರ್​ ವಾಂಖೆಡೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.(ಏಜೆನ್ಸೀಸ್​)
ವಿಶ್ವದ ಶ್ರೀಮಂತ ಹಳ್ಳಿಗಳಲ್ಲಿ ಭಾರತದ ಈ ಗ್ರಾಮಕ್ಕಿದೆ ಸ್ಥಾನ: ಪ್ರತಿಯೊಬ್ಬರ ಖಾತೆಯಲ್ಲಿದೆ 15 ಲಕ್ಷ ರೂ.ಹಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
