ಬೆಂಗಳೂರು:ಡ್ರಗ್ಸ್​ ದಂಧೆಗೆ ಕಡಿವಾಣ ಹಾಕಲು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರ ಕೈಗೆ ರಾಜ್ಯ ರಾಜಧಾನಿಯಲ್ಲಿ ಮೂವರು ಡ್ರಗ್ಸ್ ಪೆಡ್ಲರ್​ಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ಹೊರರಾಜ್ಯದಿಂದ ಮಾದಕ ವಸ್ತು ಸಾಗಾಣೆ ಮಾಡಿಕೊಂಡು ನಗರದಲ್ಲೆಡೆ ಸರಬರಾಜು ಮಾಡುತ್ತಿದ್ದ ಕೇರಳ ಮೂಲದ ಸುಬ್ರಮಣಿ (21), ವಿದೂಸ್​ (31) ಹಾಗೂ ಶೆಜಿನ್​ (21) ಎಂಬುವವರನ್ನು ಬಂಧಿಸಲಾಗಿದೆ. ಅಂದಹಾಗೆ ಇವರು ಡ್ರಗ್ಸ್ ಸಾಗಣೆಗೆ ಬಳಸಿದ್ದು ಕೊಬ್ಬರಿ ಎಣ್ಣೆ ಬಾಟಲಿಗಳನ್ನು. ಅವರ ದಂಧೆಯ ಜಾಲ ಹೇಗಿತ್ತು ಎಂಬುದರ ಡಿಟೇಲ್ಸ್​ ಇಲ್ಲಿದೆ.ಇದನ್ನೂ ಓದಿರಿಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳು!
ಆರೋಪಿ ವಿದೂಸ್​ ಲಂಡನ್​ನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ್ದ. ಈ ಹಿಂದೆ ನಗರದ ಸಾಫ್ಟ್ವೇರ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಸುಬ್ರಮಣಿ ಮತ್ತು ಶೆಜಿನ್​ ಎಂಬುವರ ಸ್ನೇಹವಾಗಿತ್ತು. ವಾರಂತ್ಯದಲ್ಲಿ ಪಾರ್ಟಿ ಮಾಡುತ್ತಿದ್ದರು. ಮಾದಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದು ಆರೋಪಿಗಳಿಗೆ ಗೊತ್ತಾಗಿತ್ತು. ಮೂವರು ಸೇರಿ ದಂಧೆಯಲ್ಲಿ ತೊಡಗಿದ್ದರು ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಿಗೆ ಪಾರ್ಟಿ ವೇಳೆ ಆಂಧ್ರದ ವಿಶಾಖಪಟ್ಟಣ ಮೂಲದ ಡ್ರಗ್ಸ್​ ಪೆಡ್ಲರ್​ನ ಪರಿಚಯವಾಗಿತ್ತು. ಆತನಿಂದ ಹ್ಯಾಶಿಶ್​ ಆಯಿಲ್​ ಮತ್ತು ಗಾಂಜಾ ಖರೀದಿಸಿ ಕೊಬ್ಬರಿ ಎಣ್ಣೆ ಬಾಟಲ್​ಗಳಲ್ಲಿ ಹ್ಯಾಶಿಶ್​ ಆಯಿಲ್​ ತುಂಬಿಕೊಂಡು ಬಸ್​ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ಆನ್​ಲೈನ್​ ಮೂಲಕವೇ ವ್ಯವಹಾರ ಕುದಿರಿಸುತ್ತಿದ್ದ ಇವರಿಗೆ ನಗರದ ಪ್ರತಿಷ್ಠಿತ ಕಾಲೇಜುಗಳ ಕೆಲ ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಮತ್ತು ಉದ್ಯಮಿಗಳೇ ಕಾಯಂ ಗ್ರಾಹಕರು.
ಕೆ.ಆರ್​.ಪುರಂನಲ್ಲಿ ನೆಲೆಸಿದ್ದ ಆರೋಪಿಗಳು ವಿಶಾಖಪಟ್ಟಣದಿಂದ ತರುತ್ತಿದ್ದ ಮಾದಕ ವಸ್ತುವನ್ನು ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಚಿಕ್ಕ ಪ್ಲಾಸ್ಟಿಕ್​ ಬಾಟಲಿಗಳಿಗೆ ಗ್ರಾಂ ಲೆಕ್ಕದಲ್ಲಿ ಪ್ಯಾಕ್​ ಮಾಡಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ. ಇವರ ಸಂಪರ್ಕದಲ್ಲಿದ್ದ ಇತರ ಡ್ರಗ್ಸ್​ ಪೆಡ್ಲರ್​ಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

ನನಗೆ ರಾಗಿಣಿ ಯಾರೆಂದು ಗೊತ್ತಿಲ್ಲ; ಡಿಸಿಎಂ ಕಾರಜೋಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 1 =
Remember me
